ಅಕ್ರಮ ಸಂಬಂಧಕ್ಕೆ ಬಲಿಯಾಯ್ತು ಇಡೀ ಕುಟುಂಬ, ಕಿಲ್ಲರ್ ಲಕ್ಷ್ಮಿ ಅರೆಸ್ಟ್..!

Social Share

ಮಂಡ್ಯ : ಮಕ್ಕಳು ಸೇರಿದಂತೆ ಐವರನ್ನು ಭೀಕರವಾಗಿ ಹತ್ಯೆ ಮಾಡಿದ ಕೊಲೆ ಪ್ರಕರಣವನ್ನು ಕೆಆರ್ ಎಸ್ ಪೋಲಿಸರು ಎರಡೆ ದಿನದಲ್ಲಿ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕಳೆದ ನಾಲ್ಕು ದಿನದ ಹಿಂದೆ ಕೆಆರ್ ಎಸ್ ನ ಬಜಾರ್ ಲೈನ್ ನಲ್ಲಿ ವಾಸವಾಗಿದ್ದ ಲಕ್ಷ್ಮಿ (30) ), ಮಕ್ಕಳಾದ ರಾಜ್ (12) ಕೋಸಮಲ್ (7), ಕುನಾಲ್(5) ಹಾಗೂ ಅಣ್ಣನ ಮಗ ಗೋವಿಂದ್(12) ಎಂಬುವರ ಕೊಲೆಯಾಗಿತ್ತು.
ಕೊಲೆಯಾದ ಲಕ್ಷ್ಮಿ ಪತಿ ಗಂಗಾರಾಮ್ ಗೆ ಅದೇ ಹೆಸರಿನ ಬೇರೆ ಹೆಂಗಸು ಲಕ್ಷ್ಮಿ ಎಂಬಾಕೆ ಜೊತೆ ಅಕ್ರಮ ಸಂಬಂಧವಿತ್ತು. ಗಂಗಾರಾಮ್ ಪತ್ನಿ ಹಾಗೂ ಮಕ್ಕಳನ್ನು ಕೊಲೆ ಮಾಡಿದ್ರೆ, ಪ್ರಿಯಕರನ ಜೊತೆ ಸುಖವಾಗಿರಬಹುದುದೆಂದು ಅವನ ಇಡೀ ಕುಟುಂಬವನ್ನು ಕೊಲೆ ಮಾಡಲು ಆಕೆ ಸ್ಕೆಚ್ ಹಾಕಿದಳು.
ಅಂದು ಶನಿವಾರ ಗಂಗಾರಾಮ್ ಮನೆಯಲ್ಲೆ ಇದ್ದು, ಮುಂಜಾನೆ ವೇಳೆಗೆ ಐವರನ್ನ ಲಕ್ಷ್ಮಿ ಭೀಕರವಾಗಿ ಕೊಲೆ ಮಾಡಿದಳು. ಪೋಲಿಸರಿಗೆ ಲಕ್ಷ್ಮಿ ಬಗ್ಗೆ ಅನುಮಾನ ಬಂದು ಅವರ ಟ್ರೀಟ್ ಮೆಂಟ್ ಕೊಟ್ಟ ಮೇಲೆ ತಾನು ಮಾಡಿದ ಕೊಲೆಯನ್ನು ಖಾಕಿ ಮುಂದೆ ಒಪ್ಪಿಕೊಂಡಳು. ಮಾಡಿದ ತಪ್ಪಿಗೆ ಲಕ್ಷ್ಮಿ ಜೈಲು ಪಾಲಾದರೆ, ಲಕ್ಷ್ಮಿ ಸಹವಾಸ ಮಾಡಿ ಗಂಗಾರಾಮ್ ಈಗ ಹೆಂಡತಿ, ಮಕ್ಕಳನ್ನು ಕಳೆದುಕೊಂಡು ಅನಾಥನಾಗಿದ್ದಾನೆ.

Articles You Might Like

Share This Article