ಕೊಹಿಮಾ, ಫೆ.2 – ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ನಾಗಾಲ್ಯಾಂಡ್‍ನ ಕೊಹಿಮಾ ಜಿಲ್ಲೆಯ ಮಣಿಪುರ ಗಡಿಯ ಬಳಿ ಒಂದು ಕೋಟಿ ರೂಪಾಯಿ ಹಣವನ್ನು ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಲಾಗಿದೆ.
ಖುಜಾಮಾ ಅಂತರಾಜ್ಯಚೆಕ್‍ಪೊಸ್ಟ್ ಗೇಟ್‍ನಲ್ಲಿ ಮಣಿಪುರ-ನೋಂದಾಯಿತ ವಾಹನವನ್ನು ತಪಾಸಣೆ ಮಾಡುವಾಗ 1 ಕೋಟಿ ನಗದು ಹಣವನ್ನುವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಿಯಮಾನುಸಾರ ಆದಾಯ ತೆರಿಗೆ ಇಲಾಖೆಯು ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಕಾರಿ ಹಾಗೂ ಜಿಲ್ಲಾಧಿಕಾರಿ ಶಾನವಾಸ್ ಸಿ ತಿಳಿಸಿದ್ದಾರೆ.
ಯಾವುದೇ ರಾಜಕೀಯ ಪಕ್ಷಕ್ಕೆ ನಗದನ್ನು ನೀಡಿದ್ದರೆ ಇನ್ನೂ ಖಚಿತವಾಗಿಲ್ಲ ಎಂದು ಅವರು ಹೇಳಿದರು.
ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ,ಮಹಿಳೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಹಣ ಯಾರಿಗೆ ಸೇರಿದ್ದು ಎಂಬುದನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸಿದರು.
ಫೆಬ್ರವರಿ 27 ರಂದು ಈಶಾನ್ಯ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
Woman, Rs 1 crore, cash, poll-bound, Nagaland,