ಚಿಕಿತ್ಸೆ ನೆಪದಲ್ಲಿ ಮಹಿಳೆಯರ ಅಂಗಾಗ ಮುಟ್ಟುತ್ತಿದ್ದ ಆರೋಪಿ ಬಂಧನ

Social Share

ಬೆಂಗಳೂರು,ನ.16-ಅಕ್ಯೂಪಂಚರ್ ಚಿಕಿತ್ಸೆ ನೀಡುವುದಾಗಿ ಹೇಳಿ ಹೆಣ್ಣು ಮಕ್ಕಳಿಗೆ ಮತ್ತು ಮಹಿಳೆಯರ ಬಟ್ಟೆಗಳನ್ನು ತೆಗೆಸಿ ಚಿಕಿತ್ಸೆ ನೀಡುವ ನೆಪದಲ್ಲಿ ಅವರ ಅಂಗಾಗಗಳನ್ನು ಮುಟ್ಟುತ್ತಿದ್ದಲ್ಲದೆ ತನ್ನ ಮೊಬೈಲ್ನಲ್ಲಿ ವಿಡಿಯೋ ಚಿತ್ರಿಕರಣ ಮಾಡುತ್ತಿದ್ದ ಆರೋಪಿಯನ್ನು ಸಿಸಿಬಿ ಮಹಿಳಾ ಸಂರಕ್ಷಣಾದಳದ ಪೊಲೀಸರು ಬಂಧಿಸಿದ್ದಾರೆ.

ವೆಂಕಟರಮಣ ಬಂಧಿತ ಆರೋಪಿ. ಈತನು ಯಶವಂತಪುರದ ಮತ್ತಿಕೆರೆಯಲ್ಲಿ ತನ್ನ ಮನೆಯ ಬಳಿ ಒಂದು ರೂಮ್ ಬಾಡಿಗೆಗೆ ಪಡೆದುಕೊಂಡು ಆಕ್ಯೂಪಂಚರ್ ಚಿಕಿತ್ಸೆಗೆ ಬರುವ ಮಹಿಳೆಯರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದನು.

ಬೆಂಗಳೂರಿನಲ್ಲಿ ಎಲ್ಲ ಅವಿಷ್ಕಾರ ಸಾಧ್ಯ : ಸಿಎಂ ಬೊಮ್ಮಾಯಿ

ಆರೋಪಿ ವೆಂಕಟರಮಣನ ವಿರುದ್ದ ಯಶವಂತಪುರ,ಬಸವನಗುಡಿ ಪೊಲೀಸ್ ಠಾಣೆ ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಪ್ರಕರಣ ದಾಖಲಾಗುತ್ತಿದಂತೆ ಆರೋಪಿಯು ತನ್ನ ಮನೆಯನ್ನು ಬಿಟ್ಟು ತಲೆ ಮರೆಸಿಕೊಂಡಿದ್ದನು.

ಕಳೆದ 8 ವರ್ಷದಲ್ಲಿ ದ್ವೇಷಾಧಾರಿತ ಭಾಷಣಗಳ ಪ್ರಮಾಣ ಶೇ.500 ರಷ್ಟು ಹೆಚ್ಚಳ

ಕೇಂದ್ರ ಅಪರಾಧ ವಿಭಾಗದ, ಮಹಿಳಾ ಸಂರಕ್ಷಣಾ ದಳ ಆರೋಪಿಯ ಪತ್ತೆಗಾಗಿ ಜಂಟಿ ಪೊಲೀಸ್ ಆಯುಕ್ತರು ಮತ್ತು ಉಪ ಪೊಲೀಸ್ ಆಯುಕ್ತರು ವಿಶೇಷ ತಂಡವನ್ನು ರಚಿಸಿರುತ್ತಾರೆ. ಕೇಂದ್ರ ಅಪರಾಧ ವಿಭಾಗದ ಮಹಿಳಾ ಸಂರಕ್ಷಣಾ ದಳದ ಸಹಾಯಕ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ಗಳಾದ ಗೋವಿಂದರಾಜು, ಹಜರೇಶ್ ಕಿಲ್ಲೇದಾರ್ ಮತ್ತು ದುರ್ಗ ಆರ್ ಮತು ್ತ ಸಿಬ ್ಬಂದಿಗಳ ವಿಶೇಷ ತಂಡ ಆರೋಪಿಯನ್ನು ಆಂದ್ರ ಪ್ರದೇಶದ ಗುತ್ತಿ, ತಾಡಪತ್ರಿಯಲ್ಲಿ ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

Articles You Might Like

Share This Article