ವಿಶ್ವ ಡೇರಿ ಶೃಂಗಸಭೆಗೆ ಕೆಎಂಎಫ್‌ ಪ್ರಾಯೋಜಕತ್ವ

Social Share

ಬೆಂಗಳೂರು, ಆ.4- ಅಂತಾರಾಷ್ಟ್ರೀಯ ಡೇರಿ ಫೆಡರೇಷನ್ನ ವಿಶ್ವ ಡೇರಿ ಶೃಂಗಸಭೆಯ ಮುಖ್ಯ ಪ್ರಾಯೋಜಕತ್ವದಲ್ಲಿ ಒಂದಾದ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) 48 ವರ್ಷ ಗಳ ನಂತರ ಇದೇ ಮೊದಲ ಬಾರಿಗೆ ಸೆ.12 ರಿಂದ 15ರವರೆಗೂ ಗುಜರಾತ್ನ ಆನಂದ್ ನಗರದಲ್ಲಿ ಅಂತಾರಾಷ್ಟ್ರೀಯ ವಿಶ್ವ ಡೇರಿ ಶೃಂಗಸಭೆ ನಡೆಯಲಿದ್ದು, ಇದರಲ್ಲಿ ಅಮೂಲ್ ಜೊತೆಗೆ ಕರ್ನಾಟಕ ಹಾಲು ಮಹಾಮಂಡಳಿಯೂ ಸಹ ಮುಖ್ಯ ಪ್ರಾಯೋಜಕತ್ವ ಪಡೆದಿರುವುದು ವಿಶೇಷವಾಗಿದೆ.

ಕರ್ನಾಟಕ ಹಾಲು ಮಹಾಮಂಡಳಿಯು ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ 2ನೇ ಅತಿದೊಡ್ಡ ಸಹಕಾರಿ ಸಂಸ್ಥೆಯಾಗಿದ್ದು, ಕಳೆದ ನಾಲ್ಕೂವರೆ ದಶಕಗಳಿಂದ ಸಹಕಾರ ಚಳುವಳಿಯ ತತ್ವಗಳನ್ನು ಮೈಗೂಡಿಸಿಕೊಂಡು ಗ್ರಾಮೀಣ ಹಾಲು ಉತ್ಪಾದಕರ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಶ್ರಮಿಸಿರುವುದಲ್ಲದೆ, ಗ್ರಾಮೀಣ ಉದ್ಯೋಗ ಮತ್ತು ಹಾಲು ಉತ್ಪಾದನೆಗೆ ಆದ್ಯತೆ ನೀಡಿರುತ್ತದೆ.

ಕರ್ನಾಟಕ ಹಾಲು ಮಹಾಮಂಡಳಿಯ ಪ್ರಮುಖ ಕಾರ್ಯವು ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟವಾಗಿದ್ದು, ಗ್ರಾಹಕರಿಗೆ ನಂದಿನಿ ಬ್ರಾಂಡ್ನ ಶುದ್ಧ ಹಾಗೂ ತಾಜಾ ಹಾಲು ಮತ್ತು ಹಾಲಿನ ಉತ್ಪನ್ನಗಳ ಸರಬರಾಜು ಮಾಡಿ ಮನೆ ಮಾತಾಗಿರುವುದಲ್ಲದೆ, ದೇಶದ ಇತರೆ ರಾಜ್ಯಗಳಲ್ಲಿಯೂ ಸಹ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಜಾಲವನ್ನು ವಿಸ್ತರಿಸಲಾಗಿದೆ.

ಶ್ವೇತ ಕಾಂತಿಯ ಪಿತಾಮಹರಾದ ವರ್ಗೀಸ್ ಕುರಿಯನ್ ಅವರ ರೈತರಿಗಾಗಿ, ರೈತರಿಗೋಸ್ಕರ ಮತ್ತು ರೈತರ ಪರವಾಗಿ ಘೋಷವಾಕ್ಯವನ್ನು ಮಂಡಳವು ಅಳವಡಿಸಿಕೊಂಡಿದೆ. ಮಹಾಮಂಡಳಿ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸಕ್ರಿಯ ರಾಜಕಾರಣಿ ಯಾಗಿರುವುದಲ್ಲದೆ, ಹೈನುಗಾರಿಕೆ ಕ್ಷೇತ್ರದಲ್ಲಿ ಅಗಾಧ ಜ್ಞಾನ ಹೊಂದಿದ್ದು, ವ್ಯವಹಾರ ಅಭಿವೃದ್ಧಿಯ ಏಳಿಗೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಇವರ ಸಮರ್ಥ ನಾಯಕತ್ವ ಮತ್ತು ಪ್ರಮುಖ ನಿರ್ಧಾರಗಳ ಮಾರ್ಗದರ್ಶನದೊಂದಿಗೆ ಮುಂಬರುವ ಆರ್ಥಿಕ ವರ್ಷದಲ್ಲಿ 30,000 ಕೋಟಿ ರೂ. ವಹಿವಾಟು ಸಾಧಿಸುವ ಗುರಿ ಹಮ್ಮಿಕೊಳ್ಳಲಾಗಿದೆ.

