ಕಾಡುಪ್ರಾಣಿಗಳಿಗೂ ಪುನರ್ವಸತಿ ಕೇಂದ್ರ ತೆರೆಯಲು ಮುಂದಾದ ಸರ್ಕಾರ

Social Share

ಬೆಂಗಳೂರು, ಜ.23- ರಾಜ್ಯದಲ್ಲಿ ಹಲವು ತಿಂಗಳಿನಿಂದ ಕಾಡುಪ್ರಾಣಿಗಳಿಂದ ಉಂಟಾಗುತ್ತಿರುವ ಹಾವಳಿಯನ್ನು ತಪ್ಪಿಸಲು ರಾಜ್ಯ ಸರ್ಕಾರ ಶೀಘ್ರದಲ್ಲೇ ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಮೂರು ದಿನಗಳ ಹಿಂದೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಹೊರಳಹಳ್ಳಿ ಗ್ರಾಮದ 11 ವರ್ಷದ ಬಾಲಕ ಜಯಂತ್ ಮೇಲೆ ಚಿರತೆ ದಾಳಿ ನಡೆಸಿ ಹತ್ಯೆ ಮಾಡಿತ್ತು.

ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾದ ಕಾರಣ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಕಾಡುಪ್ರಾಣಿಗಳು ಮತ್ತು ಮಾನವ ನಡುವೆ ಉಂಟಾಗುತ್ತಿರುವ ಸಂಘರ್ಷವನ್ನು ತಪ್ಪಿಸಲು ಪುನರ್ವಸತಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ.

ಮೈಸೂರು, ರಾಮನಗರ, ತುಮಕೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ ಒಂದು ವರ್ಷದಿಂದ ಚಿರತೆಗಳಿಂದ ಮಾನವ-ಪ್ರಾಣಿ ಸಂಘರ್ಷ ಹೆಚ್ಚಿದ್ದು, ಕೊಡಗು, ಹಾಸನ ಮತ್ತು ಮೈಸೂರು ಭಾಗಗಳಲ್ಲಿ ಆನೆಗಳ ಸಂಘರ್ಷ ಹೆಚ್ಚಾಗಿದ್ದು ಅನೇಕರು ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಸೆರೆಹಿಡಿಯಲಾದ ಚಿರತೆಗಳು, ಆನೆಗಳು ಮತ್ತಿತರ ಕಾಡು ಪ್ರಾಣಿಗಳನ್ನು ಪುನರ್ವಸತಿ ಕೇಂದ್ರದಲ್ಲಿ ತಂದು ಬಿಡಲಾಗುತ್ತದೆ. ಇದಕ್ಕಾಗಿ ವಿನ್ಯಾಸ ಮತ್ತು ಮಾದರಿಯನ್ನು ಅಂತಿಮಗೊಳಿಸಲಾಗಿದೆ. ಇನ್ನೊಂದು ವಾರದಲ್ಲಿ ಇದು ಸಿದ್ಧವಾಗಲಿದೆ ಎಂದು ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಮಾಹಿತಿ ನೀಡಿದ್ದಾರೆ.

ಪುನರ್ವಸತಿ ಕೇಂದ್ರಗಳ ನಿರ್ಮಾಣಕ್ಕೆ ಬೇಕಾಗುವ ಅಂದಾಜು ಪಟ್ಟಿಯನ್ನು ಸಿದ್ದಪಡಿಸಲಾಗಿದ್ದು, ಒಂದೆರಡು ದಿನಗಳಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಪ್ರಕ್ರಿಯೆ ಒಂದು ವಾರದೊಳಗೆ ಅಂತಿಮಗೊಳ್ಳಲಿದೆ ಎಂದು ಹೇಳಿದ್ದಾರೆ.

ಇಲ್ಲಿಯವರೆಗೆ ಅರಣ್ಯ ಪ್ರದೇಶಗಳಲ್ಲಿ ಸಂಘರ್ಷದ ಸಂದರ್ಭಗಳಿಂದ ಸೆರೆಹಿಡಿದ ಕಾಡುಪ್ರಾಣಿಗಳನ್ನು ಬಿಡುಗಡೆ ಮಾಡಲಾಗಿದೆ. ಮೈಸೂರು ಸಮೀಪದ ಕೂರ್ಗಳ್ಳಿ ಮತ್ತು ಬೆಂಗಳೂರಿನ ಬನ್ನೇರುಘಟ್ಟ ಕೇಂದ್ರಗಳು ಈಗಾಗಲೇ ಭರ್ತಿಯಾಗಿವೆ ಎಂದು ಮಾಹಿತಿ ನೀಡಿದರು.

