ಮುಂಬೈ,ನ.2– ಆದ್ಬುತ ಹೋರಾಟದ ಮೂಲಕ ಸಿಡಿದ್ದೆದ್ದಿರುವ ಭಾರತ ಮಹಿಳಾ ಕ್ರಿಕೆಟ್ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ. ಸಮೀಪೈನಲ್‌ನಲ್ಲಿ 7 ಬಾರಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನ ಮಣಿಸಿ ಭಾರತ ಮಹಿಳಾ ಕ್ರಿಕೆಟ್ ತಂಡ 2025ನೇ ಸಾಲಿನ ವಿಶ್ವಕಪ್ ಫೈನಲ್ ತಲುಪಿದ್ದು ಕೋಟ್ಯಾಂತರ ಅಭಿಮಾನಿಗಳು ರೋಚಕ ಕ್ಷಣವನ್ನು ಸವಿಯುತ್ತಿದ್ದಾರೆ.
ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್‌ನಲ್ಲಿ ಭಾರತ- ದಕ್ಷಿಣ ಆಫ್ರಿಕಾ ಸೆಣೆಸುತ್ತಿದ್ದು,ಭಾರತದ ಸಿಂಹಿಣಿಯರ ಮೇಲೆ ಅಪಾರ ನಂಬಿಕೆ ನೆಟ್ಟಿದೆ.ಕಳೆದ ವರ್ಷ ಅಮೆರಿಕಾದಲ್ಲಿ ನಡೆದ ಟಿ.20 ಟೂರ್ನಿಯ ಫೈನಲ್‌ನಲ್ಲಿ ಭಾರತ ವನಿತೆಯರು ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಟಿ20 ವಿಶ್ವಕಪ್ ಟ್ರೋಫಿ ಮುಡಿಗೇರಿಸಿಕೊಂಡಿಸಿಕೊಂಡಿದ್ದರು ಈಗ ಏಕದಿನ ಪಂದ್ಯದಲ್ಲೂ ನಾವೇ ಚಾಂಪಿಯನ್ ಎಂದು ಸಾರಲು ಮುಂದಾಗಿದೆ.
ಐಸಿಸಿ ಅಧ್ಯಕ್ಷ ಜಯ್ ಶಾ ಮಹಿಳಾ ತಂಡ ಪ್ರಶಸ್ತಿ ಗೆದ್ದರೆ ಅವರಿಗೆ ಅವರು ಸಮಾನ ವೇತನ ನೀತಿ ಅಡಿಯಲ್ಲಿ ನಗದು ಬಹುಮಾನ ನೀಡಲು ಬಿಸಿಸಿಐ ಸಂಪೂರ್ಣ ಸಿದ್ಧವಾಗಿದೆ ಎಮದು ಹೇಳಿದ್ದಾರೆ.
ಪುರುಷರ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ಬಹುಮಾನ ನೀಡಿತ್ತು. ಅದೇ ರೀತಿ ಮಹಿಳಾ ತಂಡ ವಿಶ್ವಕಪ್ ಗೆದ್ದರೂ ಅಷ್ಟೇ ಮೊತ್ತವನ್ನ ಬಹುಮಾನವಾಗಿ ನೀಡಲು ಉನ್ನತ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಪ್ರಸ್ತತ ಐಸಿಸಿಯಿಂದ ಚಾಂಪಿಯನ್ ತಂಡಕ್ಕೆ 37.3 ಕೋಟಿ ರೂ. ಹಾಗೂ ರನ್ನರ್ ಅಪ್ ತಂಡಕ್ಕೆ 20 ಕೋಟಿ ರೂ. ಬಹುಮಾನ ಸಿಗಲಿದೆ.
2008ರಲ್ಲಿ ಭಾರತ ವನಿತೆಯರು ಮೊದಲ ಬಾರಿ ಫೈನಲ್ ಪ್ರವೇಶಿಸಿದಾಗ ಆಸೀಸ್ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್ ನಲ್ಲಿ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಲಾರ್ಡ್ಸ್ ನಲ್ಲಿ ಮಹಿಳಾ ತಂಡ ಸೋತಾಗ ಪ್ರತಿಯೊಬ್ಬರಿಗೂ ತಲಾ 50 ಲಕ್ಷ ಬಹುಮಾನ ಘೋಷಿಸಿತ್ತು. ಸದ್ಯ 8 ವರ್ಷಗಳ ಬಳಿಕ ಭಾರತ 3ನೇ ಬಾರಿಗೆ ಫೈನಲ್ ತಲುಪಿದ್ದು, ಚೊಚ್ಚಲ ಟ್ರೋಫಿ ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ.
