ಮೊರಾಕೊ ವಿರುದ್ಧ ಬೆಲ್ಜಿಯಂ ಸೋಲು, ರೊಚ್ಚಿಗೆದ್ದ ಅಭಿಮಾನಿಗಳಿಂದ ದಾಂಧಲೆ

Social Share

ಬ್ರಸೆಲ್ಸ್,ನ.28- ಕತಾರ್‍ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಬೆಲ್ಜಿಯಂ ತಂಡ ಸೋಲು ಕಂಡ ನಂತರ ರಾಜಧಾನಿ ಬ್ರಸೆಲ್ಸ್ ನಲ್ಲಿ ಅಭಿಮಾನಿಗಳು ರೊಚ್ಚಿಗೆದ್ದು ದಾಂಧಲೆ ನಡೆಸಿದ್ದಾರೆ.

ಕಳೆದ ರಾತ್ರಿ ಉದ್ರಿಕ್ತರು ಕಾರು ಮತ್ತು ಕೆಲವು ಎಲೆಕ್ಟ್ರಿಕ್ ಸ್ಕೂಟರ್‍ಗಳಿಗೆ ಬೆಂಕಿ ಹಚ್ಚಿದ್ದು, ಹಲವಾರು ಸ್ಥಳಗಳಲ್ಲಿ ಹಿಂಸಾಚಾರ ನಡೆದಿದೆ.ಪೊಲೀಸರು ಸುಮಾರು 12 ಜನರನ್ನು ಬಂಧಿಸಿದ್ದಾರೆ ಗಲಭೆಕೋರನ್ನು ತಡೆಯಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಸಿಡಿಸಿದ್ದಾರೆ.

ಮಧ್ಯರಾತ್ರಿ ಪರಿಸ್ಥಿತಿ ಸಹಜತೆಗೆ ಮರಳಿತು ಮತು ಭದ್ರತಾ ಪಡೆ ಗಸ್ತು ತಿರುಗುತ್ತಿದ್ದಾರೆ ಎಂದು ಪೊಲೀಸ್ ವಕ್ತಾರ ಇಲ್ಸೆ ವ್ಯಾನ್ ಡಿ ಕೀರೆ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಶಿಕ್ಷಕಿಗೆ ಕಿರುಕುಳ ನೀಡಿದ 4 ವಿದ್ಯಾರ್ಥಿಗಳ ಬಂಧನ

ಗಲಭೆಕೋರರು ಸ್ಪೋಟಕಗಳು,ಆಯುಧಗಳನ್ನು ಬಳಸಿದರು ಮತ್ತು ಸಾರ್ವಜನಿಕ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಪತ್ರಕರ್ತರೊಬ್ಬರ ಮುಖಕ್ಕೆ ಗಾಯವಾಗಿದೆ.ಕತಾರ್‍ನಲ್ಲಿ ನಡೆಯುತ್ತಿರುವ ಫೀಫಾ ಪುಟ್‍ಬಾಲ್ ವಿಶ್ವಕಪ್‍ನಲ್ಲಿ ಬೆಲ್ಜಿಯಂ ವಿರುದ್ಧ ಮೊರಾಕೊ ಗೆಲುವು ಸಾಧಿಸಿದೆ.

#WorldCup, #riot, #erupts, #fans, #flipcars, #Setfires, #BelgiumvsMorocco, #match,

Articles You Might Like

Share This Article