ಇಂದು ವಿಶ್ವ ಪ್ರವಾಸೋದ್ಯಮ ದಿನ. ಈ ವರ್ಷದ ಧ್ಯೇಯವೇನು.. ?

Social Share

ಬೆಂಗಳೂರು : ಇಂದು (ಸೆ.27) ವಿಶ್ವ ಪ್ರವಾಸೋದ್ಯಮ ದಿನ. ನಮ್ಮ ದೇಶ ಪ್ರವಾಸಿ ತಾಣಗಳ ತವರು ಎಂದೇ ಹೇಳಬಹುದು. ಧಾರ್ಮಿಕ ಕ್ಷೇತ್ರಗಳಿಂದ ಹಿಡಿದು, ಕಣ್ಣಿಗೆ ಮುದ, ಹಬ್ಬ ನೀಡುವ ಪ್ರಾಕೃತಿಕ ತಾಣಗಳು ಸೇರಿದಂತೆ ಪ್ರವಾಸಿಗರ ಮನತಣಿಸುವಷ್ಟು ವಿಭಿನ್ನವಾದ ಪ್ರವಾಸಿ ತಾಣಗಳು ನಮ್ಮ ದೇಶದಲ್ಲಿದೆ. ಕೊರೋನಾ ಮುಗಿದ ಮೇಲೆ ಪ್ರವಾಸೋದ್ಯಮ ಮತ್ತೆ ಚೇತರಿಸಿಕೊಳ್ಳುತ್ತಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡಿದೆ.

2022ರಲ್ಲಿ ರೀ ಥಿಂಕಿಂಗ್ ಟೂರಿಸಂ (ಪ್ರವಾಸೋದ್ಯಮದ ಬಗ್ಗೆ ಮತ್ತೆ ವಿಚಾರ ಮಾಡುವುದು) ಅಭಿವೃದ್ಧಿಗೆ ಪ್ರವಾಸೋದ್ಯಮ ಆಧಾರ ಸ್ತಂಭ ಎಂಬ ಆಲೋಚನೆ ಬೆಳಸುವುದು ಎಂಬ ಧ್ಯೇಯದೊಂದಿಗೆ ವಿಶ್ವ ಪ್ರವಾಸೋದ್ಯಮವನ್ನು ಆಚರಿಸಲಾಗುತ್ತಿದೆ.

ವಿಶ್ವ ಪ್ರವಾಸೋದ್ಯಮಕ್ಕೆ ಗಣ್ಯರು ಶುಭಾಶಯಗಳನ್ನು ತಿಳಿಸಿದ್ದು, ನಮ್ಮ ಪರಿಸರವನ್ನು ಉಳಿಸಿ ಬೆಳೆಸೋಣ, ಎಲೆಮರೆ ಕಾಯಿಯಂತೆ ಇರುವ ಪ್ರವಾಸಿತಾಣಗಳನ್ನು ಅಭಿವೃದ್ಧಿ ಪಡಿಸೋಣ ಎಂದು ಕರೆ ನೀಡಿದ್ದಾರೆ.

ಭಾರತದ ನಯಾಗಾರವೆಂದೇ ಕರೆಯಲಾಗುವ ಗೋಕಾಕ್ ಜಲಪಾತವು ಕರ್ನಾಟಕದ ಎರಡನೇ ದೊಡ್ಡ ಜಲಪಾತ. ಬೆಳಗಾವಿಯ ಗೋಕಾಕ್ ನಿಂದ 6 ಕಿ. ಮೀ ದೂರದಲ್ಲಿರುವ ಈ ಜಲಪಾತವು ಘಟಪ್ರಭ ನದಿಯಿಂದ ಉಂಟಾಗುತ್ತದೆ. ಈ ವಿಶ್ವ ಪ್ರವಾಸೋದ್ಯಮ ದಿನದಂದು ನಮ್ಮ ಹಿರಿಯರು ಹಾಗೂ ಪ್ರಕೃತಿಯು ನೀಡಿದ ಪರಿಸರವನ್ನು ಉಳಿಸಿ ಬೆಳೆಸೋಣ.

Articles You Might Like

Share This Article