ಮಹಿಳೆಯರ ಮತ ಗೆಲ್ಲಲು ರಾಜಕೀಯ ಪಕ್ಷಗಳಿಂದ ಭರ್ಜರಿ ಘೋಷಣೆ

Social Share

ಬೆಂಗಳೂರು,ಜ.24-ಯಾವುದೇ ಚುನಾವಣೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಗಳ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಮಹಿಳಾ ಮತದಾರರ ಮನಗೆಲ್ಲಲು ಪ್ರಮುಖ ರಾಜಕೀಯ ಪಕ್ಷಗಳು ಮುಂದಾಗಿವೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳು ನಾರಿಯರ ಮನಗೆಲ್ಲಲು ವಿಶೇಷ ಕಾರ್ಯಕ್ರಮಗಳನ್ನು ಜಾರಿಗೆ ತರುವುದಾಗಿ ಭರಪೂರ ಭರವಸೆಗಳನ್ನು ಘೋಷಣೆ ಮಾಡುತ್ತಿದ್ದಾರೆ.
ರಾಜ್ಯದಲ್ಲಿ ಈ ಬಾರಿ ಒಟ್ಟು 5, 05,48,553ಮತದಾರರು ಇದ್ದು, ಇದರಲ್ಲಿ 2,51,76,605 ಪುರುಷರು ಮತ್ತು 2,47,53,779 ಮಹಿಳಾ ಮತದಾರರು ಇದ್ದಾರೆ. ಪುರುಷರಿಗೆ ಹೋಲಿಸಿದರೆ ಮಹಿಳಾ ಮತದಾರರ ಸಂಖ್ಯೆ ಕೇವಲ 3,55,399 ಮತಗಳು ಕಡಿಮೆ ಇದೆ.

ಹೆಚ್ಚುಕಡಿಮೆ ಪುರುಷರಿಗೆ ಸರಿಸಮಾನರಾಗಿ ಮಹಿಳಾ ಮತದಾರರು ಇರುವುದರಿಂದ ಈ ಬಾರಿ ಮೂರು ಪಕ್ಷಗಳು ವಿಶೇಷವಾದ ಯೋಜನೆಗಳನ್ನು ಜಾರಿ ಮಾಡುವುದಾಗಿ ಘೋಷಣೆ ಮಾಡುತ್ತಿವೆ.

ಪ್ರತಿಪಕ್ಷ ಕಾಂಗ್ರೆಸ್ ಈಗಾಗಲೇ ಪ್ರತಿ ಮನೆ ಮಹಿಳೆಯರಿಗೆ 2000 ಮಾಸಿಕ ವಿಶೇಷ ಪ್ರೋತ್ಸಾಹ ಧನ ನೀಡುವುದಾಗಿ ಹೇಳಿದ್ದರೆ ಆಡಳಿತಾರೂಢ ಬಿಜೆಪಿ ಕೂಡ ಮಹಿಳೆಯರಿಗಾಗಿ ಗೃಹಶಕ್ತಿ ಎಂಬ ವಿಶೇಷ ಯೋಜನೆಯನ್ನು ಪ್ರಕಟಿಸಿದೆ.

ಇನ್ನು ಜೆಡಿಎಸ್ ಕೂಡ ಪಂಚರತ್ನ ಯೋಜನೆ ಮೂಲಕ ಮಹಿಳೆಯರಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ಆಶ್ವಾಸನೆ ಕೊಟ್ಟಿದೆ. ಹೀಗೆ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರನ್ನು ಓಲೈಸಲು ಆಕರ್ಷಕ ಯೋಜನೆಗಳನ್ನು ರೂಪಿಸಲು ಮುಂದಾಗಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವ ಆಚರಣೆ ಇನ್ನೂ ನಿರ್ಧಾರವಾಗಿಲ್ಲ : ಜಿಲ್ಲಾಧಿಕಾರಿ

