800 ಕೋಟಿ ಮೈಲಿಗಲ್ಲು ದಾಟಿದ ವಿಶ್ವದ ಜನಸಂಖ್ಯೆ

Social Share

ನವದೆಹಲಿ,ನ.15- ವಿಶ್ವದ ಜನಸಂಖ್ಯೆ 800 ಕೋಟಿ ತಲುಪಿದ್ದು, ಮಾನವ ಸಂಖ್ಯೆಯ ಪ್ರಮಾಣದಲ್ಲಿ ಮೈಲಿಗಲ್ಲು ಸ್ಥಾಪಿಸಿದಂತಾಗಿದೆ. ಜೊತೆಗೆ ಪ್ರಮುಖ ಸವಾಲುಗಳು ಕೂಡ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ವಿಶ್ಲೇಷಿಸಿದೆ.

ಜನಸಂಖ್ಯೆ ಹೆಚ್ಚಾದಂತೆಲ್ಲ ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ನೈರ್ಮಲೀಕರಣದಂತಹ ಸವಾಲುಗಳು ತೀವ್ರಗೊಳ್ಳುತ್ತವೆ. ಇವುಗಳನ್ನು ಬದಿಗೆ ಸರಿಸಿ ನಾವು ಮುಂದಡಿ ಇಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ವಿಶ್ವಾದ್ಯಂತ ತಾರತಮ್ಯ ತೀವ್ರಗೊಂಡಿದೆ. ವಿಶ್ವದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಜನ ಖರೀದಿ ಶಕ್ತಿಯನ್ನೇ ಹೊಂದಿಲ್ಲದಷ್ಟು ಬಡತನದಿಂದ ನರಳುತ್ತಿದ್ದಾರೆ.

ಮತ್ತೊಂದೆಡೆ ಶೇ.10ರಷ್ಟು ಶ್ರೀಮಂತರ ಬಳಿ ಸಂಪತ್ತು ಕ್ರೂಢೀಕರಣಗೊಂಡಿದ್ದು, ಒಟ್ಟು ಸಂಪತ್ತಿನ ಶೇ.76ರಷ್ಟು ಇವರ ಬಳಿಯೇ ಇದೆ. ಶೇ.52ರಷ್ಟು ಎಲ್ಲ ಆದಾಯವನ್ನು ಇವರೇ ಹೊಂದಿದ್ದಾರೆ ಎಂದು ಹೇಳಲಾಗಿದೆ.
ಆಫ್ರಿಕಾಖಂಡದಲ್ಲಿರುವ ಜನರಿಗಿಂತಲೂ ಉತ್ತರ ಅಮೆರಿಕದ ಜನರ ಆದಾಯ 16 ಪಟ್ಟು ಹೆಚ್ಚಾಗಿದೆ. ಆದಾಯದ ಅಂತರ ಭಾರತವೂ ಸೇರಿದಂತೆ ಬಹಳಷ್ಟು ದೇಶಗಳ ನಡುವೆ ವ್ಯತ್ಯಾಸ ಹೆಚ್ಚಿದೆ.

ಶ್ರದ್ದಾ ವಿಕೃತ ಹತ್ಯೆ ಹಿಂದೆ ಲವ್ ಜಿಹಾದ್ ಶಂಕೆ, ಗಲ್ಲು ಶಿಕ್ಷೆಗೆ ಒತ್ತಾಯ

ಬಡರಾಷ್ಟ್ರಗಳಿಗಿಂತಲೂ ಶ್ರೀಮಂತ ರಾಷ್ಟ್ರಗಳ ನಾಗರಿಕರ ಜೀವಿತಾವ 30 ವರ್ಷಕ್ಕಿಂತಲೂ ಹೆಚ್ಚುವರಿಯಾಗಿದೆ ಎಂದು ತಿಳಿಸಲಾಗಿದೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಬುಟರೆಸ್, ಜಾಗತಿಕವಾಗಿ ಪರಸ್ಪರ ಸಹಕಾರಕ್ಕೆ ಸೇತುವೆ ನಿರ್ಮಿಸಬೇಕು. ಸಂಘರ್ಷ, ಅಪನಂಬಿಕೆ, ಯುದ್ಧ ಮತ್ತು ಉದ್ವಿಗ್ನ ಸ್ಥಿತಿಗಳನ್ನು ನಿಭಾಯಿಸಲು ನಮ್ಮಷ್ಟಕ್ಕೆ ನಾವೇ ನಿಯಮಗಳನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್‍ನ ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿದ ಬಿಜೆಪಿ

ಜಗತ್ತಿನಲ್ಲಿ 828 ದಶಲಕ್ಷ ಜನ ಈಗಲೂ ಹಸಿವಿನಿಂದ ಬಳಲುತ್ತಿದ್ದಾರೆ. 14 ದಶಲಕ್ಷ ಮಕ್ಕಳು ಗಂಭೀರ ಪ್ರಮಾಣದ ಅಪೌಷ್ಟಿಕತೆಯಿಂದ ನರಳುತ್ತಿದ್ದಾರೆ. ಶೇ.45ರಷ್ಟು ಮಕ್ಕಳು ಹಸಿವಿನ ಕಾರಣಕ್ಕಾಗಿಯೇ ಸಾವನ್ನಪ್ಪುತ್ತಿವೆ ಎಂದು ವರದಿಯಾಗಿದೆ. 2019-20ರ ನಡುವೆ 150 ಮಿಲಿಯನ್ ಜನಸಂಖ್ಯೆ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

Articles You Might Like

Share This Article