ಕೊಡಗಿನಲ್ಲಿ ಹೆಚ್ಚಿದ ಹಾವಳಿ: ಜಿಲ್ಲೆಯ ಅರಣ್ಯ ಪ್ರದೇಶದ ಗಡಿಯಲ್ಲಿರುವ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿ ಇದೆ. ಹುಲಿ ಹಾವಳಿ ಕುಟ್ಟ ವ್ಯಾಪ್ತಿಯಲ್ಲಿ ಹಾಗೂ ಆನೆ ಹಾವಳಿ ಪಾಲಿಬೆಟ್ಟ, ತಿತಿಮತಿ ವ್ಯಾಪ್ತಿಯಲ್ಲಿ ಕಂಡುಬರುತ್ತಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲೂ ಕಾಡು ಪ್ರಾಣಿಗಳ ಉಪಟಳ ಹೆಚ್ಚಾಗಿದೆ. ಇತ್ತೀಚೆಗೆ ಚಿರತೆ ಹಾವಳಿಯೂ ಹೆಚ್ಚಾಗಿದೆ.

ಮಲೆನಾಡಲ್ಲಿ ಮಾಮೂಲು: ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರಿನಲ್ಲಿ ವನ್ಯಜೀವಿಗಳು ನಾಡಿನತ್ತ ಮುಖಮಾಡುತ್ತಿವೆ. ಮೂಡಿಗೆರೆ ತಾಲೂಕಿನಲ್ಲಿ ಆನೆ, ಕಾಡುಕೋಣಗಳು ಕಾಫಿ ತೋಟಕ್ಕೆ ದಾಳಿ ಇಡುವುದು ಸಾಮಾನ್ಯವಾಗಿಬಿಟ್ಟಿದೆ. ಗ್ರಾಮಗಳಿಗೂ ಕಾಡುಕೋಣಗಳು ಲಗ್ಗೆ ಇಡುತ್ತಿವೆ.

ಮಲೆನಾಡು ಭಾಗದಲ್ಲಿ 40 ಆನೆಗಳು ಗುಂಪಾಗಿದ್ದು, ಮೂರು ಆನೆಗಳು ಗುಂಪಿನಿಂದ ಆಗಾಗ್ಗೆ ಚದುರುತ್ತವೆ. ಗುಂಪಿನಲ್ಲಿ ಹೋಗುವಾಗ ಯಾವ ಆನೆಗಳು ಬೆಳೆ ನಾಶ ಅಥವಾ ಊರು ಪ್ರವೇಶಿಸುವ ಸಾಹಸ ಮಾಡುವುದಿಲ್ಲ. ಆದರೆ ಆಹಾರ ಅರಸಿ ಗುಂಪಿನಿಂದ ಬೇರ್ಪಡುವ ಮೂರು ಸಲಗಗಳು ಮಾತ್ರ ವಿಪರೀತ ಕಿರಿಕಿರಿ ಉಂಟು ಮಾಡುತ್ತಿವೆ. ಚಾರ್ಮುಡಿ ಘಾಟಿಯಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ವನ್ಯಪ್ರಾಣಿಗಳು ರಸ್ತೆ ಮೇಲೆ ವಿಹರಿಸುತ್ತಿವೆ.

ಹಾಸನ ಜಿಲ್ಲೆಯ ಆಲೂರು ಹಾಗೂ ಸಕಲೇಶಪುರದ ಗ್ರಾಮಗಳಲ್ಲಿ ಆನೆ ಹಾವಳಿ ಸಾಮಾನ್ಯ ಎನಿಸಿದೆ. ಮೂಡಿಗೆರೆ ತಾಲೂಕಿನಲ್ಲಿ ದನಗಳ ಕಣ್ಮರೆ ಹಾಗೂ ವಿವಿಧೆಡೆ ಹುಲಿ ಹೆಜ್ಜೆ ಕಾಣಿಸಿಕೊಳ್ಳುತ್ತಿರುವುದು ಜನರನ್ನು ಭಯಕ್ಕೀಡು ಮಾಡಿವೆ.

