ಇನ್ನುಮುಂದೆ ಮಹಿಳೆಯರು ಒಂಟಿಯಾಗಿ ಹಜ್ ಯಾತ್ರೆಗೆ ತೆರಳಬಹುದು

Social Share

ದುಬೈ.14-ಹಜ್ ಯಾತ್ರೆಗೆ ಬರುವ ಮಹಿಳೆಯರ ಜೊತೆ ಪುರುಷರು ಇರಲೇಬೇಕೆಂಬ ನಿಯಮವನ್ನು ಬದಲಾವಣೆ ಮಾಡಿ ಸೌದಿ ಅರೇಬಿಯಾ ಹೊಸ ಆದೇಶ ಮಾಡಿದೆ.

ಇದುವರೆಗೂ ಹಜ್ ಯಾತ್ರೆಗೆ ತೆರಳುವ ಮಹಿಳೆಯರ ಜೊತೆ ಪುರುಷರು ಇರಲೇಬೇಕಿತ್ತು. ಪುರುಷರ ರಕ್ಷಣೆ ಇಲ್ಲದೆ ಮಹಿಳೆಯರು ಹಜ್ ಯಾತ್ರೆಗೆ ಹೋಗುವಂತಿರಲಿಲ್ಲ. ಆದರೆ, ಇದೀಗ ಸೌದಿ ಅರೇಬಿಯಾ ಆ ನಿಯಮದಲ್ಲಿ ಬದಲಾವಣೆಗಳನ್ನು ಮಾಡಿ, ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಿದೆ.

ಮಹಿಳೆಯರು ಸ್ವತಂತ್ರರಾಗಿ ಹಜ್ ಯಾತ್ರೆಗೆ ತೆರಳಲು ಅವಕಾಶ ನೀಡಲಾಗುವುದು ಎಂದು ತಿಳಿಸಿದೆ. ಪ್ರಧಾನಿಯಾಗಿರುವ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ,ಯಾತ್ರೆಗೆ ಬರುವ ಮಹಿಳೆಯರಿಗೆ ಯಾವುದೇ ತೊಂದರೆ ಆಗಬಾರದೆಂದು ಸುರಕ್ಷತೆಯನ್ನೂ ಹೆಚ್ಚಿಸಲಾಗಿದೆ ಎಂದು ಸೌದಿ ಅರೇಬಿಯಾದ ಹಜ್ ಮತ್ತು ಉಮ್ರಾ ಸಚಿವ ತೌಫಿಕ್ ಬಿನ್ ಫೌಜಾನ್ ಅಲïರಬಿಯಾ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

ಹೊಸ ನಿಯಮದಲ್ಲಿ ಮಹಿಳೆ ಒಂಟಿಯಾಗಿ ಯಾವುದೇ ರೀತಿಯ ವೀಸಾದೊಂದಿಗೆ ಹಜ್ ಯಾತ್ರೆಗೆ ಸೌದಿ ಅರೇಬಿಯಾಕ್ಕೆ ಬರಬಹುದು

Articles You Might Like

Share This Article