ಬೆಳಗಾವಿ, ಡಿ.17- ಹತ್ತನೆ ಚಳಿಗಾಲದ ಅವೇಶನ ಡಿ.19ರಿಂದ ಹತ್ತು ದಿನಗಳ ಕಾಲ ನಡೆಯಲಿದ್ದು, ಬೆಳಗಾವಿ ನಗರ ಸಿಂಗಾರಗೊಂಡಿದೆ. ನಗರದ ಸುವರ್ಣ ವಿಧಾನಸೌಧ ಅಲಂಕಾರ ಗೊಂಡಿದ್ದು, ನಗರದ ರಸ್ತೆಗಳು, ವಿಭಜಕಗಳು, ವೃತ್ತಗಳನ್ನು ಅಲಂಕಾರ ಮಾಡಲಾಗಿದೆ.
ಬೆಳಗಾವಿ ಸುವರ್ಣಸೌಧದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಬ್ಯಾರಿಕೇಡ್ ಹಾಕಲಾಗಿದ್ದು, ಪ್ರತಿಭಟನೆ ನಡೆಸಲು ನೊಂದಾಯಿಸಿಕೊಂಡ 80ಕ್ಕೂ ಹೆಚ್ಚು ಸಂಘಟನೆಗಳಿಗೆ ಕೊಂಡೂಸಕೊಪ್ಪ ಮತ್ತು ಸುವರ್ಣಗಾರ್ಡನ್ ಪ್ರದೇಶದಲ್ಲಿ ಟೆಂಟ್ಗಳನ್ನು ಹಾಕಲಾಗಿದೆ.
ಸುವರ್ಣವಿಧಾನಸೌಧದ ಸುತ್ತ 3ಕಿಮೀ ನಿಷೇದಾಜ್ಞೆ ಹೊರಡಿಸಿ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಪೊಲೀಸ್ ಭದ್ರತೆ:
ಬೆಳಗಾವಿ ನಗರ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ 9ಎಸ್ಪಿ ದರ್ಜೆಯ ಐಪಿಎಸ್ ಅಧಿಕಾರಿಗಳು, 45 ಡಿಎಸ್ಪಿಗಳ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ. ಚಳಿಗಾಲವಾದ್ದರಿಂದ ಪೊಲೀಸರಿಗೆ ಮಲಗುವ ಟೆಂಟ್ಗಳು, ಸ್ನಾನಕ್ಕೆ ಬಿಸಿನೀರು ಹಾಗೂ ಬಿಸಿ ಆಹಾರ ಸಿದ್ಧತೆ ಸುವರ್ಣಸೌಧ ಬಳಿಯ ಪೊಲೀಸ್ ಸಿಟಿಯಲ್ಲಿ ಏರ್ಪಾಡು ಮಾಡಿಕೊಳ್ಳಲಾಗಿದ್ದು, ಐಜಿಪಿ ಎನ್. ಸತೀಶ್ಕುಮಾರ್ ಹಾಗೂ ಆಯುಕ್ತ ಡಾ. ಬೋರಲಿಂಗಯ್ಯ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಯಿತು.
ಮಹಾಮೇಳಾವ:
ಪ್ರತಿವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅವೇಶನ ಸಂದರ್ಭ ನಡೆಯುವ ಮರಾಠಿಗರ ಮಹಾಮೇಳಾವ ನಡೆಸಲು ಎಂಇಎಸ್ ಸಿದ್ಧತೆ ಮಾಡಿಕೊಂಡಿದೆ. ಕೇಂದ್ರ ಗೃಹ ಸಚಿವರ ಸೂಚನೆ ನಂತರವೂ ಬೆಳಗಾವಿಯಲ್ಲಿ ಉದ್ಧಟತನ ಮೆರೆಯಲು ಎಂಇಎಸ್ ಮತ್ತು ಮರಾಠಿ ನಾಯಕರು ಹೂಂಕರಿಸಿದ್ದಾರೆ.
ಬೊಮ್ಮಾಯಿ ಸರ್ಕಾರದ ಮೇಲೆ ಮತ್ತೊಂದು ಬಾಂಬ್ ಸಿಡಿಸಿದ ಸಿದ್ದರಾಮಯ್ಯ..!
ಕರ್ನಾಟಕ- ಮಹಾರಾಷ್ಟ್ರ ಗಡಿ ಸಮಸ್ಯೆ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಬರುವವರೆಗೂ ಎರಡೂ ರಾಜ್ಯಗಳು ಶಾಂತಿ ಮತ್ತು ತಟಸ್ಥ ನೀತಿ ಅನುಸರಿಸಬೇಕೆಂಬ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೂ ಇಂತಹ ಯತ್ನ ಎಂಇಎಸ್ ಮುಂದುವರೆಸಿದೆ.
ಕರ್ನಾಟಕ- ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರ ಗೃಹಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ತಟಸ್ಥವಾಗಿರುವಂತೆ ಸೂಚನೆ ನೀಡಿದ್ದರು. ಮತ್ತೆ ಎಂಇಎಸ್ ಗಡಿ ಕ್ಯಾತೆ ತೆಗೆಯುತ್ತಿರುವುದು ಗಮನ ಸೆಳೆದಿದೆ.
#SuvarnaSoudha, #AssemblySession,