ಕರ್ನಾಟಕ ಹಾಲು ಮಹಾಮಂಡಳವು ಹೈನು ಉತ್ಪಾದಕರಿಗೆ ಒಟ್ಟಾರೆ ದಿನವಹಿ 27 ಕೋಟಿ ರೂ. ಪಾವತಿಸುತ್ತಿದ್ದು, ವಹಿವಾಟಾದ ಲಾಭಾಂಶದ 1 ರೂ.ನಲ್ಲಿ ರೈತರಿಗೆ 80 ಪೈಸೆಯಂತೆ ಪಾವತಿಸಿ ಕೇವಲ 10 ಅಥವಾ 20 ಪೈಸೆಯಷ್ಟು ಆಡಳಿತಾತ್ಮಕ ವೆಚ್ಚ ಭರಿಸಲು ಬಳಕೆಯಾಗುತ್ತಿದೆ.

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಭಾರತದ ಗ್ರಾಮೀಣ ಲಕ್ಷಾಂತರ ಹಾಲು ಉತ್ಪಾದಕರಿಗೆ ವೈಜ್ಞಾನಿಕ ಮತ್ತು ತಾಂತ್ರಿಕ ಹೈನೋದ್ಯಮ ಕಾರ್ಯಕ್ರಮಗಳನ್ನು ಏರ್ಪಡಿಸಿ ಗ್ರಾಮೀಣ ಆರ್ಥಿಕತೆಯನ್ನು ಸದೃಢಕೊಳ್ಳಿಸಲು ಪ್ರಮುಖ ಪಾತ್ರ ವಹಿಸಿರುತ್ತದೆ.

ಅಂತಾರಾಷ್ಟ್ರೀಯ ಡೇರಿ ಫೆಡರೇಷನ್ನ ವಿಶ್ವ ಡೇರಿ ಶೃಂಗಸಭೆಗೆ ಪ್ರಪಂಚದಾದ್ಯಂತ ಸುಮಾರು 1500 ಸಂಖ್ಯೆಯ ಅಭ್ಯರ್ಥಿಗಳು ಭಾಗವಹಿಸು ತ್ತಿದ್ದು, ಡೇರಿ ಸಂಸ್ಕರಣಾ ಕಂಪೆನಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉದ್ಯೋಗಿಗಳು, ಸೇರಿ ರೈತರು, 20 ಉದ್ಯಮಕ್ಕೆ ಪೂರೈಕೆದಾರರು, ಶಿಕ್ಷಣ ತಜ್ಞರು, ಸರ್ವ ಪ್ರತಿನಿಧಿಗಳನ್ನು ಶೃಂಗಸಭೆಯು ಒಳಗೊಂಡಿರುತ್ತದೆ.

ಡೇರಿ ಉತ್ಪನ್ನಗಳೊಂದಿಗೆ ಜಗತ್ತನ್ನು ಹೇಗೆ ಪೋಷಿಸಲು ಕೊಡುಗೆ ನೀಡುತ್ತದೆ ಎಂಬುದರ ಕುರಿತು ಜ್ಞಾನ ಮತ್ತು ವಿಚಾರ ಗಳನ್ನು ಹಂಚಿಕೊಳ್ಳಲು ವಿಶ್ವ ಡೇರಿ ಶೃಂಗಸಭೆ- 2022ಯು ವೇದಿಕೆಯನ್ನು ಒದಗಿಸುತ್ತವೆ. ಇದಲ್ಲದೆ, ಹವಮಾನ ಬದಲಾವಣೆಗೆ ಸಂಬಂಸಿ ದಂತೆ ಸವಾಲುಗಳನ್ನು ಎದುರಿಸಿ ಲಾಭದಾಯಕವಾಗಿ ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ.

ಡೇರಿ ವಲಯಕ್ಕೆ ವಿಜ್ಞಾನ ಆಧಾರಿತ ಮಾನದಂಡಗಳ ಅಭಿವೃದ್ಧಿಯಲ್ಲಿ ಮಾನ್ಯತೆ ಪಡೆದ ಅಂತಾರಾಷ್ಟ್ರೀಯ ಪ್ರಾಕಾರ, ವಿಶ್ವದ ಡೇರಿ ಉತ್ಪನ್ನಗಳು ಸುರಕ್ಷಿತ ಮತ್ತು ಸಮರ್ಥನೀಯವೆಂದು ಖಚಿತಪಡಿಸಿಕೊಳ್ಳಲು ನೀತಿ-ನಿಬಂಧನೆಗಳು, ಮಾನದಂಡಗಳನ್ನು ರುಚಿತಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆಸಕ್ತಿ ಹೊಂದಿರುವ ಉತ್ಸಾಹಿಗಳು, ರೈತರು, ಶಿಕ್ಷಣ ತಜ್ಞರು ಮತ್ತು ಉದ್ಯಮಿ ಗಳನ್ನು ಈ ಕಾರ್ಯಕ್ರಮಕ್ಕೆ ಭೇಟಿ ನೀಡಲು ಹಾಗೂ ಡೇರಿ ಉದ್ಯಮದ ಬಗ್ಗೆ ಮತ್ತಷ್ಟು ಅರಿವು ಹೊಂದಲು ಕರ್ನಾಟಕ ಹಾಲು ಮಹಾಮಂಡಳವು ಸ್ವಾಗತಿಸುತ್ತದೆ.

Articles You Might Like

Share This Article