ನಿರ್ಜನ ಪ್ರದೇಶದಲ್ಲಿ ಪತ್ನಿಯ ಕೊಲೆ ಮಾಡಿದ್ದ
ಪತಿ ಸೇರಿ ಇಬ್ಬರ ಬಂಧನ

Social Share

ಬೆಂಗಳೂರು, ಜು.12- ಪತ್ನಿಯ ನಡತೆ ಸರಿ ಇಲ್ಲವೆಂದು ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆಸಿಕೊಂಡು ಕೊಲೆ ಮಾಡಿ ಸುಟ್ಟು ಹಾಕಿದ ಪ್ರಕರಣವನ್ನು ಭೇದಿಸಿರುವ ಕೆಂಗೇರಿ ಠಾಣೆ ಪೊಲೀಸರು ಆರೋಪಿ ಪತಿ ಹಾಗೂ ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

ಮೂಲತಃ ಯಾದಗಿರಿ ಜಿಲ್ಲೆಯ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ ಅಲಿಯಾಸ ಮೊಹಮ್ಮದ್ ರಫೀಕ್(29) ಜೆಸಿಬಿ ಚಾಲಕ. ಮತ್ತು ದೊಡ್ಡಬಳ್ಳಾಪುರ ತಾ. ಕರೀಂ ಸೊಣ್ಣೇನಹಳ್ಳಿ ಗ್ರಾಮದ ಸ್ನೇಹಿತ ಪ್ರಜ್ವಲ್(21) ಬಂಧಿತರು.

ಕೆಂಗೇರಿ ಉಪನಗರದ ಸನ್‍ಸಿಟಿಯಲ್ಲಿ ಮೊಹಮ್ಮದ್ ಮಂಜೂರ್ ಅಹ್ಮದ್ ಹಣಗಿ- ನಗೀನಾ ಖಾನಂ ದಂಪತಿ ವಾಸವಾಗಿರುತ್ತಾರೆ ನಡತೆ ಸರಿಯಿಲ್ಲವೆಂದು ಆಗಾಗ್ಗೆ ಪತ್ನಿಯೊಂದಿಗೆ ಮೊಹಮ್ಮದ್ ಜಗಳವಾಡುತ್ತಿದ್ದನು. ಜು. 2ರಂದು ರಾತ್ರಿ ಪತ್ನಿಯನ್ನು ಕೊಲೆ ಮಾಡಲು ಸಂಚು ರೂಪಿಸಿ ತನಗೆ ಸಹಾಯ ಮಾಡುವಂತೆ ಪ್ರಜ್ವಲ್‍ನ್ನು ಕೇಳಿದ್ದಾನೆ.

ಅಂದು ರಾತ್ರಿ ಕೆಂಗೇರಿಯ ವಿಶ್ವೇಶ್ವರಯ್ಯ ಬಡಾವಣೆ, ನೈಸ್ ಬಿಡ್ಜ್ ಸಮೀಪದ ಧನ ನಾಯಕನ ಹಳ್ಳಿ ಕಡೆಗೆ ಹೋಗುವ ನಿರ್ಜನ ಪ್ರದೇಶದ ಬಳಿ ಪತ್ನಿಯನ್ನು ಕರೆಸಿಕೊಂಡಿದ್ದಾನೆ. ಏನೋ ಮಾತನಾಡಲು ಕರೆದಿರಬಹುದೆಂದು ನಗೀನಾ ಖಾನಂ ಹೋಗುತ್ತಿದ್ದಂತೆ ರಾಡಿನಿಂದ ತಲೆಗೆ ಹೊಡೆದು ಕೊಲೆ ಮಾಡಿ ನಂತರ ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ.
ನಂತರ ಆರೋಪಿ ಮೊಹಮದ್ ತನ್ನ ಚಹರೆ ಯಾರಿಗೂ ಗೊತ್ತಾಗಬಾರದೆಂದು ತಲೆ ಬೋಳಿಸಿಕೊಂಡು ಬಿಜಾಪುರಕ್ಕೆ ಪರಾರಿಯಾಗಿದ್ದ.

