ಹೋಟೆಲ್‍ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ

Social Share

ಫಿರೋಜಾಬಾದ್,ನ.17-ನೀರಿನಲ್ಲಿ ಮತ್ತು ಬರುವ ಪದಾರ್ಥ ಮಿಶ್ರಣ ಮಾಡಿ ಕುಡಿಸಿ ನಂತರ ಹೋಟೆಲ್‍ನಲ್ಲಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್‍ನಲ್ಲಿ ನಡೆದಿದೆ.

ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಬಂದಾಗ ವಿಷಯ ಬೆಳಕಿಗೆ ಬಂದಿದೆ. ತನಗೆ ಈಗಾಗಲೇ ಪರಿಚಯವಿದ್ದ ದೀಪಕ್ ಯಾದವ್ ಎಂಬಾತ ಕಳೆದ ನ.7 ರಂದು ತುಂಡ್ಲಾ ನಿಲ್ದಾಣದ ಬಳಿ ತನ್ನನ್ನು ಕರೆದು ಕಾರಿನಲ್ಲಿ ಆಗ್ರಾ ಕಡೆಗೆ ಕರೆದುಕೊಂಡು ಹೊದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಯಾಣದ ವೇಳೆ ನನಗೆ ನೀರು ನೀಡಿ ಕುಡಿಯಲು 10 ನಿಮಿಷಗಳ ನಂತರ ಮಂಪರು ಬಂದು ಚೌಕಿ ಬಳಿಯ ಹೋಟೆಲ್‍ಗೆ ಕರೆದೊಯ್ದಿದ್ದು, ಅಲ್ಲಿ ನಾಲ್ವರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.
ಆರೋಪಿಗಳು ತನ್ನ ಅಶ್ಲೀಲ ವೀಡಿಯೊವನ್ನು ಸಹ ಮಾಡಿದ್ದಾರೆ ಮತ್ತು ಫೋನ್‍ನಿಂದ ವೀಡಿಯೊವನ್ನು ಅಳಿಸಲು 20,000 ರೂ ತೆಗೆದುಕೊಂಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ.

ಭಾನುವಾರ ಬಳ್ಳಾರಿಯಲ್ಲಿ ಬಿಜೆಪಿ ನವಶಕ್ತಿ ಸಮಾವೇಶ, ಚುನಾವಣೆಗೆ ರಣಕಹಳೆ

ಮರುದಿನ, ಮತ್ತೆ ಕರೆ ಮಾಡಿ, ವಿಷಯವನ್ನು ಯಾರಿಗಾದರೂ ಬಹಿರಂಗಪಡಿಸಿದರೆ ಅಶ್ಲೀಲ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಡುವುದಾಗಿ ಬ್ಲ್ಯಾಕ್‍ಮೇಲ್ ಮಾಡಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ .

ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಸಂತ್ರಸ್ತೆಯ ಹೇಳಿಕೆಯ ಆಧಾರಿಸಿ ಪ್ರಕರಣ ದಾಖಲಿಸಿದ್ದು , ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ತುಂಡ್ಲ ಠಾಣೆ ಇನ್ಸ್‍ಪೆಕ್ಟರ್ ದೀಪ್ ಕುಮಾರ್ ತಿಳಿಸಿದ್ದಾರೆ.

Articles You Might Like

Share This Article