Saturday, September 23, 2023
Homeಇದೀಗ ಬಂದ ಸುದ್ದಿನಾನು ಮಥುರಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ : ಹೇಮಮಾಲಿನಿ

ನಾನು ಮಥುರಾ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ : ಹೇಮಮಾಲಿನಿ

- Advertisement -

ಮಥುರಾ,ಜೂ.6- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಮಥುರಾ ಕ್ಷೇತ್ರದಲ್ಲಿ ಮಾತ್ರ ಸ್ರ್ಪಧಿಸುತ್ತೇನೆ ಎಂದು ಕನಸಿನ ಕನ್ಯೆ ಖ್ಯಾತಿಯ ಚಿತ್ರನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ ತಿಳಿಸಿದ್ದಾರೆ. ಒಂದು ವೇಳೆ ನನಗೆ ಮಥುರಾದಿಂದ ಸ್ರ್ಪಧಿಸಲು ಅವಕಾಶ ನಿರಾಕರಿಸಿದರೆ ನಾನು ಬೇರೆ ಯಾವುದೇ ಕ್ಷೇತ್ರದಿಂದ ಸ್ರ್ಪಧಿಸುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಪಪಡಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಒಂಬತ್ತು ವರ್ಷಗಳ ಕಾಲ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. ಹೀಗಾಗಿ ಮುಂದಿನ ಬಾರಿಯೂ ಅವರ ಜತೆ ಕೆಲಸ ಮಾಡಲು ಇಚ್ಚಿಸುತ್ತೇನೆ. ಆದರೆ, ತನಗೆ ಭಗವಾನ್ ಕೃಷ್ಣ ಮತ್ತು ಆತನ ಭಕ್ತರ ಮೇಲೆ ಅಪಾರ ಪ್ರೀತಿ ಇದೆ ಮತ್ತು ಅವರ ಸೇವೆ ಮಾಡಲು ತಾನು ಬಯಸುತ್ತೇನೆ ಹೀಗಾಗಿ ಮಥುರಾದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಅವರು ತಮ್ಮ ಮನದಾಸೆ ಹೇಳಿಕೊಂಡಿದ್ದಾರೆ.

- Advertisement -

ಅಭಿ-ಅವಿವಾ ವಿವಾಹ : ಯಾರೆಲ್ಲಾ ದುಬಾರಿ ಗಿಫ್ಟ್ ಕೊಟ್ರು ಗೊತ್ತಾ..?

ಹೇಮಾ ಮಾಲಿನಿ ಅವರು 2014 ಮತ್ತು 2019 ರಲ್ಲಿ ಬಿಜೆಪಿ ಟಿಕೆಟ್‍ನಲ್ಲಿ ಸತತ ಎರಡು ಬಾರಿ ಮಥುರಾ ಲೋಕಸಭಾ ಕ್ಷೇತ್ರವನ್ನು ಗೆದ್ದಿದ್ದೆರೆ. ಅದಕ್ಕೂ ಮುನ್ನ ಅವರು ರಾಜ್ಯಸಭಾ ಸದಸ್ಯೆಯಾಗಿದ್ದರು.

#Contest, #Only, #Mathura, #HemaMalini,

- Advertisement -
RELATED ARTICLES
- Advertisment -

Most Popular