ದೇವಸ್ಥಾನದಲ್ಲಿ ಸೀರೆಗೆ ಬೆಂಕಿ ಬಿದ್ದು ಗಾಯಗೊಂಡಿದ್ದ ಮಹಿಳೆ ಸಾವು..!

Spread the love

ಹುಬ್ಬಳ್ಳಿ, ಜೂ.25-ದೇವಸ್ಥಾನದಲ್ಲಿ ಪೂಜೆ ಮಾಡುವಾಗ ಸೀರೆಗೆ ಬೆಂಕಿ ಹೊತ್ತಿಕೊಂಡು ಗಂಭೀರ ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆದರ್ಶನಗರ ನಿವಾಸಿ ಛಾಯಾ ನಾಗರಾಜ್ ಚಂದ್ರಶೇಖರ್ ಮಠ (49) ಮೃತಪಟ್ಟ ಮಹಿಳೆ. ಜೂ.21ರಂದು ಅಧ್ಯಾಪಕನಗರದ ವಿಶ್ವನಾಥ ಕಲ್ಯಾಣ ಮಂಟಪದ ವಿಶ್ವನಾಥ ಮಂದಿರದಲ್ಲಿ ನಾಗರಕಲ್ಲಿಗೆ ಪೂಜೆ ಸಲ್ಲಿಸುತ್ತಿದ್ದರು.

ಈ ವೇಳೆ ದೀಪದ ಕೆಂಡ ಛಾಯಾ ಅವರ ಸೀರೆಗೆ ತಗುಲಿದೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ದೇವಸ್ಥಾನದ ಒಳಗೆ ಓಡಿ ಹೋಗಿದ್ದರು. ಅಲ್ಲಿದ್ದ ಸಾರ್ವಜನಿಕರು ಆಕೆಯನ್ನು ಕಾಪಾಡಲು ಮುಂದಾದರು. ಆದರೆ, ಬೆಂಕಿಯ ಕೆನ್ನಾಲಿಗೆ ಛಾಯಾ ಅವರನ್ನು ಆವರಿಸಿತ್ತು.

ತಕ್ಷಣ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಛಾಯಾ ಮೃತಪಟ್ಟಿದ್ದಾರೆ. ಈ ಸಂಬಂಧ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

Sri Raghav

Admin