ದೆಹಲಿ ವಿಮಾನ ನಿಲ್ದಾಣದಲ್ಲೇ ಮಗುವಿಗೆ ಜನ್ಮ ನೀಡಿದ ಹುಬ್ಬಳ್ಳಿ ಮಹಿಳೆ

Social Share

ನವದೆಹಲಿ,ನ.17- ವಿಮಾನ ನಿಲ್ದಾಣದ ಟರ್ಮಿನಲ್‍ನಲ್ಲಿ ಹುಬ್ಬಳ್ಳಿ ಮೂಲದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿ ಪ್ರಸಂಗ ನಡೆದಿದೆ.ಕಳೆದ ಮಂಗಳವಾರ ನವದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಂಬು ಗರ್ಬಿಣಿ ತಮ್ಮ ಪತಿ ಜೊತೆ ಬಂದಿದ್ದಾರೆ,ಹುಬ್ಬಳಿಗೆ ತೆರಳಲು ಟರ್ಮಿನಲ್ 3 ಮುಲಕ ಸಾಗಿ ಕಾಯುವ ಲಾಂಜ್ ತಲುಪಿದ್ದಾರೆ .

ಸ್ವಲ್ಪ ಸಮಯದಲ್ಲೇ ಮಹಿಳೆ ಶೌಚಾಲಯಕ್ಕೆ ಹೊದಾಗ ಹೊಟ್ಟೆ ನೋವಿ ಕಾಣಿಸಿಕೊಂಡಿದೆ.ಗಾಬರಿಗೊಂಡು ಪತಿ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ ,ಅದೃಷ್ಟವಶಾತ್ ನಮ್ಮ ವೈದ್ಯಕೀಯ ಸೌಲಭ್ಯವು ಹತ್ತಿರದಲ್ಲಿಯೇ ಇದ್ದ ಕಾರಣ ಸೂಕ್ತ ಚಿಕಿತ್ಸೆ ನೀಡಲಾಯಿತು.

ಮೇದಾಂತ ಫೆಸಿಲಿಟಿಯಲ್ಲಿ ಮೊದಲ ಮಗುವಿನ ಜನನವಾಗಿದ್ದು ನಮಗೆ ಸಂತಸ ತಂದಿದೆ ಕಿರಿಯ ಪ್ರಯಾಣಿಕನಿಗೆ ಸ್ವಾಗತಿಸಿ ಹಬ್ಬ ಆಚರಿಸಿದೆವು ಎಂದು ಅಕಾರಿಗಳು ತಿಳಿಸಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಚೆನ್ನಾಗಿದ್ದಾರೆ ಎಂದು ದೆಹಲಿ ವಿಮಾನ ನಿಲ್ದಾಣದ ನಿರ್ವಾಹಕರು ಟ್ವೀಟ್ ಮಾಡಿದ್ದಾರೆ. ಈ ಮಗುವಿನ ಮೊದಲ ಅಳುವೇ ನಮ್ಮ ವಿಮಾನ ನಿಲ್ದಾಣದಲ್ಲಿ ಆಗಮನಕ್ಕೆ ಸಂಕೇತವಾಗಿದೆ ಎಂದು ಹೇಳಿದ್ದಾರೆ.

ಮಹಿಳೆಯನ್ನು ಬೆಳಿಗ್ಗೆ 9:20 ರ ಸುಮಾರಿಗೆ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಮಗು ಬೆಳಿಗ್ಗೆ 9:40ರ ಸುಮಾರಿಗೆ ಜನಿಸಿತು ಎಂದು ವರದಿಯಾಗಿದೆ. . ಬಳಿಕ ಮಹಿಳೆಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Articles You Might Like

Share This Article