ಹೊಸಬರಿಗೆ ವೇತನ ಕಡಿತ : ವಿಪ್ರೋ ಕ್ರಮಕ್ಕೆ ಐಟಿ ಉದ್ಯೋಗಿಗಳ ಒಕ್ಕೂಟ ಆಕ್ರೋಶ

Social Share

ನವದೆಹಲಿ,ಫೆ.24- ಆನ್‍ಬೋರ್ಡಿಂಗ್‍ಗಾಗಿ ಕಾಯುತ್ತಿರುವ ಫ್ರೆಶರ್‍ಗಳಿಗೆ ವೇತನ ಕೊಡುಗೆಗಳನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿರುವ ವಿಪ್ರೋ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಐಟಿ ವಲಯ ಉದ್ಯೋಗಿಗಳ ಒಕ್ಕೂಟ ಒತ್ತಾಯಿಸಿದೆ.

ಆಫರ್ ಲೆಟರ್ ನಿಯಮ ಹಾಗೂ ಒಪ್ಪಂದಗಳನ್ನು ಉಲ್ಲಂಘಿಸಿರುವ ವಿಪ್ರೋ ಸಂಸ್ಥೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒಕ್ಕೂಟ ಕೇಂದ್ರ ಕಾರ್ಮಿಕ ಸಚಿವರಿಗೆ ಪತ್ರ ಬರೆದು ಒತ್ತಾಯಿಸಿದೆ.

ನಾವು ಉದ್ಯೋಗಿಗಳ ಪರವಾಗಿದ್ದೇವೆ. ವಿಪ್ರೋ ಸಂಸ್ಥೆಯ ಈ ನಿರ್ಧಾರ ಇನ್ನಿತರ ಕಂಪನಿಗಳಿಗೆ ಅಪಾಯಕಾರಿ ಪೂರ್ವ ನಿದರ್ಶನ ನೀಡುವಂತಿರುವುದರಿಂದ ಇದು ಕಾರ್ಮಿಕರ ಶೋಷಣೆಗೆ ಮತ್ತು ಉದ್ಯೋಗ ಭದ್ರತೆಯ ಕೊರತೆಗೆ ಕಾರಣವಾಗಬಹುದು ಎಂದು ಒಕ್ಕೂಟ ಅಭಿಪ್ರಾಯಪಟ್ಟಿದೆ.

ಕಾಶ್ಮೀರ ವಿಚಾರ : ವಿಶ್ವಸಂಸ್ಥೆಯಲ್ಲಿ ದಿವಾಳಿ ಪಾಕ್‍ಗೆ ಭಾರತದ ತಿರುಗೇಟು

ವಿಪ್ರೋ ಸಂಸ್ಥೆ ಇತ್ತೀಚೆಗೆ ವಾರ್ಷಿಕ 6.5 ಲಕ್ಷ ರೂ.ಗಳ ವೇತನದ ಆಫರ್ ನೀಡಿ ಅದನ್ನು 3.5 ಲಕ್ಷ ರೂ.ಗಳಿಗೆ ಇಳಿಕೆ ಮಾಡಿತ್ತು. ಇದರಿಂದ ಫ್ರೇಶರ್‍ಗಳು ಆಘಾತಕ್ಕೊಳಗಾಗಿದ್ದಾರೆ. ಹೀಗಾಗಿ ವಿಪ್ರೋ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್ ಯಾದವ್‍ಗೆ ಪತ್ರ ಬರೆಯಲಾಗಿದೆ.

ಕಂಪನಿಯು ಈಗ ವೇತನವನ್ನು ಅನೈತಿಕವಾಗಿ ಕಡಿಮೆ ಮಾಡುತ್ತಿದೆ, ಇದು ಆಫರ್ ಲೆಟರ್‍ನ ನಿಯಮಗಳ ಸ್ಪಷ್ಟ ಉಲ್ಲಂಘನೆ ಮತ್ತು ಒಪ್ಪಂದದ ಉಲ್ಲಂಘನೆಯಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ಹರ್‍ಪ್ರೀತ್ ಸಿಂಗ್ ಸಲೂಜಾ ಅವರು ಪಿಟಿಐಗೆ ತಿಳಿಸಿದ್ದಾರೆ.

ನಮ್ಮ ವ್ಯಾಪಾರದ ಅಗತ್ಯತೆಗಳು, ನಾವು ನಮ್ಮ ಆನ್‍ಬೋರ್ಡಿಂಗ್ ಯೋಜನೆಗಳನ್ನು ಸರಿಹೊಂದಿಸಬೇಕಾಗಿದೆ. ನಾವು ಮಾಡಿದ ಎಲ್ಲಾ ಅತ್ಯುತ್ತಮ ಕೊಡುಗೆಗಳನ್ನು ಗೌರವಿಸಲು ಕೆಲಸ ಮಾಡುತ್ತಿರುವಾಗ, ಈ ಪ್ರಸ್ತುತ ಕೊಡುಗೆಯು ಅಭ್ಯರ್ಥಿಗಳಿಗೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು, ಅವರ ಪರಿಣತಿಯನ್ನು ಬೆಳೆಸಲು ಮತ್ತು ಹೊಸ ಕೌಶಲ್ಯಗಳನ್ನು ಪಡೆದುಕೊಳ್ಳಲು ತಕ್ಷಣದ ಅವಕಾಶವನ್ನು ಸೃಷ್ಟಿಸುತ್ತದೆ ವಿಪ್ರೋ ಅಭಿಪ್ರಾಯಪಟ್ಟಿದೆ.

Wipro should relook at the strategy of salary cuts for freshers

Articles You Might Like

Share This Article