ಮಾರನೇ ದಿನ ಜು.3ರಂದು ಬೆಳಗ್ಗೆ 11.15ರ ಸುಮಾರಿನಲ್ಲಿ ಧನನಾಯಕನ ಹಳ್ಳಿ ಕಡೆಗೆ ಹೋಗುವ ರಸ್ತೆ ಪಕ್ಕದ ನಿರ್ಜನ ಪ್ರದೇಶದ ಹೊಂಗೆ ಮರದ ಕೆಳಗೆ ಪೆÇದೆಯಲ್ಲಿ ಮಹಿಳೆ ಶವವನ್ನು ಗಮನಿಸಿ ಮೋಹನ್ ಕುಮಾರ್ ಎಂಬುವರು ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದರು.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮೃತ ಮಹಿಳೆಯ ಚಹರೆ ಪತ್ತೆಗೆ ಹಾಗೂ ವಾರಸುದಾರರ ಪತ್ತೆ ಬಗ್ಗೆ ಮತ್ತು ಕೊಲೆ ಮಾಡಿರುವ ಆರೋಪಿಗಳಿಗಾಗಿ 5 ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಈ ತಂಡಗಳು ಹಲವು ಆಯಾಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿ ಮೃತಳ ಭಾವಚಿತ್ರ ಹಾಗೂ ಚಹರೆಯನ್ನು ಪತ್ತೆ ಹಚ್ಚಿ ಆಕೆ ಹೆಸರು ನಗೀನಾ ಖಾನಂ ಎಂಬುದನ್ನು ಗುರುತಿಸಲಾಯಿತು.

ನಗೀನಾ ಖಾನಂ ವಾಸ ಮಾಡುತ್ತಿದ್ದ ಸನ್‍ಸಿಟಿ ಗೆ ಹೋಗಿ ಮನೆಯನ್ನು ಪತ್ತೆ ಮಾಡಿ ಅಕ್ಕ-ಪಕ್ಕದವರನ್ನು ವಿಚಾರಿಸಿ ಮೃತಳ ವಾರಸುದಾರರನ್ನು ಸಂಪರ್ಕಿಸಿ ವಿಚಾರಣೆ ಮಾಡಿದಾಗ ನನ್ನ ಮಗಳನ್ನು ಆಕೆಯ ಗಂಡ ಮೊಹಮದ್ ಕೊಲೆ ಮಾಡಿ ಸುಟ್ಟು ಹಾಕಿರುತ್ತಾನೆಂದು ತಿಳಿಸಿದ್ದಾರೆ.

ಈ ಮಾಹಿತಿ ಮೇರೆಗೆ ಪೊಲೀಸರು ರಾಜರಾಜೇಶ್ವರಿ ಆಸ್ಪತ್ರೆಗೆ ತೆರಳಿ ಮೃತಳ ಶವ ಪರೀಕ್ಷೆಯ ವರದಿಯನ್ನು ಪಡೆದು ಮೃತ ದೇಹವನ್ನು ಆಕೆಯ ತಂದೆ ಗೌಸ್ ಫೀರ್ ವಶಕ್ಕೆ ನೀಡಿದ್ದಾರೆ. ತನಿಖೆಯನ್ನು ಮುಂದುವರೆಸಿದ ಪೊಲೀಸರು ಆರೋಪಿ ಮೊಹಮದ್ ಹಾಗೂ ಆತನ ಸ್ನೇಹಿತ ಪ್ರಜ್ವಲ್‍ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ವಿಭಾಗದ ಉಪಪೊಲೀಸ್ ಆಯುಕ್ತ ಲಕ್ಷ್ಮಣ್ ಬಿ. ನಿಂಬರಗಿ ಮಾರ್ಗದರ್ಶನದಲ್ಲಿ ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಕೋದಂಡ ರಾಮ್ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ವಸಂತ್, ಪಿಎಸ್‍ಐ ರಾಜಶೇಖರಯ್ಯ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article