ಬೆಂಗಳೂರು,ಫೆ.23- ವನ್ಯಜೀವಿ ಮತ್ತು ಮಾನವ ಸಂಘರ್ಷದಿಂದಾಗಿ ಕಳೆದ ವರ್ಷ 41 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ವಿಧಾನಪರಿಷತ್ತಿನ ಪ್ರಶ್ನೋತ್ತರ ಅವಧಿಯಲ್ಲಿ ಸದಸ್ಯರಾದ ಅ.ದೇವೇಗೌಡ, ಸಿ.ಎನ್.ಮಂಜೇಗೌಡ ಸೇರಿದಂತೆ ಇತರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಆನೆ, ಕಾಡುಎಮ್ಮೆ, ಮೊಸಳೆ, ಕಾಡುಹಂದಿ, ಹುಲಿ, ಚಿರತೆ, ಕರಡಿಯಂತಹ ವನ್ಯ ಜೀವಿಗಳ ಸಂಘರ್ಷದಿಂದಾಗಿ ಪ್ರಾಣ ಹಾನಿಯಾಗಿದೆ. ಪ್ರಾಣ ಹಾನಿ ಸಂದರ್ಭದಲ್ಲಿ ನೀಡಲಾಗುತ್ತಿದ್ದ ಪರಿಹಾರವನ್ನು 7.5 ಲಕ್ಷದಿಂದ 15 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ.
ಹಾವೇರಿ : ಒಂದೇ ಕುಟುಂಬದ ಮೂವರ ಆತ್ಮಹತ್ಯೆ
ಅದೇ ರೀತಿ ಬೆಳೆ ನಷ್ಟ ಹಾಗೂ ಇತರ ಹಾನಿಗಳಿಗೆ ನೀಡಲಾಗುತ್ತಿದ್ದ ಪರಿಹಾರವನ್ನು ದುಪ್ಪಟ್ಟುಗೊಳಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಮೃತಪಟ್ಟರೆ ನೀಡುತ್ತಿದ್ದ ಪರಿಹಾರವನ್ನು 30ರಿಂದ 50 ಲಕ್ಷರೂ.ಗೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಆನೆ, ಹುಲಿ ಹಾಗೂ ಚಿರತೆ ಹಾವಳಿ ತಡೆಗೆ ಕ್ರಮ ಕೈಗೊಳ್ಳಲಾಗಿದೆ. 5494 ಅರಣ್ಯ ರಕ್ಷಕ ಹುದ್ದೆಗಳಿಗೆ ಮಂಜೂರಾತಿ ಇದ್ದು, 2968 ಮಂದಿ ಕೆಲಸ ಮಾಡುತ್ತಿದ್ದಾರೆ. 2569 ಹುದ್ದೆಗಳು ಖಾಲಿ ಇವೆ. 339 ಅರಣ್ಯ ರಕ್ಷಕರ ಹುದ್ದೆ ಭರ್ತಿಯಾಗಿದೆ. ಹೊಸದಾಗಿ 506 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
AIDMK ಮುಖ್ಯಸ್ಥರಾಗಿ ಪಳನಿಸ್ವಾಮಿ ಮುಂದುವರಿಕೆ
164 ಐಎಫ್‍ಎಸ್ ಅಧಿಕಾರಿಗಳ ಹುದ್ದೆಗೆ ಮಂಜೂರಾತಿಯಾಗಿದ್ದು, 115 ಮಂದಿ ಕೆಲಸ ಮಾಡುತ್ತಿದ್ದಾರೆ. ಇಬ್ಬರು ಅಕಾರಿಗಳು ಅನ್ಯ ಸೇವೆ ಮೇಲೆ ಕೇಂದ್ರ ಸರ್ಕಾರದ ಇಲಾಖೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿಸಿದರು.
wildlife, human, conflict 41 killed, Minister Madhuswamy,