ಬೆಂಗಳೂರು,ಮೇ.25-ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಲ್ಲಿ ಒಂದಾದ 200 ಯೂನಿಟ್ ವಿದ್ಯುತ್ ಉಚಿತ ಘೋಷಣೆ ನಂತರ ಜನ ಕರೆಂಟ್ ಬಿಲ್ ಕಟ್ಟಲ್ಲ ಎಂದು ರಗಳೆ ತೆಗೆದಿರುವ ಬೆನ್ನಲ್ಲೇ ಮಹಿಳೆಯರು ಬಸ್‍ನಲ್ಲಿ ಟಿಕೆಟ್‍ಗೆ ಹಣ ನೀಡಲು ನಿರಾಕರಿಸುತ್ತಿರುವುದು ಬೆಳಕಿಗೆ ಬಂದಿದೆ.
ಐದು ಗ್ಯಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಗ್ಯಾರೆಂಟಿ ವಿಚಾರವೂ ಇತ್ತು ಹೀಗಾಗಿ ಬಸ್‍ಗಳಲ್ಲಿ ಸಂಚರಿಸುವ ಮಹಿಳಾ ಪ್ರಯಾಣಿಕರು ಟಿಕೆಟ್ ಪಡೆಯಲು ನಿರಾಕರಿಸುತ್ತಿರುವುದು ಹೆಚ್ಚಾಗುತ್ತಿದೆ.
ಮಹಿಳೆಯರ ಈ ನಿರ್ಧಾರ ಸರ್ಕಾರಿ ಸಾರಿಗೆ ಬಸ್ನಲ್ಲಿ ಸಿಬ್ಬಂದಿಗಳಿಗೆ ತೀವ್ರ ತೊಂದರೆಯಾಗಿದೆ. ಇದನ್ನು ಮನಗಂಡಿರುವ ಸಾರಿಗೆ ಯೂನಿಯನ್‍ನವರು ಅದಷ್ಟು ಶೀಘ್ರ ಮಹಿಳೆಯರ ಉಚಿತ ಬಸ್ ಸಂಚಾರದ ಬಗ್ಗೆ ಸೂಕ್ತ ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದೆ.
ಭೋಜ್‍ಪುರಿ ನಿರ್ದೇಶಕ ಸುಭಾಷ್ ಚಂದ್ರ ತಿವಾರಿ ನಿಗೂಢ ಸಾವು
ಸರ್ಕಾರಿ ಬಸ್‍ಗಳಲ್ಲಿ ಮಹಿಳೆಯರು ಹಣ ನೀಡಿ ಟಿಕೆಟ್ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹಲವಾರು ಬಸ್‍ಗಳಲ್ಲಿ ನಿರ್ವಾಹಕರು ಹಾಗೂ ಮಹಿಳೆಯರ ನಡುವೆ ವಾಗ್ವಾದ ನಡೆದಿದೆ. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಸಾರಿಗೆ ಯೂನಿಯನ್ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
ಒಂದು ವೇಳೆ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸಲು ಸರ್ಕಾರ ನಿರ್ಧರಿಸಿದರೆ ಆ ಯೋಜನೆ ಜಾರಿಯಿಂದ ನಿಗಮಕ್ಕಾಗುವ ಹೊರೆಯನ್ನ ಸರ್ಕಾರ ಪಾವತಿಸಬೇಕು ಹಾಗೂ ಮುಂಗಡವಾಗೇ ಹಣ ಬಿಡುಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
#Women, #refusing, #tickets, #KSRTC, #CongressGovt, #FreeBusPass, #CongressGuarantee,