ಮೈಸೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ವಿವಾಹಿತ ಮಹಿಳೆಯ ಕೊಲೆ

Social Share

ಮೈಸೂರು,ಫೆ.3- ವಿವಾಹಿತ ಮಹಿಳೆಯೋಬ್ಬಳನ್ನುಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ಘಟನೆ ಮೈಸೂರಿನ ಉದಯಗಿರಿಯಲ್ಲಿ ನಡೆದಿದೆ. ಅಡ್ಡಬಂದ ಮಹಿಳೆಯ ತಾಯಿ ಮೇಲೂ ಹಲ್ಲೇ ನಡೆಸಿದ ಆರೋಪಿಪರಾರಿಯಾಗಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಸುನೀತಾ (30) ಮೃತ ದುರ್ದೈವಿಯಾಗಿದ್ದು, ತಾಯಿ ಭಾರತಿ ಗಂಭೀರ ಗಾಯಗೊಂಡುಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಿರೀಶ್ ಕೊಲೆ ಮಾಡಿರುವ ಆರೋಪಿ. ಕ್ಯಾತಮಾರನಹಳ್ಳಿಯ ಶ್ರೀಕಂಠೇಶ್ವರ ಶಾಲೆ ಬಳಿ ಘಟನೆ ನಡೆದಿದೆ. ಮೃತಳಿಗೂ ಹಾಗೂ ಆರೋಪಿ ಗಿರೀಶ್ ನಡುವೆ ಲವ್ ಕಹಾನಿ ಇತ್ತೆಂದು ಹೇಳಲಾಗಿದೆ.ಇಬ್ಬರೂ ಮದುವೆ ಆಗಲು ನಿರ್ಧರಿಸಿದ್ದರೆಂದು ಹೇಳಲಾಗಿದೆ.
ಆದರೆ, ಸುನಿತಾಗೆ ಮನೆಯವರು ಬೇರೆ ಮದುವೆ ಮಾಡಿದ್ದಾರೆ. ಈ ಹಿನ್ನಲೆ ಗಿರೀಶ್ ದ್ವೇಷ ಬೆಳೆಸಿಕೊಂಡಿದ್ದನೆಂದು ಹೇಳಲಾಗಿದೆ. ಕಳೆದ ಮೂರು ತಿಂಗಳಿಂದ ಗಿರೀಶ್ ತಮಿಳುನಾಡಿನಲ್ಲಿ ನೆಲಸಿದ್ದು ಎರಡು ದಿನಗಳ ಹಿಂದಷ್ಟೇ ಮೈಸೂರಿಗೆ ಬಂದಿದ್ದಾನೆ.
ಟೊಮೊಟೋ ಮಾರಾಟದ ವಿಚಾರದಲ್ಲಿ ಕ್ಯಾತೆ ತೆಗೆದ ಗಿರೀಶ್ ಮೊಚ್ಚಿನಿಂದ ಹಲ್ಲೇ ನಡೆಸಿದ್ದಾನೆ. ಸುನಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಅಡ್ಡ ಬಂದ ತಾಯಿ ಭಾರತಿ ಮೇಲೂ ಗಿರೀಶ್ ಹಲ್ಲೇ ನಡೆಸಿದ್ದಾನೆ. ಉದಯಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Articles You Might Like

Share This Article