ಮಧುಗಿರಿಯಲ್ಲಿ ಭಾರೀ ಮಳೆಗೆ ಮನೆ ಕುಸಿದು ವೃದ್ಧೆ ಸಾವು, ಕೊಚ್ಚಿಹೋದ ಕಾರು

Social Share

ತುಮಕೂರು, ಅ.14- ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀಮಳೆಗೆ ಅಲ್ಲಲ್ಲಿ ಹಾನಿಯಾಗಿದ್ದು, ಮಧುಗಿರಿ ತಾಲ್ಲೂಕಿನ ತುಂಗೋಟಿ ಗ್ರಾಮದಲ್ಲಿ ಮನೆ ಚಾವಣಿ ಕುಸಿದು ಚೌಡಮ್ಮ (70)ಎಂಬುವವರು ಮೃತಪಟ್ಟಿದ್ದಾರೆ.
ಕೊರಟಗೆರೆ ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ದಾಸಲುಕುಂಟೆ ಗ್ರಾಮದ ಕೆರೆ ಭಾರೀ ಮಳೆಯಿಂದ ಸುಮಾರು 18 ವರ್ಷಗಳ ನಂತರ ಕೋಡಿ ಬಿದ್ದಿದೆ.

ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ, ಕೋಡಿ ನೀರು ಬಹು ದೊಡ್ಡ ಪ್ರಮಾಣದಲ್ಲಿ ಹರಿದು ಬರುತ್ತಿದೆ.ಇದನ್ನು ಗಮನಿಸದ ಕಾರು ಚಾಲಕ ಬುಧವಾರ ರಾತ್ರಿ ತುಮಕೂರು ಮಾರ್ಗವಾಗಿ ತೋವಿನಕೆರೆ ಬರುತ್ತಿದ್ದು, ಈ ಸಂದರ್ಭ ಕಾರು ಚಾಲಕನ ಸಮೇತ ಕೆರೆಕೋಡಿ ನೀರಲ್ಲಿ ಕೊಚ್ಚಿ ಹೋದ ಘಟನೆ ನಡೆಯಿತು.

ಕಾರು ಚಾಲಕನನ್ನು ಸ್ಥಳೀಯರು ತಡರಾತ್ರಿಯಲ್ಲಿಯೇ ರಕ್ಷಣೆ ಮಾಡಿದ್ದಾರೆ. ಬಳಿಕ ಬೆಳಗ್ಗೆ ಸ್ಥಳೀಯರಿಂದ ಜೆಸಿಬಿ ಯಂತ್ರದ ಮೂಲಕ ಕಾರನ್ನು ಹೊರ ತೆಗೆಯಲಾಗಿದೆ.

Articles You Might Like

Share This Article