ನವದೆಹಲಿ,ಜ.31- ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಡುವೆ ಭಾರತದ ಮಂಡಿಸುತ್ತಿರುವ ಬಜೆಟ್ ವಿಶ್ವದ ಭರವಸೆಯ ಕಿರಣವಾಗಿದ್ದು, ದೇಶದ ಜನ ಸಾಮಾನ್ಯರ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಪೂರೈಸಲು ಪ್ರಯತ್ನಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುವ ಮೊದಲು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಾಗತಿಕ ಆರ್ಥಿಕತೆಯಲ್ಲಿ ಎಲ್ಲಾ ಕಡೆಯಿಂದ ಸಕಾರಾತ್ಮಕ ಮತ್ತು ಗುರುತಿಸಲ್ಪಟ್ಟ ಸಂದೇಶಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ಮಂಡಿಸಲಿರುವ ಬಜೆಟ್ ಜನರ ನಿರೀಕ್ಷೆ ಮತ್ತು ಆಕಾಂಕ್ಷೆಗಳನ್ನು ಈಡೇರಿಸಲಿದೆ. ಜಗತ್ತು ಭಾರತದತ್ತ ನೋಡುವ ಭರವಸೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ಪ್ರಧಾನಿ ಹೇಳಿದರು.
ಕೇಂದ್ರ ಬಜೆಟ್‍ನಲ್ಲಿ ಕರ್ನಾಟಕಕ್ಕೆ ಬಂಪರ್ ಕೊಡುಗೆ ನಿರೀಕ್ಷೆ
ವಿಶ್ವದ ಗಮನ ಸೆಳೆದಿರುವ ಆಶಾಕಿರಣ ಬಜೆಟ್ ಬಳಿಕ ಮತ್ತಷ್ಟು ಪ್ರಕಾಶಮಾನವಾಗಲಿದೆ. ಇದಕ್ಕಾಗಿ ಹಣಕಾಸು ಸಚಿವರು ಜನರ ಆಕಾಂಕ್ಷೆಗಳನ್ನು ಪೂರೈಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ ಎಂದು ತಾವು ದೃಢವಾಗಿ ನಂಬುವುದಾಗಿ ತಿಳಿಸಿದರು.
ರಾಷ್ಟ್ರಪತಿಗಳ ಭಾಷಣವನ್ನು ಬಹಿಷ್ಕರಿಸಿದ ಬಿಆರ್‌ಎಸ್, ಎಎಪಿ
ರಾಷ್ಟ್ರಪತಿ ದ್ರೌಪದಿ ಮುರ್ಮು ಮೊದಲ ಬಾರಿಗೆ ಸಂಸತ್‍ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣ ಭಾರತದ ಸಂವಿಧಾನದ ಹೆಮ್ಮೆ, ಭಾರತದ ಸಂಸದೀಯ ವ್ಯವಸ್ಥೆಯ ಹೆಮ್ಮೆ ಮತ್ತು ಮಹಿಳೆಯರು ಮತ್ತು ದೇಶದ ಬುಡಕಟ್ಟು ಶ್ರೇಷ್ಠ ಸಂಪ್ರದಾಯಗಳನ್ನು ಗೌರವಿಸುವ ಅವಕಾ ಎಂದು ಮೋದಿ ಕೊಂಡಾಡಿದರು.
World, looking, India, Budget, Modi,