ಐಪಿಎಸ್ – ಐಎಎಸ್ ಬೀದಿ ಸಂಘರ್ಷ ವಿರುದ್ಧ ಕಠಿಣ ಕ್ರಮ : ಸಚಿವ ಅಶ್ವಥ್ ನಾರಾಯಣ್

Social Share

ಬೆÉಂಗಳೂರು ,ಫೆ.22- ಮಹಿಳಾ ಐಪಿಎಸ್ ಮತ್ತು ಐಎಎಸ್ ಅಧಿಕಾರಿಗಳ ನಡುವಿನ ಸಂಘರ್ಷ ದಲ್ಲಿ ಸರ್ಕಾರ ಇಬ್ಬರ ವಿರುದ್ಧವೂ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಭರವಸೆ ನೀಡಿದರು.

ವಿಧಾನ ಪರಿಷತ್‍ನ ಶೂನ್ಯವೇಳೆಯಲ್ಲಿ ಹಿರಿಯ ಸದಸ್ಯ ಎಚ್.ವಿಶ್ವನಾಥ್ ವಿಷಯ ಪ್ರಸ್ತಾಪಿಸಿ, ಐಪಿಎಸ್ ಅಧಿಕಾರಿ ರೂಪಾ ಮ ದ್ಗಿಲ್, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಸಾಮಾಜಿಕ ಜಾಲತಾಣಗಳಿಂದ ಆರಂಭಿಸಿ ಮಾಧ್ಯಮಗಳ ಮುಖಾಂತರ ಪರಸ್ಪರ ಟೀಕೆ, ಆರೋಪಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರದ ದಕ್ಷತೆ ಬಗ್ಗೆ ಜನರಲ್ಲಿ ಅಪನಂಬಿಕೆ ಬರಲಿದೆ. ಇಬ್ಬರು ಅಧಿಕಾರಿಗಳನ್ನು ತಕ್ಷಣವೇ ಅಮಾನತು ಪಡಿಸಬೇಕು ಎಂದು ಒತ್ತಾಯಿಸಿದರು.

ಗೋವಾಕ್ಕೆ ಗೋಮಾಂಸ ರಫ್ತು ಮಾಡುತ್ತಿರುವುದಾಗಿ ಒಪ್ಪಿಕೊಂಡ ರಾಜ್ಯ ಸರ್ಕಾರ

ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲು ಹೆದರುತ್ತಿರುವುದು ಏಕೆ. ಶಾಸಕ ಸಾ.ರಾ.ಮಹೇಶ್ ಜೊತೆ ಸಂಧಾನಕ್ಕೆ ಹೋಗಲು ರೋಹಿಣಿ ಸಿಂಧೂರಿ ಅವರಿಗೆ ಅನುಮತಿ ನೀಡಲಾಗಿದೆಯೇ? ಮಧ್ಯಸ್ಥಿಕೆ ವಹಿಸಲು ಹಿರಿಯ ಅಧಿಕಾರಿ ಮಣಿವಣನ್ ಅವರಿಗೆ ಅಧಿಕಾರ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿ ಸಚಿವ ಅಶ್ವಥ್ ನಾರಾಯಣ್, ನಿಯಮ ಮೀರಿ ವರ್ತಿಸಿದ ಅಧಿಕಾರಿಗಳನ್ನು ಈಗಗಾಲೇ ವರ್ಗಾವಣೆ ಮಾಡಲಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚೆ ಮಾಡಿ ಮತ್ತಷ್ಟು ಕಠಿಣ ಕ್ರಮ ಜರುತಿಸಲಾಗುವುದು ಎಂದು ಎಚ್ಚರಿಸಿದರು.

Roopa Moudgil, Rohini Sindhuri, Fight, Facebook, Warned, Action, minister ashwath narayan

Articles You Might Like

Share This Article