ಎಣ್ಣೆ ಪಾರ್ಟಿಯಲ್ಲಿ ಕಿರಿಕ್ ಮಾಡಿದ ಪತಿಯನ್ನು ಕೊಂದ ಪತ್ನಿ

Social Share

ಬಾರಾಬಂಕಿ, ಡಿ .19 -ಜೊತೆಜೊತೆಯಲ್ಲಿ ಮದ್ಯ ಸೇವಿಸುವಾಗ ನಡೆದ ಜಗಳ ವಿಕೋಪಕ್ಕೆ ತಿರುಗಿ ಪತ್ನಿಯೇ ಗಂಡನನ್ನು ಹತ್ಯೆಗೈದಿರುವ ಘಟನೆ ಇಲ್ಲಿನ ಕೋಟಿ ಪ್ರದೇಶದ ಪೀರ್‍ಪುರ ಗ್ರಾಮದಲ್ಲಿ ನಡೆದಿದೆ.
ವಿನಯ್ ರಾಜ್ (27) ಕೊಲೆಯಾದವನಾಗಿದ್ದು ಆತನ ಪತ್ನಿ ರಾಧಾಳನ್ನು ಬಂಸಲಾಗಿದೆ.

ಇಬ್ಬರು ಮದ್ಯ ಸೇವನೆ ಮಾಡುತ್ತಿದ್ದರು,ಸಶೆಯಲ್ಲಿ ಜಗಳವಾಡಿದ್ದಾರೆ ನಂತರ ಆಕೆ ಚೂಪಾದ ಆಯುಧದಿಮದ ಪಕ್ಕದಲ್ಲೇ ಇದ್ದ ಗಂಡನಿಗೆ ಇರಿದು ಕೊಂದಿದ್ದಾಳೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿ ಅಖಿಲೇಶ್ ನಾರಾಯಣ್ ಹೇಳಿದ್ದಾರೆ.

ಬೆಳಗ್ಗೆ ಎಚ್ಚರಗೊಂಡು ಅನಾಹುದದ ಬಗ್ಗೆ ತಿಳಿದು ನಾಟಕವಾಡಿ ತನ್ನ ಪತಿಯನ್ನು ಯಾರೋ ಕೊಂದಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರಿಗೆ ಅನುಮಾನ ಬಂದು ಮೇಲ್ನೋಟಕ್ಕೆ ರಾಧಾ ಅವರೇ ಕೊಲೆ ಮಾಡಿರುವುದು ಕಂಡು ಬಂದುಬಂಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 #Woman, #Killed, #Husband, #WineParty,

Articles You Might Like

Share This Article