ಇಸ್ಲಾಮಾಬಾದ್, ಫೆ.1- ಪ್ರಾರ್ಥನೆ ಸಲ್ಲಿಸುವ ಭಕ್ತರ ಮೇಲೆ ಭಾರತದಲ್ಲೂ ದಾಳಿ ನಡೆಸುವುದಿಲ್ಲ. ಅಂತಹ ಘಟನೆ ಪಾಕಿಸ್ತಾನದಲ್ಲಿ ನಡೆದಿರುವುದು ಅವಮಾನಕರವಾಗಿದೆ ಎಂದು ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅಭಿಪ್ರಾಯಪಟ್ಟಿದ್ದಾರೆ.
ಪೇಶಾವರದ ಮಸೀದಿ ಮೇಲೆ ಉಗ್ರರು ನಡೆಸಿದ ದಾಳಿ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ 100ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘಟನೆಯನ್ನು ಉಲ್ಲೇಖಿಸಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮಾತನಾಡಿದ ಅವರು, ಭಾರತ ಅಥವಾ ಇಸ್ರೇಲ್‍ನಂತಹ ದೇಶಗಳಲ್ಲೂ ಇಂತಹ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಏಕತೆ ಪ್ರದರ್ಶಿಸುವಂತೆ ಮನವಿ ಮಾಡಿಕೊಂಡಿರುವ ಸಚಿವರು ಪಾಕಿಸ್ತಾನವನ್ನು ಪ್ರಬಲ ರಾಷ್ಟ್ರವನ್ನಾಗಿ ರೂಪಿಸಿಕೊಳ್ಳಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ಗ್ರಾಮಸ್ಥರಿಂದಲೇ ದೇವಾಲಯದ ಜೀರ್ಣೋದ್ದಾರ
2010 ರಿಂದ 2017 ರವರೆಗಿನ ಭಯೋತ್ಪಾದನಾ ಘಟನೆಗಳನ್ನು ನೆನಪಿಸಿಕೊಂಡ ಸಚಿವರು, ಭಯೋತ್ಪಾಕರ ವಿರುದ್ಧದ ಯುದ್ಧವು ಪಿಪಿಪಿ ಅಧಿಕಾರಾವಧಿಯಲ್ಲಿ ಸ್ವಾತ್‍ನಿಂದ ಪ್ರಾರಂಭವಾಯಿತು ಮತ್ತು ಇದು ಪಿಎಂಎಲï-ಎನ್‍ನ ಹಿಂದಿನ ಅಧಿಕಾರಾವಧಿಯಲ್ಲಿ ಮುಕ್ತಾಯಗೊಂಡಿತು ಮತ್ತು ಕರಾಚಿಯಿಂದ ಸ್ವಾತ್‍ವರೆಗೆ ದೇಶದಲ್ಲಿ ಶಾಂತಿ ಸ್ಥಾಪನೆ ಮಾಡಲಾಯಿತು.
ಆ ಕಾರ್ಯವನ್ನು ಮತ್ತಷ್ಟು ಮುಂದುವರೆಸುವ ಅಗತ್ಯವಿದೆ ಜನರನ್ನು ಶಾಂತಿಕ ಕಡೆಗೆ ಕರೆತರುವ ಪ್ರಯತ್ನವನ್ನು ನಿಲ್ಲಿಸಬಾರದು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಭಾರತದ ಜೆಟ್ ಎಂಜಿನ್ ತಯಾರಿಕೆಗೆ ಅಮೆರಿಕ ಸಹಕಾರ
ನಾನು ಹೆಚ್ಚು ಕಾಲ ಮಾತನಾಡುವುದಿಲ್ಲ ಆದರೆ ಆರಂಭದಲ್ಲಿ ನಾವು ಭಯೋತ್ಪಾದನೆಗೆ ಬೀಜಗಳನ್ನು ಬಿತ್ತಿದ್ದೇವೆ ಅದರ ಪರಿಣಾಮವನ್ನು ಈಗ ಎದುರಿಸುತ್ತಿದ್ದೇವೆ ಹೀಗಾಗಿ ಶಾಂತಿ ಸ್ಥಾಪನೆಯತ್ತ ನಾವು ಈಗ ಒಲವು ತೊರಬೇಕಿದೆ ಎಂದು ