ಬೆಂಗಳೂರು, ಸೆ.19- ಒಂದು ವೇಳೆ ಸಂಸತ್ತಿನ ಉಭಯ ಸದನಗಳಲ್ಲಿ ಲೋಕಸಭೆ ಹಾಗೂ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಮಸೂದೆ ಅಂಗೀಕಾರವಾದರೆ ಕರ್ನಾಟಕ ವಿಧಾನ ಸಭೆಯಲ್ಲೂ ನಾರಿಮಣಿ ಗಳ ಸಂಖ್ಯೆ ಏರಿಕೆಯಾಗಲಿದೆ. ರಾಜ್ಯದ ಒಟ್ಟು 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಶೇ.33ರಷ್ಟು ಮೀಸಲಾತಿಯನ್ನು ಜಾರಿಗೆ ಮಾಡಿದರೆ ಮೊದಲ ಬಾರಿಗೆ ವಿಧಾನಸಭೆಯಲ್ಲಿ ಮಹಿಳಾ ಶಾಸಕಿಯರ ಸಂಖ್ಯೆ 74-75ಕ್ಕೆ ಹೆಚ್ಚಳವಾಗಲಿದೆ.
ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಈ ಮೀಸಲಾತಿ ಅನ್ವಯವಾದರೆ 75 ಮಹಿಳಾ ಶಾಸಕಿಯರು ಶಾಸನ ಸಭೆಯನ್ನು ಪ್ರವೇಶಿಸಲಿದ್ದಾರೆ. ರಾಜ್ಯ ಪುನಾರಚನೆಯಾದ 1962ರಿಂದ ಇದುವರೆಗೆ ಆಯ್ಕೆಯಾದ ಮಹಿಳಾ ಶಾಸಕರ ಸಂಖ್ಯೆ ಕೇವಲ 96 ಮಾತ್ರ. ಇದೇ 61 ವರ್ಷಗಳಲ್ಲಿ ರಾಜ್ಯದಲ್ಲಿ 3009 ಪುರುಷ ಶಾಸಕರು ಆಯ್ಕೆಯಾಗಿದ್ದಾರೆ. ಯಾವುದೇ ಪಕ್ಷ ಟಿಕೆಟ್ ನೀಡುವಾಗ ಮಹಿಳೆಯರನ್ನು ಪರಿಗಣಿಸುವುದೇ ಇಲ್ಲ. ಎಲ್ಲ ಪಕ್ಷಗಳೂ ಶೇ.3-7 ರಷ್ಟು ಮಾತ್ರ ಟಿಕೆಟ್ ನೀಡುತ್ತವೆ.
ಹೆಚ್ಚೆಂದರೆ ಒಂದು ಪಕ್ಷ 15 ಮಂದಿ ಮಹಿಳೆಯರನ್ನು ಮಾತ್ರ ಕಣಕ್ಕಿಳಿಸಿದ ಉದಾಹರಣೆ ಸಿಗಬಹುದು. ಕಳೆದ 61 ವರ್ಷಗಳಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಸಂಖ್ಯೆ ಸರಿ ಸುಮಾರು ಸಮಾನವಾಗಿಯೇ ಇದೆ. ಪುರುಷ ಮತ್ತು ಮಹಿಳಾ ಅನುಪಾತವು 53.47ರಿಂದ 51.49 ಆಸುಪಾಸಿನಲ್ಲಿಯೇ ಇದೆ.
ಅ.1ರಿಂದ ಸ್ಥಿರಾಸ್ತಿ ನೋಂದಣಿ ಮಾರ್ಗಸೂಚಿ ದರ ಹೆಚ್ಚಳ
ಹಲವು ಚುನಾವಣೆಗಳಲ್ಲಿ ಮತ್ತು ಹಲವು ಕ್ಷೇತ್ರಗಳಲ್ಲಿ ಮಹಿಳೆಯರೇ ಹೆಚ್ಚು ಮತದಾನ ಮಾಡಿರುವ ದಾಖಲೆ ಇದೆ. ಇತ್ತೀಚಿಗೆ ಮುಗಿದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾದ ಮಹಿಳಾ ಶಾಸಕಿಯರ ಸಂಖ್ಯೆ ಕೇವಲ 10 ಕಾಂಗ್ರೆಸ್ ಮತ್ತು ಬಿಜೆಪಿಯಿಂದ ತಲಾ ನಾಲ್ವರು ಮತ್ತು ಜೆಡಿಎಸ್‍ನಿಂದ ಒಬ್ಬರು ಮತ್ತು ಸ್ವತಂತ್ರವಾಗಿ ಒಬ್ಬ ಶಾಸಕಿ ಆಯ್ಕೆ ಯಾಗಿದ್ದಾರೆ. ಟಿಕೆಟ್ ನೀಡುವಲ್ಲಿಯೂ ತಾರತಮ್ಯ ಈ ಚುನಾವಣೆಯಲ್ಲಿಯೂ ಮುಂದುವರೆದಿದೆ. ಕಾಂಗ್ರೆಸ್ 11, ಬಿಜೆಪಿ 12 ಮತ್ತು ಜೆಡಿಎಸ್ 13 ಮಹಿಳೆಯರನ್ನು ಕಣಕ್ಕಿಳಿಸಿದ್ದವು.
BIG NEWS: ರಾಜ್ಯಾದ್ಯಾಂತ ಹುಕ್ಕಾಬಾರ್ ನಿಷೇಧಿಸಿಲು ರಾಜ್ಯ ಸರ್ಕಾರ ತೀರ್ಮಾನ
ಆಯ್ಕೆಯಾದ ಪ್ರಮಾಣ ಮಾತ್ರ ಶೇ.4 ಈ ಚುನಾವಣೆಯಲ್ಲಿ ಮಹಿಳಾ ಮತದಾರರ ಪ್ರಮಾಣ ಪುರುಷ ಮತದಾರರಿಗೆ ಸರಿಸಮಾನವಾಗಿಯೇ ಇತ್ತು. ಒಟ್ಟು ಮತದಾರರಲ್ಲಿ ಪುರುಷರು 2.67 ಕೋಟಿಯಷ್ಟಿದ್ದರೆ ಮಹಿಳಾ ಮತದಾರರ ಸಂಖ್ಯೆ 2.64 ಕೋಟಿ. ಅಂದರೆ ಪ್ರತಿ 1000 ಪುರುಷ ಮತದಾರರಿದ್ದರೆ, 989 ಮಹಿಳಾ ಮತದಾರರಿದ್ದಾರೆ. ಮತ ಚಲಾವಣೆಯಲ್ಲಿಯೂ ಮಹಿಳೆಯರು ಪುರುಷರಿಗೆ ಸರಿ ಸಮಾನವಾಗಿ ಮತ ಚಲಾಯಿಸಿರುವುದು ಕಂಡು ಬರುತ್ತದೆ. ಶೇ.73.68ರಷ್ಟು ಪುರುಷ ಮತ್ತು ಶೇ.72.7ರಷ್ಟು ಮಹಿಳೆಯರು ಮತ ಚಲಾಯಿಸಿ ದ್ದಾರೆ. ಆದರೆ ವಿಧಾನಸಭೆಯಲ್ಲಿ ಮಹಿಳೆಯರ ಪ್ರಾತಿನಿಧ್ಯ ಮಾತ್ರ ಶೇ. 4 ಮತ್ತು ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.
Women, #ReservationBill, #Parliament, #Karnataka, #Assembly, #women, #Increase,