3ನೇ ಮಹಡಿಯಿಂದ ಆಯತಪ್ಪಿ ಬಿದ್ದು 3 ಕಾರ್ಮಿಕರಿಗೆ ಗಾಯ

Social Share

ಬೆಂಗಳೂರು, ಸೆ. 29- ಸಿಮೆಂಟ್ ಪ್ಲಾಸ್ಟಿಂಗ್ ಕೆಲಸ ಮಾಡುತ್ತಿದ್ದಾಗ ಮೂರನೇ ಮಹಡಿಯಿಂದ ಆಯತಪ್ಪಿ ಬಿದ್ದು ಮೂವರು ಕಾರ್ಮಿಕರು ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಹೊಸಕೆರೆಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡವಿದ್ದು , ಸಿಮೆಂಟ್ ಪ್ಲಾಸ್ಟಿಂಗ್‍ಗಾಗಿ ಸಾರ್ವೆ ಕಟ್ಟಲಾಗಿದೆ. ಇಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಮೂವರು ಕಾರ್ಮಿಕರು ಸಾರ್ವೆ ಮೇಲೆ ನಿಂತುಕೊಂಡು ಮೂರನೆ ಮಹಡಿಯಲ್ಲಿ ಸಿಮೆಂಟ್ ಪ್ಲಾಸ್ಟಿಂಗ್ ಮಾಡುತ್ತಿದ್ದರು.

ಆ ಸಂದರ್ಭದಲ್ಲಿ ಸಾರ್ವೆಯ ಗಳ (ಬೊಂಬು)ಗಳು ಕಳಚಿಕೊಂಡಿದ್ದರಿಂದ ಮೂವರೂ ಕೆಳಗೆ ಬಿದ್ದು ಗಾಯಗೊಂಡರು.
ತಕ್ಷಣ ಈ ಮೂವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article