ಸಾಲ ಕೊಟ್ಟ ಮಹಿಳೆಯನ್ನು ಕೊಂದು ತೋಟದಲ್ಲಿ ಹೂತುಹಾಕಿ ಪರಾರಿ

ಕನಕಪುರ, ಜೂ.6- ಸಾಲ ವಾಪಸ್‌‍ ಕೊಡುವುದಾಗಿ ಕರೆಸಿಕೊಂಡು ಮಹಿಳೆಯೊಬ್ಬರನ್ನು ಕೊಲೆ ಮಾಡಿ ರೇಷ್ಮೆ ತೋಟದಲ್ಲಿ ಹೂತುಹಾಕಿ ಆರೋಪಿಗಳು ಪರಾರಿಯಾಗಿರುವ ಘಟನೆ ಗ್ರಾಮಾಂತರ ಪೊಲೀಸ್‌‍ ಠಾಣಾ ವ್ಯಾಪ್ತಿಯ ಚೌಕಸಂದ್ರ ಗ್ರಾಮದಲ್ಲಿ ಜರುಗಿದೆ. ಟಿ.ಗೊಲ್ಲಹಳ್ಳಿ ಗ್ರಾಮದ ವಾಸಿ ಸುನಂದಮ್ಮ(65) ಕೊಲೆಯಾದ ನತದೃಷ್ಟೆಯಾಗಿದ್ದಾರೆ. ಇವರ ಸಮೀಪದ ಸಂಬಂಧಿಗಳು ಎನ್ನಲಾದ ತಾಲೂಕಿನ ಶ್ರೀನಿವಾಸನಹಳ್ಳಿ ಗ್ರಾಮದ ರವಿಕುಮಾರ್‌ ಆತನ ಪತ್ನಿ ಆಶಾ ಎಂಬುವವರಿಂದ ಈ ಹತ್ಯೆಯಾಗಿದೆ ಎಂದು ಗ್ರಾಮಾಂತರ ಪೊಲೀಸ್‌‍ ಠಾಣೆಗೆ ದೂರು ನೀಡಲಾಗಿದೆ. ಮೂಲತಃ ಶ್ರೀನಿವಾಸನಹಳ್ಳಿ ಗ್ರಾಮದ ದಂಪತಿಗಳು ಚೌಕಸಂದ್ರ ತಾಂಡ್ಯ ಸಮೀಪದ … Continue reading ಸಾಲ ಕೊಟ್ಟ ಮಹಿಳೆಯನ್ನು ಕೊಂದು ತೋಟದಲ್ಲಿ ಹೂತುಹಾಕಿ ಪರಾರಿ