ಬೆಂಗಳೂರು,ಜು.4-ಸಾಲದ ಹಣವನ್ನು ವಾಪಸ್ ಕೇಳಿದ ಮಹಿಳೆಯ ಮನೆಗೆ ಬೆಂಕಿ ಹಚ್ಚಿರುವ ಘಟನೆ ವಿವೇಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ವಿವೇಕನಗರದ ನಿವಾಸಿ ವೆಂಕಟರಮಣಿ ಎಂಬುವವರ ಬಳಿ ಆರೋಪಿ ಸುಬ್ರಮಣಿಯ ಸಹೋದರಿ ಪಾರ್ವತಿ ತನ್ನ ಮಗಳ ಮದುವೆಗಾಗಿ 5 ಲಕ್ಷ ಹಣ ಪಡೆದಿದ್ದಾರೆ.
ಹಣ ಪಡೆದು ಹಲವು ವರ್ಷಗಳಾದರೂ ಹಿಂದಿರುಗಿಸಿಲ್ಲ. ಹಾಗಾಗಿ ವೆಂಕಟರಮಣಿಯವರು ಹಣ ವಾಪಸ್ ಕೊಡುವಂತೆ ಪಾರ್ವತಿ ಅವರಿಗೆ ಕೇಳಿದ್ದಾರೆ.ಇದರಿಂದ ಕೋಪಗೊಂಡು ಪಾರ್ವತಿ ಹಾಗೂ ಆಕೆಯ ಮಗಳು ಸೇರಿಕೊಂಡು ವೆಂಕಟರಮಣಿಯವರ ಜೊತೆ ಗಲಾಟೆ ಮಾಡಿದ್ದಾರೆ.
ಈ ವಿಷಯ ತಿಳಿದು ಆರೋಪಿ ಸುಬ್ರಮಣಿ ಕಳೆದ ಮೂರು ದಿನಗಳ ಹಿಂದೆ ವೆಂಕಟರಮಣಿಯವರ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ.ಅದೃಷ್ಟವಶಾತ್ ಮನೆಯಲ್ಲಿದ್ದವರು ತಕ್ಷಣ ಹೊರಗೆ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ.
ಆರೋಪಿಯ ಈ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.ಘಟನೆ ಸಂಬಂಧ ವೆಂಕಟರಮಣಿ ಅವರ ಪುತ್ರ ವಿವೇಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
- ಮದುವೆಯಾಗದಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ
- ಉದ್ಯಮಿಯನ್ನು ಕಟ್ಟಿ ಹಾಕಿ ಚಿನ್ನ,ಹಣ ಲೂಟಿ
- ಸಣ್ಣ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್ ಗೊಂದಲಕ್ಕೆ ಕೇಂದ್ರ ಸರ್ಕಾರವೇ ಹೊಣೆ : ಸಿಎಂ ಸ್ಪಷ್ಟನೆ
- ಉದ್ಧಟತನ ತೋರುವ ಸಚಿವರನ್ನು ಸಂಪುಟದಿಂದ ಕೈಬಿಡುವಂತೆ ಡಿಕೆಶಿಗೆ ‘ಕೈ’ಕಮಾಂಡ್ ಸೂಚನೆ
- ಒಬ್ಬ ಮಹಿಳೆಯೊಂದಿಗೆ ಇಬ್ಬರು ಪುರುಷರ ಮದುವೆ : ಹಿಮಾಚಲದಲ್ಲಿ ಮರುಜೀವ ಪಡೆದ ಬಹುಪತಿತ್ವ