ಕಾಂಗ್ರೆಸ್, ಬಿಜೆಪಿಗೆ ಟಕ್ಕರ್ ಕೊಡಲು ಮುಂದಾಗಿರುವ ಜೆಡಿಎಸ್ ಮಹಿಳಾ ಸಬಲೀಕರಣ, ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಯೋಜನೆಯನ್ನು ಮಹಿಳೆಯರಿಗೆ ಮನವರಿಕೆ ಮಾಡಿಕೊಡುವಂತೆ ಸೂಚನೆ ನೀಡಿದೆ. ಜೊತೆಗೆ ಮಾಜಿ ಪ್ರಧಾನಿ ಎಚ್.ಡಿ.ದೆವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವಯಲ್ಲಿ ಮಹಿಳಾ ಪರವಾದ ಆಡಳಿತ ಹಾಗೂ ನಿರ್ಧಾರಗಳ ಬಗ್ಗೆಯೂ ಮತದಾರರಿಗೆ ತಿಳಿಸಿಕೊಡುವಂತೆ ಪಕ್ಷದ ಸಭೆಯಲ್ಲಿ ಸೂಚಿಸಿದೆ.

ಹಿಂದುಳಿದ ವರ್ಗಗಳ ಮಹಿಳೆಯರಿಗೆ ರಾಜಕೀಯ ಮೀಸಲಾತಿ ಕೊಟ್ಟಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಯಾವುದೇ ಒತ್ತಡಕ್ಕೆ ಮಣಿಯದೆ ಲಾಠರಿ, ಸಾರಾಯಿ ನಿಷೇಧ ಮಾಡಿದ್ದು ಕುಮಾರಸ್ವಾಮಿ. ಮತ್ತೆ ಅಧಿಕಾರಕ್ಕೆ ಬಂದರೆ ಮಹಿಳಾ ಸಬಲೀಕರಣಗೊಳಿಸುವ ಯೋಜನೆಗಳ ಜಾರಿ ಮಾಡಲಾಗುವುದು ಎಂಬ ಸಂದೇಶವನ್ನು ಮತದಾರರಿಗೆ ತಲುಪಿಸುವ ಚಿಂತನೆ ಜೆಡಿಎಸ್ ಮಾಡುತ್ತಿದೆ.

ಇದರ ಜೊತೆಗೆ ಈ ಬಾರಿಯ ಚುನಾವಣೆಯಲ್ಲಿ ಹದಿನೈದರಿಂದ ಇಪ್ಪತ್ತು ಮಂದಿ ಮಹಿಳೆಯರಿಗೆ ಟಿಕೆಟ್ ನೀಡಲು ಜೆಡಿಎಸ್ ಚಿಂತನೆ ನಡೆಸಿದೆ. ಇವೆಲ್ಲವನ್ನೂ ಮುಂದಿಟ್ಟುಕೊಂಡು ಮಹಿಳಾ ಮತದಾರರನ್ನ ಸೆಳೆಯಲು ಮಹಿಳಾ ಘಟಕ ಸಕ್ರಿಯವಾಗುವಂತೆ ಸೂಚನೆ ನೀಡಲಾಗಿದೆ. ಪಂಚಾಯ್ತಿ ಮಟ್ಟದಲ್ಲಿ ಸಭೆ, ಸಮಾರಂಭ ಹಮ್ಮಿಕೊಳ್ಳುವಂತೆ ಪಕ್ಷ ಸೂಚನೆ ನೀಡಿದೆ.

ಕರ್ನಾಟಕದಲ್ಲಿಯೂ ಮತದಾರರ ಲಿಂಗ ಅನುಪಾತದಲ್ಲಿ ಸುಧಾರಣೆಯಾಗಿದೆ. ಮೈಸೂರು, ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಉಡುಪಿ ಸೇರಿದಂತೆ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರಗಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ 17 ವಿಭಾಗಗಳಲ್ಲಿ ಹೆಚ್ಚು ಮಹಿಳಾ ಮತದಾರರಿದ್ದಾರೆ.

