ಅರೆನಗ್ನ ಫೋಟೋ ಪೋಸ್ಟ್ ಮಾಡಿದ ಪುಂಡ, ಯುವತಿ ಆತ್ಮಹತ್ಯೆ

Social Share

ಲಖಿಂಪುರ . ಆ.26 -ಅರೆನಗ್ನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಪುಂಡನ ವರ್ತನೆಗೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಲಖಿಂಪುರದ ಖೇರಿ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದ 1ವಾರದ ಹಿಂದೆ ಯುವಕನೊಬ್ಬ 20 ವರ್ಷದ ಯುವತಿಯ ಅರೆಬರೆ ಚಿತ್ರಗಳನ್ನು ಅಂತಜರ್ಲದಲ್ಲಿ ಹಾಕಿದ್ದ, ಇದರಿಂದ ಕೆಲವೇ ತಿಂಗಳುಗಳಲ್ಲಿ ನಡೆಯಬೇಕಿದ್ದ ಆಕೆಯ ಮದುವೆ ರದ್ದುಗೊಂಡಿತ್ತು.

ಇದರಿಂದ ಮಾನಸಿಕವಾಗಿ ನೊಂದ ಆಕೆ ಖಿನ್ನತೆಗೆ ಒಳಗಾಗಿ ತನ್ನ ಮನೆಯ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‍ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನೆರೆಹೊರೆಯವ ಹಿಯಾಳಿಕೆಯಿಂದ ಆಕೆಯ ಕುಟಂಬದವರು ಚಿಂತೆಗೆ ಬಿದ್ದಿದ್ದರು ಎನ್ನಲಾಗಿದೆ. ಯುವತಿ ತಂದೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಹಲವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇಷ್ಟೆಲ್ಲಾ ದುರಂತಕ್ಕೆ ಕಾರಣನಾದ ಆರೋಪಿ ತಲೆಮರೆಸಿಕೊಂಡಿದ್ದು, ಆತನನ್ನು ಬಂಧಿಸುವ ಪ್ರಯತ್ನ ಮುಂದುವರಿದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗೆ ತಿಳಿಸಿದ್ದಾರೆ.

Articles You Might Like

Share This Article