ಬೆಂಗಳೂರು.ಸೆ.28- ರೇಬೀಸ್ ರೋಗವನ್ನು ದೇಶಾದ್ಯಂತ ಸಂಪೂರ್ಣವಾಗಿ ತಡೆಗಟ್ಟಲು ಸರ್ಕಾರ ಬದ್ಧವಿದೆ ಎಂದು ಕೇಂದ್ರ ಸರ್ಕಾರದ ಪಶು ಸಂಗೋಪನೆ ಇಲಾಖೆ ಜಂಟಿ ಕಾರ್ಯದರ್ಶಿ ಉಪಮನ್ಯು ಬಸು ಅಭಿಪ್ರಾಯಪಟ್ಟರು.
ಹೆಬ್ಬಾಳದಲ್ಲಿರುವ ಕರ್ನಾಟಕ ಪಶು ವೈದ್ಯಕೀಯ ಪರಿಷತ್‍ನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ರೇಬೀಸ್ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒನ್ ಹೆಲ್ತ್, ಜೀರೋ ಡೆತ್ಸ್ ಎನ್ನುವ ಘೋಷವಾಕ್ಯದೊಂದಿಗೆ ಈ ವರ್ಷ ವಿಶ್ವ ರೇಬೀಸ್ ದಿನ ಆಚರಣೆ ಮಾಡಲಾಗುತ್ತಿದೆ. ರೇಬೀಸ್ ರೋಗ ತಡೆಗಟ್ಟಲು ನೀವೆಲ್ಲರೂ ಸಹಕಾರ ನೀಡಬೇಕು.
ನಾಯಿಗಳಿಗೆ ಕಡ್ಡಾಯವಾಗಿ ರೇಬೀಸ್ ಲಸಿಕೆ ಹಾಕಿಸುವಂತೆ ಉಪಮನ್ಯು ಬಸು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಮಾರಣಾಂತಿಕವಾಗಿರುವ ಪ್ರಾಣಿಜನ್ಯ ರೋಗ ರೇಬೀಸ್ ತಡೆಗಟ್ಟಲು ಲಸಿಕೆ ಅಭಿಯಾನವನ್ನು 15 ದಿನಗಳ ಕಾಲ ದೇಶಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ಪಶು ವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಸಿ.ವೀರಣ್ಣ ಮಾತನಾಡಿ, ರೇಬೀಸ್ ಪೀಡಿತ ನಾಯಿ ಇತರೆ ಪ್ರಾಣಿ ಮತ್ತು ಮನುಷ್ಯರಿಗೆ ಕಚ್ಚಿದರೆ ಶರೀರದೊಳಗೆ ರೇಬೀಸ್ ವೈರಾಣು ಪ್ರವೇಶಿಸಿ ಅಪಾಯ ಉಂಟಾಗುತ್ತದೆ.
ರೇಬೀಸ್ ಸೋಂಕಿತ ಪ್ರಾಣಿಯ ಜೊಲ್ಲಿನಿಂದ ರೇಬೀಸ್ ರೋಗ ಹರಡುತ್ತಿದ್ದು ಇದರ ಬಗ್ಗೆ ಹೆಚ್ಚಿನ ಜಾಗೈತಿ ಅಗತ್ಯ ಎಂದರು.
ಬೆಂ.ಮಹಾವಿದ್ಯಾಲಯದ ಆವರಣದಲ್ಲಿ ರೇಬೀಸ್ ರೋಗ ನಿರ್ಣಯ ಪ್ರಯೋಗಾಲಯ ಸ್ಥಾಪಿಸಲಾಗಿದ್ದು, ರೋಗ ತಡೆಗೆ ಸಾಕಷ್ಟು ಕ್ರಮ ಕೈಗೊಳ್ಳಲಾಗುತ್ತಿದೆ. ರೇಬೀಸ್ ರೋಗ ತಡೆಗಟ್ಟಲು ವಿದ್ಯಾರ್ಥಿಗಳಿಗೆ ಬೋಧನೆಯಲ್ಲಿ ಅಳವಾಗಿ ತಿಳಿಸಿಕೊಡಲಾಗುತ್ತಿದೆ ಎಂದರು.
ಪರಿಷತ್ ಕಾರ್ಯದರ್ಶಿ ಡಾ.ವಿನೋದ್ ಭಟ್ ಮಾತನಾಡಿ, 2030ರೊಳಗೆ ನಾಯಿ ಮೂಲಕ ಮಾನವ ರೇಬೀಸ್ ಅನ್ನು ನಿರ್ಮೂಲನೆ ಮಾಡುವ ಜಾಗತಿಕ ಗುರಿಯನ್ನು ಸಾಸಲು ನಿಗದಿಪಡಿಸಲಾಗಿದೆ ಎಂದರು.
ಇಲಾಖೆ ಆಯುಕ್ತ ಶರತ್ ಮಾತನಾಡಿ, ರೇಬೀಸ್ ನಿಯಂತ್ರಣದಲ್ಲಿ ನಾಯಿ ಕಡಿತವನ್ನು ತಡೆಗಟ್ಟುವುದು ಮುಖ್ಯವಾಗಿದೆ. ನಾಯಿಗಳಿಗೆ ವ್ಯಾಕ್ಸಿನೇಷನ್ ನೀಡುವ ಮೂಲಕ ಮಾನವ ರೇಬೀಸ್ ಅನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಬಣ್ಣಿಸಿದರು.
ಇಲಾಖೆ ನಿರ್ದೇಶಕ ಡಾ.ಮಂಜುನಾಥ್ ಪಾಳೇಗಾರ್ . ಕೆವಿಸಿ ಅಧ್ಯಕ್ಷ ಡಾ.ಸತ್ಯನಾರಾಯಣï, ಅಪರ ನಿರ್ದೇಶಕ ಡಾ.ಪಿ.ಟಿ.ಶ್ರೀನಿವಾಸ್, ಡಾ.ತಿಪ್ಪೇಸ್ವಾಮಿ ಸೇರಿದಂತೆ ಹಲವರಿದ್ದರು.