ಮ್ಯಾಡ್ರಿಡ್,ಫೆ.24- ಸಾಗರ ಆಹಾರದ ಕುರಿತ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಪೇನಿನ ಕಂಪನಿಯೊಂದು ಮುಂದಿನ ವರ್ಷ ಪ್ರಥಮ ಆಕ್ಟೋಪಸ್ ಫಾರಂಅನ್ನು ತೆರೆಯಲು ಚಿಂತನೆ ನಡೆಸಿದೆ. ಆದರೆ, ಈ ಸಂವೇದನಾಶೀಲ ಪ್ರಾಣಿಗಳ ಬಗ್ಗೆ ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ನಡೆಸಿದ್ದು, ಈ ರೀತಿಯ ಫಾರಂ ತೆರೆಯುವುದು ನೈತಿಕ ಮತ್ತು ಪರಿಸರ ದುರಂತಕ್ಕೆ ದಾರಿಯಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಈ ಆಕ್ಟೋಪಸ್ ಫಾರಂಗೆ 65 ದಶಲಕ್ಷ ಯುರೋಗಳ (74 ದಶಲಕ್ಷ ಅಮೆರಿಕನ್ ಡಾಲರ್‍ಗಳು) ಬಂಡವಾಳ ಹೂಡುತ್ತಿರುವ ನುಯೆವಾ ಪೆಸ್ಕಾನೋವಾ ಕಂಪೆನಿಯ ಆಕ್ವಾಕಲ್ಚರ್ ನಿರ್ದೇಶಕ ರಾಬರ್ಟೋ ರೊಮೇರೋ ಅವರು ಇದು ಒಂದು ಜಾಗತಿಕ ಮೈಲುಗಲ್ಲು ಎಂದು ಹೇಳಿದ್ದಾರೆ.
ಆದರೆ, ಸ್ಥಳೀಯ ಪ್ರಾಧಿಕಾರಗಳಿಂದ ಪರಿಸರ ಅನುಮೋದನೆ ಇನ್ನೂ ಬಾಕಿ ಇದೆ. ವಾಯವ್ಯ ಸ್ಪೇನಿನ ಗಲೀಶಿಯಾದಲ್ಲಿ ಕಂಪೆನಿಯ ಸಂಶೋಧನಾ ಕೇಂದ್ರದಲ್ಲಿ ಆಳವಿಲ್ಲದ ಒಳಾಂಗನ ಕೆರೆಯಲ್ಲಿ ಹಲವಾರು ಆಕ್ಟೋಪಸ್‍ಗಳು ಸಂಚರಿಸಿದವು. ಇಬ್ಬರು ತಂತ್ರಜ್ಞರು ಒಂದು ಪ್ರಬುದ್ಧ ತಳಿಯನ್ನು ಹೆಕ್ಕಿ ತೆಗೆದು ಇತರ ಐದು ಆಕ್ಟೋಪಸ್‍ಗಳೊಂದಿಗೆ ಒಂದು ಬಕೆಟ್‍ನಲ್ಲಿ ಬಿಟ್ಟರು.
ದಶಕಗಳ ಶೈಕ್ಷಣಿಕ ಸಂಶೋಧನೆಯಿಂದ ನಿರ್ಮಾಣಗೊಂಡಿರುವ ನುಯೆವಾ ಪೆಸ್ಕಾನೋವಾ ಪ್ರತಿಸ್ರ್ಪಧಿ ಕಂಪೆನಿಗಳನ್ನು ಮೆಕ್ಸಿಕೋ ಮತ್ತು ಜಪಾನಿನಲ್ಲಿ ಕೈಗಾರಿಕಾ ಮಟ್ಟದ ಸಾಕಾಣಿಕೆಯಲ್ಲಿ ಮಣಿಸಿದೆ. 2026ರ ವೇಳೆಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಆಹಾರ ಸರಪಳಿಗಾಗಿ ವರ್ಷಕ್ಕೆ 3000 ಟನ್‍ಗಳಷ್ಟು ಆಕ್ಟೋಪಸ್‍ಗಳನ್ನು ಉತ್ಪಾದಿಸುವುದು ಮತ್ತು ಗ್ರ್ಯಾನ್ ಕೆನರಿಯಾ ದ್ವೀಪದಲ್ಲಿ ನೂರಾರು ಉದ್ಯೋಗಗಳನ್ನು ಸೃಷ್ಟಿಸುವುದು ಈ ಫಾರಂನ ವಾಣಿಜ್ಯಕ ಉತ್ತೇಜಕ ಕ್ರಮವಾಗಿದೆ ಎಂಬುದು ಸ್ಪಷ್ಟವಾಗಿದೆ.
