ಡ್ರಮ್ ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ, ಮೂವರ ಬಂಧನ

Social Share

ಬೆಂಗಳೂರು, ಮಾ.16- ರೈಲ್ವೆ ನಿಲ್ದಾಣದ ಮುಂದೆ ಡ್ರಮ್ನಲ್ಲಿ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಮೂಲತಃ ಬಿಹಾರ ರಾಜ್ಯದ ಕಮಾಲ್(21), ತನ್ವೀರ್(28), ಶಾಕೀಬ್(25) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.ಕೊಲೆಯಾದ ಮಹಿಳೆಯನ್ನು ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆ ನಿವಾಸಿ ತಮನ್ನಾ(27) ಎಂದು ಗುರುತಿಸಲಾಗಿದೆ.

ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಪೊರ್ಟಿಕೊ ಮುಂದೆ ಒಂದು ನೀಲಿ ಬಣ್ಣದ ಡ್ರಮ್ನಲ್ಲಿ ಮಾ. 13ರಂದು ಮಹಿಳೆ ಶವ ಪತ್ತೆಯಾಗಿತ್ತು.ಮೇಲ್ನೋಟಕ್ಕೆ ಈ ಮಹಿಳೆಯನ್ನು ಯಾರೋ ಕೊಲೆ ಮಾಡಿ ಶವವನ್ನು ಡ್ರಮ್ನಲ್ಲಿ ಹಾಕಿ ಈ ಜಾಗದಲ್ಲಿ ತಂದಿಟ್ಟು ಸಾಕ್ಷ್ಯವನ್ನು ನಾಶ ಪಡಿಸಲು ಯತ್ನಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡರು.

ಅಂದು ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಬಂದು ಪರಿಶೀಲಿಸಿದ್ದರು. ಮರಣೋತ್ತರ ವೈದ್ಯಕೀಯ ಪರೀಕ್ಷೆಗೆ ಶವವನ್ನು ಒಳಪಡಿಸಿ ಕೊಲೆಯಾದ ಮಹಿಳೆಯ ಗುರುತು ಪತ್ತೆ ಹಾಗೂ ಆರೋಪಿಗಳ ಬಂಧನಕ್ಕೆ ಶೋಧ ಕೈಗೊಂಡರು.

ಮೂರು ತಂಡ ರಚನೆ:
ರೈಲ್ವೆ ಡಿಐಜಿ ಶಶಿಕುಮಾರ್ ಮತ್ತು ಎಸ್ಪಿ ಡಾ. ಸೌಮ್ಯಲತಾ ಅವರ ಮಾರ್ಗದರ್ಶನದಲ್ಲಿ ರೈಲ್ವೆ ಉಪವಿಭಾಗದ ಡಿವೈಎಸ್ಪಿ ರವಿಕುಮಾರ್ ಅವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.
ತನಿಖಾಕಾರಿ ಸಿಪಿಐ ಪ್ರಭಾಕರ್ ಅವರು ತನಿಖೆ ಕೈಗೊಂಡ ಸಮಯದಲ್ಲಿ ಕೊಲೆಯಾದ ಮಹಿಳೆ ಬಿಹಾರ ಮೂಲದ ತಮನ್ನಾ (27) ಎಂಬುದು ಗೊತ್ತಾಗಿದೆ. ನಂತರ ತನಿಖೆಯನ್ನು ಮುಂದುವರೆಸಿ ಆಕೆಯ ಹಿನ್ನೆಲೆಯನ್ನು ಸಂಗ್ರಹಿಸಿದಾಗ ಈ ಮೊದಲು ಬಿಹಾರ ಮೂಲದ ವ್ಯಕ್ತಿಯನ್ನು ಮದುವೆಯಾಗಿ ನಂತರ ಆತನನ್ನು ಬಿಟ್ಟು ಬೆಂಗಳೂರಿಗೆ ಬಂದು ಇಂತಿಕಾಬ್ನನ್ನು ಮದುವೆಯಾಗಿ ಆನೇಕಲ್ನ ಜಿಗಣಿಯಲ್ಲಿ ನೆಲೆಸಿದ್ದುದ್ದು ಗೊತ್ತಾಗಿದೆ.

ನವಾಬ್ ಮತ್ತು ಇಂತಿಕಾಬ್ ಸ್ವಂತ ಸಹೋದರರು. ಈ ಪೈಕಿ ಇಂತಿಕಾಬ್ನನ್ನು ಪುಸಲಾಯಿಸಿ ತಮನ್ನಾ ಮದುವೆಯಾಗಿದ್ದಳು. ನವಾಬ್ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.
ತಮ್ಮನನ್ನು ಪುಸಲಾಯಿಸಿ ತಮನ್ನಾ ಮದುವೆಯಾಗಿದ್ದರಿಂದ ಸಹೋದರ ನವಾಬ್ ಕೋಪಗೊಂಡಿದ್ದನು. ತನ್ನ ತಮ್ಮನ ಬಾಳು ಹಾಳು ಮಾಡಿದ ಈಕೆಯನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ನಿರ್ಧರಿಸಿದ ನವಾಬ್, ನಿನ್ನೊಂದಿಗೆ ಮಾತನಾಡಬೇಕೆಂದು ತಮನ್ನಾಳನ್ನು ಕಲಾಸಿಪಾಳ್ಯದ ತನ್ನ ರೂಮ್ಗೆ ಕರೆಸಿಕೊಂಡಿದ್ದಾನೆ.

ತಮ್ಮನ್ನಾ ಬಂದಾಗ ತನ್ನ ಎಂಟು ಮಂದಿ ಸಹಚರರೊಂದಿಗೆ ಸೇರಿಕೊಂಡು ಆಕೆಯ ವೇಲ್ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿ ಶವವನ್ನು ಡ್ರಮ್ನಲ್ಲಿ ಹಾಕಿ ಆಟೋದಲ್ಲಿ ಡ್ರಮ್ ತೆಗೆದುಕೊಂಡು ಹೋಗಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಮುಂದೆ ಇಟ್ಟು ಪರಾರಿಯಾಗಿದ್ದರು.

ಇದೀಗ ಮೂವರನ್ನು ಬಂಧಿಸಿರುವ ಪೊಲೀಸರು ಪ್ರಮುಖ ಆರೋಪಿ ನವಾಬ್ ಸೇರಿದಂತೆ ಉಳಿದ ಆರೋಪಿಗಳಿಗಾಗಿ ತನಿಖೆ ಮುಂದುವರೆದಿದೆ.

ಬಹುಮಾನ:
ಸವಾಲಾಗಿದ್ದ ಈ ಪ್ರಕರಣವನ್ನು ಕಡಿಮೆ ಸಮಯದಲ್ಲಿ ಬೇಸಿ ಆರೋಪಿಗಳನ್ನು ಬಂಧಿಸಿದ ತಂಡದ ಕಾರ್ಯವೈಖರಿಯನ್ನು ಪ್ರಶಂಸಿಸಿ ಆರಕ್ಷಕ ಮಹಾ ನಿರ್ದೇಶಕರು ಹಾಗೂ ಮಹಾ ನಿರೀಕ್ಷಕರು 50 ಸಾವಿರ ನಗದು ಬಹುಮಾನ ನೀಡಿ ಪೊ್ರೀತ್ಸಾಹಿಸಿದ್ದಾರೆ.

#Women, #DeadBody, #WaterDrum,

Articles You Might Like

Share This Article