ಶೇ.50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ವಿಸ್ತರಣೆ

Social Share

ನವದೆಹಲಿ,ಜು.20- ವಿಶೇಷ ಆರ್ಥಿಕ ವಲಯ ಘಟಕಗಳಲ್ಲಿ ಗರಿಷ್ಠ ಒಂದು ವರ್ಷದ ವರೆಗೆ ಮನೆಯಿಂದ ಕೆಲಸ ಮಾಡುವ ಅವಕಾಶವಿದ್ದು, ಒಟ್ಟು ಉದ್ಯೋಗಿಗಳ ಪೈಕಿ ಶೇ.50 ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ ನಿಯಮವನ್ನು ವಿಸ್ತರಿಸಬಹುದು ಎಂದು ವಾಣಿಜ್ಯ ಸಚಿವಾಲಯ ತಿಳಿಸಿದೆ.

ಎಲ್ಲಾ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್ ಫ್ರಮ್ ಹೋಂ ನೀತಿಯನ್ನು ಪರಿಚಯಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಅಧಿಸೂಚನೆಯನ್ನು ಹೊರಡಿಸಿದೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ವಿಭಾಗಗಳೊಂದಿಗೆ ಹಲವು ಸುತ್ತಿನ ಚರ್ಚೆ ನಡೆಸಿ, ಈ ನಿರ್ಧಾರಕ್ಕೆ ಬರಲಾಗಿದೆ. ಕೇಂದ್ರ ಸರ್ಕಾರದ ನೂತನ ನಿಯಮಗಳ ಪ್ರಕಾರ, ಗುತ್ತಿಗೆ ಆಧಾರಿತ ಉದ್ಯೋಗಿಗಳನ್ನು ಒಳಗೊಂಡಂತೆ ಒಟ್ಟು ಪ್ರಮಾಣದ ಶೇ. 50ರಷ್ಟು ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಆಯ್ಕೆ ನೀಡಬಹುದು.

ಶೇ.50ಕ್ಕಿಂತಲೂ ಅಕ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ನೀಡುವ ಅಧಿಕಾರವನ್ನು ವಿಶೇಷ ಆರ್ಥಿಕ ವಲಯ ಅಭಿವೃದ್ಧಿ ಆಯುಕ್ತರಿಗೆ ನೀಡಲಾಗಿದೆ. ಈ ರೀತಿ ಶೇ. 50ಕ್ಕಿಂತ ಹೆಚ್ಚು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕಾದರೆ ಅದಕ್ಕೆ ಸಂಬಂಧಪಟ್ಟ ಸೂಕ್ತ ಕಾರಣವನ್ನು ಲಿಖಿತವಾಗಿ ನೀಡಬೇಕಾಗುತ್ತದೆ.

ಇವರಲ್ಲಿ ಐಟಿ ಅಥವಾ ಐಟಿಇಎಸ್ ಎಸ್‍ಇಜೆಡ್ ಘಟಕಗಳ ಉದ್ಯೋಗಿಗಳು, ತಾತ್ಕಾಲಿಕವಾಗಿ ಅಸಮರ್ಥರಾಗಿರುವ ನೌಕರರು, ಆಫ್‍ಸೈಟ್‍ನಲ್ಲಿ ಕೆಲಸ ಮಾಡುತ್ತಿರುವ ನೌಕರರು ಈ ನಿಯಮಕ್ಕೆ ಒಳಪಡಲಿದ್ದಾರೆ ಎಂದು ಸಚಿವಾಲಯ ಹೇಳಿದೆ.

ಮನೆಯಿಂದ ಕೆಲಸ ಮಾಡುವುದನ್ನು ಈಗ ಗರಿಷ್ಠ ಒಂದು ವರ್ಷದ ಅವಗೆ ಅನುಮತಿಸಲಾಗಿದೆ. ಆದಾಗ್ಯೂ, ಘಟಕಗಳ ಕೋರಿಕೆಯ ಮೇರೆಗೆ ಇನ್ನೊಂದು ವರ್ಷಕ್ಕೆ ಜಿಲ್ಲಾಕಾರಿ ಒಂದು ಬಾರಿಗೆ ಮಾತ್ರ ಮಾತ್ರ ವಿಸ್ತರಿಸಬಹುದಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಮುಂದಿನ ಒಂದು ವರ್ಷದವರೆಗೆ ವಿಶೇಷ ಆರ್ಥಿಕ ವಲಯದ ಉದ್ಯೋಗಿಗಳು ವರ್ಕ್ ಫ್ರಮ್ ಹೋಂ ಸೌಲಭ್ಯವನ್ನು ನೀಡಬಹುದು. ಅದಕ್ಕಿಂತಲೂ ಹೆಚ್ಚಿನ ಸಮಯ ವರ್ಕ್ ಫ್ರಮ್ ಹೋಂ ನೀಡುವ ಅಕಾರ ಆ ಘಟಕದ ಡಿಸಿಯುಗೆ ಇರುತ್ತದೆ.

ಭಾರತದಲ್ಲಿ ಈ ವಿಶೇಷ ಆರ್ಥಿಕ ವಲಯ (ಎಸ್‍ಇಝಡ್) ಘಟಕ ಸ್ಥಾಪಿಸುವ ವ್ಯವಹಾರಗಳಿಗೆ ಪ್ರೋತ್ಸಾಹ ಧನ ದೊರಕುತ್ತದೆ. ಉಚಿತ ವಿದ್ಯುತ್, ನೀರು ಸರಬರಾಜು, ಭೂಮಿ ಬೆಲೆಯಲ್ಲಿ ಇಳಿಕೆ ಇತ್ಯಾದಿಗಳು ಇರುತ್ತವೆ.

ಕೇಂದ್ರ ವಾಣಿಜ್ಯ ಸಚಿವಾಲಯ ವಿಶೇಷ ಆರ್ಥಿಕ ವಲಯಗಳ ನಿಯಮಗಳು, 2006ರಲ್ಲಿ ವರ್ಕ್ ಫ್ರಂ ಹೋಮ್‍ಗಾಗಿ ಹೊಸ ನಿಯಮವನ್ನು ಸೂಚಿಸಿತ್ತು.
ಎಲ್ಲಾ ವಿಶೇಷ ಆರ್ಥಿಕ ವಲಯಗಳಲ್ಲಿ ದೇಶಾದ್ಯಂತ ಏಕರೂಪದ ವರ್ಕ್ ಫ್ರಂ ಹೋಂ ನೀತಿಗೆ ನಿಬಂಧನೆಯನ್ನು ಮಾಡಲು ಉದ್ಯಮದ ಬೇಡಿಕೆಯ ಮೇರೆಗೆ ಅಸೂಚನೆಯನ್ನು ಹೊರಡಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.

Articles You Might Like

Share This Article