3ನೇ ಮಹಾಯುದ್ಧ ಕುರಿತ ನಾಸ್ಟ್ರ ಡಮಸ್ ಭವಿಷ್ಯ ನಿಜವಾಗುತ್ತಿದೆಯೇ..!

ನವದೆಹಲಿ,ಏ.14- ಇಸ್ರೇಲ್-ಇರಾನ್ ನಡುವಿನ ಯುದ್ಧವನ್ನು ನಾಸ್ಟ್ರಾಡಾಮಸ್ ನುಡಿದಿದ್ದ ಮೂರನೇ ಮಹಾಯುದ್ಧಕ್ಕೆ ಹೋಲಿಕೆ ಮಾಡಲಾಗುತ್ತಿದೆ. ನಿನ್ನೆಯಿಂದ ಇರಾನ್ ಇಸ್ರೇಲ್ ವಿರುದ್ಧ ದಾಳಿ ಆರಂಭಿಸಿದೆ. ಇಂತಹ ಸಂದರ್ಭದಲ್ಲಿ ಅಮೆರಿಕ ಇಸ್ರೇಲ್ ಬೆಂಬಲಕ್ಕೆ ನಿಂತಿದ್ದರೆ ಚೀನಾ, ರಷ್ಯಾ ಇರಾನ್ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿವೆ ಹೀಗಾಗಿ ಮಧ್ಯ ಪ್ರಾಚ್ಯದಲ್ಲಿ ಪರಿಸ್ಥಿತಿ ಕೈ ಮೀರುವ ಹಂತಕ್ಕೆ ತಲುಪಿರುವುದರಿಂದ ಮೂರನೇ ಮಹಾಯುದ್ಧ ಸಂಭವಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಉತ್ತರ ಮತ್ತು ದಕ್ಷಿಣ ಇಸ್ರೇಲ್‍ನಿಂದ ಉತ್ತರದ ಪಶ್ಚಿಮ ದಂಡೆ ಮತ್ತು ಡೆಡ್ ಸೀ ವರೆಗೆ ವ್ಯಾಪಿಸಿರುವ ಅನೇಕ ಪ್ರದೇಶಗಳಲ್ಲಿ ವಾಯುದಾಳಿ ಸೈರನ್‍ಗಳು ಸದ್ದು ಮಾಡುವುದರೊಂದಿಗೆ, ನೌಕಾ ಯುದ್ಧ ಮತ್ತು ಭೌಗೋಳಿಕ ರಾಜಕೀಯ ಕಲಹದ ಬಗ್ಗೆ ನಾಸ್ಟ್ರಾಡಾಮಸ್ ನುಡಿದಿದ್ದ ಭವಿಷ್ಯದ ಉಲ್ಲೇಖಗಳು ಪುನರಾವರ್ತಿತವಾಗಿವೆ. ಇರಾನ್ ಆತ್ಮಹತ್ಯಾ ಡ್ರೋನ್‍ಗಳು, ಕ್ಷಿಪಣಿಗಳು ಮತ್ತು ರಾಕೆಟ್‍ಗಳನ್ನು ಬಳಸಿಕೊಂಡು ಬಹುಮುಖ ದಾಳಿಯನ್ನು ಪ್ರಾರಂಭಿಸಿದೆ ಹೀಗಾಗಿ ಇಂಟರ್ನೆಟ್ ಬಳಕೆದಾರರು ಮೂರನೇ ಮಹಾಯುದ್ಧದ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಮೂರನೇ ಮಹಾಯುದ್ಧ ಪ್ರಾರಂಭವಾದರೆ ನ್ಯಾಟೋ ಪಡೆಗಳು, ಯುನೈಟೆಡ್ ಸ್ಟೇಟ್ಸ್, ಇಸ್ರೇಲ್ ಮತ್ತು ಯುನೈಟೆಡ್ … Continue reading 3ನೇ ಮಹಾಯುದ್ಧ ಕುರಿತ ನಾಸ್ಟ್ರ ಡಮಸ್ ಭವಿಷ್ಯ ನಿಜವಾಗುತ್ತಿದೆಯೇ..!