ದೇವರ ಉತ್ಸವದಲ್ಲಿ ಕ್ರೇನ್ ಮಗುಚಿಬಿದ್ದು ನಾಲ್ವರ ಸಾವು

ಚಾಮರಾಜನಗರದಲ್ಲಿ ಚಿರತೆ ಹಾವಳಿ: ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ದಾಳಿ ಪ್ರಕರಣಗಳು, ಜಾನುವಾರುಗಳನ್ನು ಕೊಲ್ಲುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಒಂದೂವರೆ ತಿಂಗಳ ಕಾಲ ರೈತರ ಜಾನುವಾರುಗಳನ್ನು ಕೊಲ್ಲುತ್ತಿದ್ದ ಹುಲಿಯೊಂದನ್ನು ಇತ್ತೀಚೆಗೆ ಅರಣ್ಯ ಇಲಾಖೆ ಸೆರೆಹಿಡಿದಿದ್ದರೆ, ಚೌಡಹಳ್ಳಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ.

ಕಳೆದ ವಾರ ಶಾಸಕ ನಿರಂಜನಕುಮಾರ್ ಜಮೀನಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಚಿರತೆಯೊಂದು ಸೆರೆಯಾಗಿತ್ತು. ಓಂಕಾರ್ ವಲಯದಲ್ಲಿ ಆನೆಗಳ ದಾಳಿ ಪ್ರಕರಣಗಳು ಹೆಚ್ಚಾಗಿದ್ದರೆ ಕುಂದಕೆರೆ ವಲಯದ ಅರಣ್ಯದಿಂದ ಹೊರಬಂದ ಹುಲಿ ಸುಮಾರು 17 ಹಸು, ಅಸಂಖ್ಯ ಮೇಕೆಗಳನ್ನು ಕೊಂದುಹಾಕಿತ್ತು.

ಮಂಡ್ಯದಲ್ಲಿ ಚಿರತೆ-ಆನೆ ಕಾಟ: ಮಂಡ್ಯ ಜಿಲ್ಲೆಯಲ್ಲಿ ಹಲವು ತಿಂಗಳಿನಿಂದಲೂ ಚಿರತೆ ಹಾವಳಿ ಇದೆ. ಇತ್ತೀಚಿನ ದಿನಗಳಲ್ಲಿ ಅವುಗಳ ಕಾಟ ಹೆಚ್ಚಾಗಿದ್ದು, ಸಾಕು ಪ್ರಾಣಿಗಳನ್ನು ಕೊಂದು ಹಾಕುತ್ತಿರುವುದು ಆತಂಕ ಮೂಡಿಸಿದೆ. ಮಳವಳ್ಳಿ ತಾಲೂಕಿನಲ್ಲಿ ಚಿರತೆ ಜತೆಗೆ ಆನೆ ಕಾಟವೂ ಹೆಚ್ಚಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಶಿವಮೊಗ್ಗ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಕಡಿಮೆ ಇದೆ. ಸಂಪೂರ್ಣ ಲಾಕ್‍ಡೌನ್ ಸಂದರ್ಭದಲ್ಲಿ ಸಾಗರ ತಾಲೂಕಿನಲ್ಲಿ 8-10 ಕಾಡುಕೋಣಗಳು ಕಾಣಿಸಿಕೊಂಡಿದ್ದವು.