ಒಂದು ನಿರ್ದಿಷ್ಟ ರಾಜಕೀಯ ಪಕ್ಷವು ತಮಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡುತ್ತದೆ ಎಂದು ಮಹಿಳೆಯರು ತಿಳಿದರೆ, ಅವರು ಅದಕ್ಕೆ ಮತ ಹಾಕುತ್ತಾರೆ. ಎಚ್.ಡಿ.ಕುಮಾರಸ್ವಾಮಿಯವರ ಜನತಾದಳ (ಜಾತ್ಯತೀತ) ಸರ್ಕಾರವು ಮದ್ಯ ನಿಷೇಧವನ್ನು ಘೋಷಿಸಿದಾಗ, ಉತ್ತಮ ಸಂಖ್ಯೆಯ ಮಹಿಳಾ ಮತದಾರರು ಇದ್ದರು, ಕರ್ನಾಟಕದಲ್ಲಿ ಯಾವುದೇ ರಾಜಕೀಯ ಪಕ್ಷದ ಪರವಾಗಿ ಮಹಿಳೆಯರಿಂದ ನಿರ್ಣಾಯಕ ಮತದಾನ ನಡೆದಿಲ್ಲ.

ಕಾಲಕಾಲಕ್ಕೆ ಮಹಿಳಾ ಮತದಾರರ ಆದ್ಯತೆಯಲ್ಲಿ ಬದಲಾವಣೆಯಾಗಿದೆ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರ ಆಡಳಿತದಲ್ಲಿ ಮಹಿಳೆಯರು ಜನರ ಬಳಿಗೆ ಹೋಗಿ ಸಾಂಪ್ರದಾಯಿಕ ಆಚರಣೆಗಳಲ್ಲಿ ಪಾಲ್ಗೊಂಡರೆ ಮತ ಹಾಕುತ್ತಿದ್ದರು. ಬಳ್ಳಾರಿಯಲ್ಲಿ ಪೂಜೆಗಳಲ್ಲಿ ಪಾಲ್ಗೊಂಡಿದ್ದರು. ಸುಷ್ಮಾ ಸ್ವರಾಜ್ ಅವರಿಗೂ ಇದು ಕೆಲಸ ಮಾಡಿತು ಮತ್ತು ಅಲ್ಲಿನ ಜನರು ಅವರನ್ನು ಸ್ವೀಕರಿಸಿದ್ದರು.

ಬಜೆಟ್ ಅನುದಾನ ಬಳಸುವಲ್ಲಿ ಮುಗ್ಗರಿಸಿದ ಬೊಮ್ಮಾಯಿ ಸರ್ಕಾರ

ಆದರೆ ಕಾಲಾಂತರದಲ್ಲಿ ಸಿದ್ದರಾಮಯ್ಯ ಸರ್ಕಾರದ ತಾಳಿ ಭಾಗ್ಯ ಸೇರಿದಂತೆ ಹಲವು ಯೋಜನೆಗಳು ಮಹಿಳಾ ಮತದಾರರಿಗೆ ಯಾವುದೇ ಬದಲಾವಣೆ ತರಲಿಲ್ಲ. ವಾಸ್ತವವಾಗಿ ಇಂತಹ ಹಲವು ಯೋಜನೆಗಳು ಮಹಿಳಾ ಮತದಾರರನ್ನು ಓಲೈಸುವಲ್ಲಿ ವಿಫಲವಾಗಿವೆ.

ಮತದಾನಕ್ಕೆ ಕೆಲವೇ ವಾರಗಳು ಬಾಕಿಯಿರುವಾಗ ಪ್ರತಿ ರಾಜಕೀಯ ಪಕ್ಷಗಳು ಮಹಿಳೆಯರು ಮತ್ತು ಪುರುಷ ಮತದಾರರನ್ನು ಸೆಳೆಯಲು ಪ್ರಯತ್ನಿಸುತ್ತಿವೆ, ಆದರೆ ಅಂತಿಮವಾಗಿ ಮತದಾನವು ಮತದಾರರ ಕೈಯಲ್ಲಿ ಉಳಿಯುತ್ತದೆ. ಇದು ಕಾದು ನೋಡುವ ಆಟವಾಗಿದೆ.

women, voters, political, parties, special scheme, Congress, BJP, JDS,

Articles You Might Like

Share This Article