ವಿಮಾನ ಶೌಚಾಲಯದಲ್ಲಿ ಧೂಮಪಾನ ಮಾಡಿದ ಯುವತಿ

Social Share

ಬೆಂಗಳೂರು,ಮಾ.8-ವಿಮಾನದ ಶೌಚಾಲಯದಲ್ಲಿ ಧೂಮಪಾನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಯುವತಿಯೊಬ್ಬಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಮಾ.6ರಂದು ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುವ ವಿಮಾನದಲ್ಲಿ ಪ್ರಿಯಾಂಕ ಚಕ್ರವರ್ತಿ(24) ಎಂಬ ಯುವತಿ ಪ್ರಯಾಣಿಸುತ್ತಿದ್ದರು. ಈ ವಿಮಾನ ರಾತ್ರಿ 9.50ಕ್ಕೆ ಕೋಲ್ಕತ್ತಾದಿಂದ ಹೊರಟಿದ್ದು, ಬೆಂಗಳೂರಿಗೆ ಮುಂಜಾನೆ 1 ಗಂಟೆಗೆ ತಲುಪುವ ಅರ್ಧಗಂಟೆ ಮುಂಚಿತವಾಗಿ ಇವರು ಶೌಚಾಲಯಕ್ಕೆ ಹೋಗಿ ಧೂಮಪಾನ ಮಾಡಿ ನಂತರ ಸಿಗರೇಟ್ ತುಂಡನ್ನು ಡಸ್ಟ್ಬಿನ್ಗೆ ಹಾಕಿದ್ದಾರೆ.

ಇದನ್ನು ಗಮನಿಸಿದ ವಿಮಾನದ ಸಿಬ್ಬಂದಿ ಬೆಂಗಳೂರಿಗೆ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಸಂಬಂಧಪಟ್ಟ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ.

ಭದ್ರತಾ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆಗೆ ದೂರು ನೀಡಿದ್ದಾರೆ. ಪೆಪೊಲೀಸರು ಪ್ರಿಯಾಂಕ ಚಕ್ರವರ್ತಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

Woman, passenger, arrested, smoking, Bengaluru, bound, flight, lavatory,

Articles You Might Like

Share This Article