ನಂಜನಗೂಡು, ಜು.29- ಬೆಳ್ಳಂ ಬೆಳಗ್ಗೆ ಮಹಿಳೆಯನ್ನು ನಡು ರಸ್ತೆಯಲ್ಲೇ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಕೌಲಂದೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಹಳೇಪುರ ಗ್ರಾಮದ ಗ್ರಾಪಂ ಸದಸ್ಯ ಪ್ರಕಾಶ್ ಎಂಬುವರ ತಾಯಿ ಮಿಣುಕಮ್ಮ(45) ಕೊಲೆಯಾದ ದುರ್ದೈವಿ.
ಅದೇ ಗ್ರಾಮದ ಮದರಿಮಹಾದೇವ ನಾಯಕ ಎಂಬಾತನನ್ನು ಜೊತೆ ಮಿಣುಕಮ್ಮ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಇಂದು ಬೆಳಗ್ಗೆ ಹಾಲು ತರಲು ಮಿಣುಕಮ್ಮ ಮನೆಯಿಂದ ಹೊರಗೆ ಬರುತ್ತಿದ್ದಂತೆ ಅಲ್ಲೇ ಕಾದು ನಿಂತಿದ್ದ ಮದರಿಮಹಾದೇವ ನಾಯಕ ಏಕಾಏಕಿ ಮಚ್ಚಿನಿಂದ ಆಕೆಯಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಹೊರಗಡೆ ಕಿರುಚಾಡುತ್ತಿದ್ದ ಶಬ್ಧ ಕೇಲಿ ಮನೆಯಲ್ಲಿದ್ದ ಮಗ ಹೊರಗಡೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಕಂಡು ಚೀರಿಕೊಂಡಿದ್ದಾನೆ.
ನೆರೆಹೊರೆಯವರು ಇವರ ಮನೆ ಬಳಿ ಜಮಾಯಿಸಿದ್ದರು. ಸುದ್ದಿ ತಿಳಿದು ಕೌಲಂದೆ ಠಾಣೆ ಸಬ್‍ಇನ್ಸ್‍ಪೆಕ್ಟರ್ ಮಹೀಂದ್ರ, ಸಿಪಿಐ ತಳವಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಮದರಿಮಹಾದೇವ ನಾಯಕನಿಗಾಗಿ ಶೋಧ ಕೈಗೊಂಡಿದ್ದಾರೆ.