ಉಕ್ರೇನ್‍ಗೆ 3 ಶತಕೋಟಿ ಡಾಲರ್ ತುರ್ತು ನೆರವು ಘೋಷಿಸಿದ ವಿಶ್ವಬ್ಯಾಂಕ್

Social Share

ನವದೆಹಲಿ,ಮಾ.2- ಯುದ್ಧ ಪೀಡಿತ ಉಕ್ರೇನ್‍ಗೆ ವಿಶ್ವಬ್ಯಾಂಕ್ ಮೂರು ಶತಕೋಟಿ ಡಾಲರ್ ತುರ್ತು ನೆರವಿನ ಪ್ಯಾಕೇಜನ್ನು ಘೋಷಿಸಿದ್ದು, ಇದೇ ವೇಳೆ ಆಪ್ಘಾನಿಸ್ತಾನಕ್ಕೂ ಒಂದು ಶತಕೋಟಿ ಡಾಲರ್ ನೆರವು ನೀಡುವುದಾಗಿ ಹೇಳಲಾಗಿದೆ.
ವಿಶ್ವಬ್ಯಾಂಕ್‍ನ ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಮತ್ತು ಐಎಂಎಫ್‍ನ ಮುಖ್ಯಸ್ಥ ಕ್ರಿಸ್ಟೇಲಿನ ಜರ್ಜಿವಾ ಅವರು ಜಂಟಿ ಹೇಳಿಕೆ ನೀಡಿದ್ದು, ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ ಯುದ್ಧ ಪೀಡಿತ ಉಕ್ರೇನ್‍ಗೆ ಮೂರು ಬಿಲಿಯನ್ ನೆರವು ನೀಡುತ್ತಿದೆ. ಇದರಲ್ಲಿ 350 ಮಿನಿಯನ್ ತುರ್ತು ಹಣಕಾಸು ನೆರವು ಹೋಂದಿದೆ ಎಂದು ಹೇಳಿದ್ದಾರೆ.
ಈ ನಡುವೆ ತಾಲಿಬಾನ್‍ಗಳ ಆಕ್ರಮಣದಿಂದ ನಾಗರಿಕ ಯುದ್ಧ ಸಂಭವಿಸಿ ಸಂಕಷ್ಟಕ್ಕೊಳಗಾಗಿರುವ ಆಪ್ಘಾನಿಸ್ತಾನಕ್ಕೂ ಒಂದು ಬಿಲಿಯನ್ ಆರ್ಥಿಕ ನೆರವು ಘೋಷಿಸಲಾಗಿದೆ. ಇದನ್ನು ಅಂತಾರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ.

Articles You Might Like

Share This Article