ಕನ್ನಡದ ಹೆಸರಾಂತ ನಟ ಲಕ್ಷ್ಮಣ್ ಇನ್ನಿಲ್ಲ

ಉ.ಕ ಭಾಗದಲ್ಲಿ ಕಾಡುಕೋಣ ಪ್ರತ್ಯಕ್ಷ: ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಬೇಸಿಗೆಗೆ ನೀರು ಅರಸಿಕೊಂಡು ಕಾಡುಪ್ರಾಣಿಗಳು ಗ್ರಾಮಗಳಿಗೆ ಬರುತ್ತಿವೆ. ಸಿದ್ದಾಪುರ ತಾಲೂಕಿನ ಮಾವಿನಗುಂಡಿ-ಜೋಗ ರಸ್ತೆಯಲ್ಲಿ ಚಿರತೆಯೊಂದು ಹಗಲಲ್ಲೇ ರಸ್ತೆಯಲ್ಲಿ ಓಡಾಡುತ್ತಿರುವಾಗ ಕಣ್ಣಿಗೆ ಬಿದ್ದಿತ್ತು. ಅದೇ ತಾಲೂಕಿನ ಹಸರಗೋಡ ಗ್ರಾಪಂ ವ್ಯಾಪ್ತಿಯ ತಂಗಾರಮನೆಯಲ್ಲಿ ವಾರದ ಹಿಂದೆ ಕಾಡುಕೋಣ ಕಾಣಿಸಿಕೊಂಡಿತ್ತು.

ಕೋಲಾರದಲ್ಲಿ ಕಾಡಾನೆ ದಾಳಿ: ಕೋಲಾರ ಜಿಲ್ಲೆಗೆ ನೆರೆ ರಾಜ್ಯಗಳಿಂದ ಆಹಾರ ಮತ್ತು ಸಂತಾನೋತ್ಪತ್ತಿಗಾಗಿ ಬರುವ ಕಾಡಾನೆಗಳು ಗ್ರಾಮಗಳಿಗೆ ನುಗ್ಗಿ ರೈತರ ಪ್ರಾಣಕ್ಕೆ ಕುತ್ತುಂಟು ಮಾಡಿವೆಯಲ್ಲದೆ ಲಕ್ಷಾಂತರ ರೂ. ಮËಲ್ಯದ ಬೆಳೆ ನಾಶ ಮಾಡಿವೆ. ಈ ವರ್ಷ ಬಂಗಾರಪೇಟೆ ತಾಲೂಕು ಒಂದರಲ್ಲೇ ಮೂವರು ರೈತರು ಆನೆ ದಾಳಿಗೆ ಬಲಿಯಾಗಿದ್ದಾರೆ.

ರಾಮನಗರದಲ್ಲೂ ಚಿರತೆ-ಆನೆ ಕಾಟ: ಜಿಲ್ಲೆಯಲ್ಲಿ ಆನೆ ಜತೆಗೆ ಚಿರತೆ ಹಾವಳಿಯೂ ತೀವ್ರವಾಗಿದ್ದು, ಇತ್ತೀಚೆಗೆ ಚಿರತೆ ದಾಳಿಗೆ ಬಾಲಕ ಮತ್ತು ವೃದ್ಧೆ ಬಲಿಯಾಗಿದ್ದಾರೆ. ವಿವಿಧ ಅರಣ್ಯ ವಲಯಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಮನುಷ್ಯರು ಗಾಯಗೊಂಡಿದ್ದರೆ, ನೂರಾರು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. 2020ರ ಮೇ 9ರಿಂದ 27ರವರೆಗೆ ಮಾಗಡಿ ತಾಲೂಕು ವ್ಯಾಪ್ತಿಯಲ್ಲಿ 10 ಚಿರತೆ ಹಾಗೂ 2 ಮರಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದಿದೆ. ಪರಾಕ್ರಮ್ ದಿವಸ್ : ನೇತಾಜಿ ಸ್ಮರಿಸಿದ ಪ್ರಧಾನಿ ಮೋದಿ

ತುಮಕೂರು ನಗರಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಿಯಲ್ಲಿ ಕಳೆದ ಮಾರ್ಚ್ 5 ರಂದು ಕಾಡಾನೆ ದಾಳಿಗೆ ವೃದ್ಧರೊಬ್ಬರು ಮೃತಪಟ್ಟಿದ್ದರು. ಮಾರ್ಚ್ 1ರಿಂದ ಈವರೆಗೆ ಗ್ರಾಮಗಳಿಗೆ ದಾಳಿ ಇಟ್ಟಿದ್ದ 14 ಚಿರತೆಗಳನ್ನು ಸೆರೆ ಹಿಡಿಯಲಾಗಿದೆ.

wild animals, prevention, Rehabilitation, center, government,

Articles You Might Like

Share This Article