ಪ್ರವಾಸಕ್ಕೆ ತೆರಳಿದ್ದ ಮಹಿಳೆ ಮೇಲೆ ಅತ್ಯಾಚಾರ

Social Share

ಭೂಪಾಲ್, ಜ.4- ಕುಟುಂಬ ಸಮೇತ ಪ್ರವಾಸ ಹೋಗಿದ್ದ ಮಹಿಳೆಯನ್ನು ಬಂದೂಕಿನ ನಳಿಕೆಯಲ್ಲಿ ಬೆದರಿಸಿ ಅತ್ಯಾಚಾರವೆಸಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ರಾಜ್‍ಗಢ ಜಿಲ್ಲೆಯಲ್ಲಿ ಪ್ರಕರಣ ವರದಿಯಾಗಿದ್ದು, ಪತಿ ಹಾಗೂ ಮಕ್ಕಳೊಂದಿಗೆ ಕಾರಿನಲ್ಲಿ ಮಹಿಳೆ ಪ್ರವಾಸ ಹೋಗಿದ್ದರು. ನಿರ್ಜನಪ್ರದೇಶದಲ್ಲಿ ಸಾಗುತ್ತಿದ್ದಾಗ ಅಪರಿಚಿತರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಅದರಲ್ಲಿ ಒಬ್ಬ ಬಂದೂಕು ತೆಗೆದು ಪತಿಯ ಹಣೆಗೆ ಗುರಿಯಿಟ್ಟು ಬೆದರಿಕೆ ಹಾಕಿದ್ದಾನೆ. ಮತ್ತೊಬ್ಬ ಮಹಿಳೆಯನ್ನು ಸ್ವಲ್ಪ ದೂರದ ಪೊದೆಗೆ ಎಳೆದೊಯ್ದು ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಮಹಿಳೆಯ ದೂರನ್ನು ಆಧರಿಸಿ ಸೋನುಯಾಧವ್(32), ಸುಮೇಶ್‍ಸಿಂಗ್ ಪಾರ್ಮರ್ (30) ಎಂಬಿಬ್ಬರು ಆರೋಪಿಗಳನ್ನು ರಗೋಢ ಠಾಣೆ ಪೊಲೀಸರು ಬಂಧಿಸಿದ್ದಾರೆ.

Articles You Might Like

Share This Article