600 ಕೋಟಿ ವೆಚ್ಚದ ‘ಅನುಭವ ಮಂಟಪ’ ಯೋಜನೆಗೆ ಚಾಲನೆ

Social Share

ಬೆಂಗಳೂರು,ಡಿ.2- ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ತಿಂಗಳುಗಳು ಬಾಕಿಯಿದ್ದು, ಈ ನಡುವಲ್ಲೇ ರಾಜ್ಯ ಸರ್ಕಾರ ಬೀದರ್‍ನಲ್ಲಿ 600 ಕೋಟಿ ರೂ. ವೆಚ್ಚದ ಅನುಭವ ಮಂಟಪ ಯೋಜನೆಗೆ ಚಾಲನೆ ನೀಡಿದೆ.

2021ರ ಜನವರಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳಾದ ಬಳಿಕ ಇದೀಗ ಯೋಜನೆಗೆ ಸರ್ಕಾರ ಚಾಲನೆ ದೊರೆತಿದೆ. ಸರ್ಕಾರದ ಈ ಕ್ರಮವು ಕಲ್ಯಾಣ ಕರ್ನಾಟಕ ಪ್ರದೇಶದ ಲಿಂಗಾಯತ ಮತದಾರರನ್ನು ಓಲೈಸುವ ಪ್ರಯತ್ನವೆಂದು ಪರಿಗಣಿಸಲಾಗುತ್ತಿದೆ.

12ನೇ ಶತಮಾನದ ಸುಧಾರಕ ಬಸವೇಶ್ವರರು ಸ್ಥಾಪಿಸಿದ ಅನುಭವ ಮಂಟಪವನ್ನು ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾಗಿದೆ. ಬಸವೇಶ್ವರರ ಬೋಧನೆಗಳನ್ನು ಪ್ರಚಾರ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಮೊದಲು 2016ರಲ್ಲಿ ರಾಜ್ಯದಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಸ್ತಾಪಿಸಿತ್ತು. ನಂತರ 2019ರಲ್ಲಿ ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ರಾಜ್ಯ ಸಚಿವ ಸಂಪುಟವು ಅನುಮೋದನೆ ನೀಡಿತ್ತು.

ಅತ್ತಿಗೆ ಮೇಲಿನ ವ್ಯಾಮೋಹಕ್ಕೆ ಷಡ್ಕನನ್ನು ಕೊಂದು ಹೂತು ಹಾಕಿದ ಆರೋಪಿ

ಯೋಜನೆಯ ಪ್ರಕಾರ, ಅನುಭವ ಮಂಟಪವು 770 ಸ್ತಂಭಗಳೊಂದಿಗೆ ಆರು ಮಹಡಿಗಳನ್ನು ಹೊಂದಿರುತ್ತದೆ ಮತ್ತು ಚಾಲುಕ್ಯ ಶೈಲಿಯ ವಾಸ್ತುಶಿಲ್ಪದ ಮೇಲೆ ನಿರ್ಮಿಸಲಾಗುತ್ತಿದೆ. ಅನುಭವ ಮಂಟಪದಲ್ಲಿ 770 ಶರಣರು (ಬಸವಣ್ಣನವರ ಅನುಯಾಯಿಗಳು) ಇದ್ದರು ಎಂದು ನಂಬಲಾಗಿದೆ.

ಇದರಂತೆ ಆಡಿಟೋರಿಯಂನಲ್ಲಿ 770 ಆಸನ ಸಾಮಥ್ರ್ಯದ ಸಭಾಂಗಣ ಕೂಡ ಇರಲಿದೆ. 612 ಕೋಟಿ ರೂ.ಗಳ ಪರಿಷ್ಕೃತ ಅಂದಾಜಿಗೆ ಜೂನ್‍ನಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಪುಣೆ ಮೂಲದ ಕಂಪನಿಗೆ ಆಗಸ್ಟ್‍ನಲ್ಲಿಯೇ ಕಾಮಗಾರಿಯ ಆರ್ಡರ್ ನೀಡಲಾಗಿದೆ ಎಂದು ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಮೂಲಗಳು ತಿಳಿಸಿವೆ.

ಬಿಜೆಪಿ ಪರ ಪ್ರಚಾರ ಮಾಡಿದ ಕಾಂಗ್ರೆಸ್ ಮಾಜಿ ಶಾಸಕನ ಉಚ್ಚಾಟನೆ

ಅನುಭವ ಮಂಟಪದ ಅಡಿಪಾಯದ ಕೆಲಸ ಕೆಲವೇ ವಾರಗಳ ಹಿಂದೆ ಪ್ರಾರಂಭವಾಗಿದೆ. ಇಷ್ಟು ವರ್ಷಗಳಾದರೂ ಅನುಭವ ಮಂಟಪ ಕಾಮಗಾರಿ ಆರಂಭವಾಗದೇ ಇದ್ದರೆ, ಇದು ಲಿಂಗಾಯತ ಮತಗಳ ಮೇಲೆ ಪರಿಣಾಮ ಬೀರಲಿದೆ ಹಾಗೂ ಆಡಳಿತಾರೂಢ ಪಕ್ಷಕ್ಕೂ ಹಿನ್ನೆಡೆಯುಂಟಾಗುವಂತೆ ಮಾಡಲಿದೆ. ನಿಗದಿತ ಸಮಯಕ್ಕೆ ಯೋಜನೆ ಆರಂಭವಾಗಿದ್ದೇ ಆದರೆ ಈಗಾಗಲೇ ಅರ್ಧದಷ್ಟು ಕಾಮಗಾರಿ ಪೂರ್ಣಗೊಳ್ಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2021ರಲ್ಲಿ ಬಸವಕಲ್ಯಾಣ ಉಪಚುನಾವಣೆಗೆ ಕೆಲವೇ ವಾರಗಳ ಮೊದಲು ಅಂದಿನ ಸಿಎಂ ಯಡಿಯೂರಪ್ಪ ಶಂಕುಸ್ಥಾಪನೆ ನೆರವೇರಿಸಿ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವುದಾಗಿ ಘೋಷಿಸಿದ್ದರು.

ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್

ಆದರೆ ಯೋಜನೆಗೆ ವಿಸ್ತತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗದ ಕಾರಣ ಕಾಮಗಾರಿ ಆರಂಭಗೊಂಡಿರಲಿಲ್ಲ. ಡಿಪಿಆರ್ ಇಲ್ಲದೆ ನಿಜವಾದ ಕಾಮಗಾರಿಗೆ ಟೆಂಡರ್ ಕರೆಯಲು ಸಾಧ್ಯವಾಗಿರಲಿಲ್ಲ.

work, begins, Rs600cr, Anubhava Mantapa, Bidar,

Articles You Might Like

Share This Article