ವಿಶ್ವಸಂಸ್ಥೆ ಆಹಾರ ಮತ್ತು ಕೃಷಿ ಸಂಘಟನೆಯ ಅಂಕಿ-ಅಂಶಗಳ ಪ್ರಕಾರ 2010 ಮತ್ತು 2019ರ ನಡುವೆ ಜಾಗತಿಕ ಆಕ್ಟೋಪಸ್ ವ್ಯಾಪಾರವು 1.30 ಶತಕೋಟಿ ಅಮೆರಿಕನ್ ಡಾಲರ್‍ಗಳಿಂದ 2.72 ಶತಕೋಟಿ ಡಾಲರ್‍ಗಳಿಗೆ ಏರಿತು. ಲ್ಯಾಂಡಿಂಗ್‍ಗಳು ಶೇ.9ರಷ್ಟು ಮಾತ್ರ ಹೆಚ್ಚಳ ಕಂಡು 3,80,000 ಟನ್‍ಗಳಿಗೆ ತಲುಪಿತು.
# ಕ್ಷೇಮಾಭಿವೃದ್ಧಿ ಕಾಳಜಿಗಳು:
ಹೀಗಿದ್ದರೂ ಆಕ್ಟೋಪಸ್‍ಗಳ ಸಾಕಾಣಿಕೆಗೆ ಈ ಹಿಂದೆ ನಡೆದ ಪ್ರಯತ್ನಗಳು ಅಧಿಕ ಮರಣ ಪ್ರಮಾಣದಿಂದ ಬಾಧಿತವಾಗಿದ್ದವು. ಸಾಗರದಿಂದ ಹಿಡಿದ ಆಕ್ಟೋಪಸ್‍ಗಳ ಘೋಷಣೆ ಆಕ್ರಮಣ, ಸ್ವಜಾತಿ ಭಕ್ಷಣೆ, ಸ್ವಯಂ ಅಂಗಛೇದನದಿಂದ ಸಮಸ್ಯೆಗೀಡಾದವು.
ಸೂಕ್ತ ಟ್ಯಾಂಕ್ ಸ್ಥಿತಿಗಳಲ್ಲಿ ಕಂಪೆನಿಯ ಆಕ್ರಮಣಶೀಲತೆಯನ್ನು ಹೋಗಲಾಡಿಸಿ ಕೂಡಿಹಾಕಿದ ಸ್ಥಿತಿಯಲ್ಲೇ ಐದು ಪೀಳಿಗೆಗಳನ್ನು ಪೋಷಿಸಬಹುದು ಎಂದು ಕೇಂದ್ರದ ನಿರ್ದೇಶಕ ಡೇವಿಡ್ ಚವಾರ್ರಿಯಸ್ ತಿಳಿಸಿದರು. ನಮ್ಮ ಯಾವುದೇ ಸಾಕಾಣಿಕಾ ಕೇಂದ್ರಗಳಲ್ಲಿ ಆಕ್ಟೋಪಸ್‍ಗಳ ಸ್ವಜಾತಿ ಭಕ್ಷಕ ವರ್ತನೆ ಕಂಡು ಬಂದಿಲ್ಲ ಎಂದು ಅವರು ಹೇಳಿದರು.
