Monday, October 14, 2024
Homeಜಿಲ್ಲಾ ಸುದ್ದಿಗಳು | District Newsತುಮಕೂರು | Tumakuruಪತಿ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ

ಪತಿ ಆತ್ಮಹತ್ಯೆ ಮಾಡಿಕೊಂಡ ಮರುದಿನವೇ ಗಂಡು ಮಗುವಿಗೆ ಜನ್ಮ ನೀಡಿದ ಪತ್ನಿ

Wife who gave birth to a baby day after her husband hanged herself

ಪಾವಗಡ,ಆ.2- ಪತಿ ಆತಹತ್ಯೆ ಮಾಡಿಕೊಂಡ ಮರುದಿನ ಮೃತನ ಪತ್ನಿ ಗಂಡು ಮಗುವಿಗೆ ಜನ ನೀಡಿರುವಂತಹ ಅಪರೂಪ ಘಟನೆ ಇಲ್ಲಿ ನಡೆದಿದೆ.

ಪಟ್ಟಣದ ಕಾಳಿದಾಸ ನಗರದ ನಿವಾಸಿ ಅಭಿಷೇಕ್‌(26)ಎಂಬ ಯುವಕ ಮನನೊಂದು ಕಳೆದ ಸೆ.30ರಂದು ರಾತ್ರಿ ತಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಈ ವೇಳೆ ಅಭಿಷೇಕ್‌ ಪತ್ನಿ ರಜಿಯಾ ಭಾನು ತುಂಬು ಗರ್ಭಿಣಿಯಾಗಿದ್ದು ಮಂಗಳವಾರ ಮಧ್ಯಾಹ್ನ 1 ಗಂಟೆಯ ಸಂದರ್ಭದಲ್ಲಿ ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ ನೀಡಿದ್ದಾರೆ,

ಪಾವಗಡ ಪಟ್ಟಣದಲ್ಲಿ ಏರ್ಟೆಲ್‌ ಕಂಪನಿಯಲ್ಲಿ ಸಿಮ್‌ ವಿತರಿಸುವ ಕೆಲಸ ನಿರ್ವಹಿಸುತ್ತಿದ್ದ ಅಭಿಷೇಕ್‌ ಸೋಮವಾರ ಸಂಜೆ ಗೆಳೆಯರ ಜೊತೆ ಗಣಪತಿ ವಿಸರ್ಜನೆಯಲ್ಲಿ ಕುಣಿದು ಕುಪ್ಪಳಿಸಿದ್ದು ನಂತರ ರಾತ್ರಿ ಮನೆಗೆ ಹೋಗಿ ಆತಹತ್ಯೆ ಮಾಡಿಕೊಂಡಿದ್ದು ಸ್ನೇಹ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಘಟನಾ ಸ್ಥಳಕ್ಕೆ ಪಾವಗಡ ಪೊಲೀಸ್‌‍ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಗಳನ್ನು ಕೈಗೊಂಡ ನಡುವೆಯೇ ಪಟ್ಟಣದಲ್ಲಿ ಮೃತ ಅಭಿಷೇಕನ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ ಆತ ಪತ್ನಿ ಮಗುವಿಗೆ ಜನ ನೀಡಿದ್ದಾಳೆ.

RELATED ARTICLES

Latest News