ಆದರೆ, ಇದು ಎಲ್ಲರನ್ನೂ ಸಮಾಧಾನಗೊಳಿಸಿಲ್ಲ. 2020ರಲ್ಲಿ ಮೈ ಆಕ್ಟೋಪಸ್ ಟೀಚರ್ ಎಂಬ ಸಾಕ್ಷ್ಯಚಿತ್ರದ ಬಳಿಕ (ಓರ್ವ ಚಿತ್ರ ನಿರ್ದೇಶಕ ಮತ್ತು ಆಕ್ಟೋಪಸ್ ಒಂದರ ಗೆಳೆತನದ ಕಥಾನಕ ಇದು) ಆಕ್ಟೋಪಸ್‍ಗಳ ಸುಸ್ಥಿತಿಯ ಬಗೆಗಿನ ಸಾರ್ವಜನಿಕ ದೃಷ್ಟಿಕೋನ, ಕಲ್ಪನೆ ಮತ್ತು ಕಾಳಜಿಗಳು ಅಧಿಕವಾಗಿವೆ.
ಕಳೆದ ವರ್ಷ ಲಮಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನ ಸಂಶೋಧಕರು 300 ವೈಜ್ಞಾನಿಕ ಅಧ್ಯಯನಗಳ ಪರಾಮರ್ಶೆಯಿಂದ ಆಕ್ಟೋಪಸ್‍ಗಳು ಸಂವೇದನೆ ಇರುವ ಜೀವಿಗಳಾಗಿದ್ದು, ದುಃಖ ಮತ್ತು ಸಂತೋಷವನ್ನು ಅನುಭವಿಸಬಲ್ಲವು. ಹೀಗಾಗಿ ಅವುಗಳ ಅಧಿಕ ಕ್ಷೇಮಾಭಿವೃದ್ಧಿ ಕೃಷಿ ಸಾಧ್ಯವಾಗಲಾರದು ಎಂಬ ನಿರ್ಧಾರಕ್ಕೆ ಬಂದರು.
ಸ್ಪೇನ್‍ನಲ್ಲಿನ ಡಬ್ಲ್ಯೂಡಬ್ಲ್ಯೂಎಫ್ ಕನ್ಸರ್ವೇಷನ್ ಸಂಘಟನೆಯ ಮೀನುಗಾರಿಕಾ ಕಾರ್ಯಾಚರಣೆಗಳ ಮುಖ್ಯಸ್ಥ ರೌಲ್‍ಗಾರ್ಸಿಯಾ ಅವರು ಇದನ್ನು ಒಪ್ಪುತ್ತಾರೆ. ಆಕ್ಟೋಪಸ್‍ಗಳು ತೀವ್ರ ಬುದ್ಧಿಶಕ್ತಿಯುಳ್ಳವಾಗಿದ್ದು, ತೀವ್ರ ಕುತೂಹಲಿಗಳೂ ಆಗಿವೆ. ಕೂಡಿಹಾಕಿದ ಸ್ಥಿತಿಯಲ್ಲಿ ಅವು ಸಂತೋಷದಿಂದಿರಲಾರವು ಎಂಬುದು ಚೆನ್ನಾಗಿ ತಿಳಿದಿರುವ ಸಂಗತಿಯಾಗಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಯಾವುದೇ ಜಲಚರಗಳನ್ನು ನೈಸರ್ಗಿಕ ವಸತಿಗಳಿಂದ ಹೊರ ತೆಗೆದು ಬೇರೆಡೆ ಪೋಷಿಸುವುದು ತೌಲನಿಕವಾಗಿ ಲಾಭದಾಯಕ ಎನ್ನುವುದಕ್ಕಿಂತ ತೀರಾ ದುಬಾರಿ ಎನ್ನಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಐರೋಪ್ಯ ಒಕ್ಕೂಟದ ಜೀವಿಗಳ ಸಾಕಾಣಿಕೆ ಕುರಿತ ಕಾನೂನುಗಳು ಅಧಿಕಶೇರುಕಗಳಿಗೆ ಅನ್ವಯವಾಗುವುದಿಲ್ಲ ಮತ್ತು ಸ್ಪೇನ್ ತನ್ನ ಪ್ರಾಣಿ ಸಂರಕ್ಷಣಾ ಶಾಸನವನ್ನು ಬಿಗಿಗೊಳಿಸುತ್ತಿದ್ದರೂ ಆಕ್ಟೋಪಸ್‍ಗಳು ಇದರಲ್ಲಿ ಸೇರ್ಪಡೆಗೊಳ್ಳುವ ಲಕ್ಷಣಗಳಿಲ್ಲ.
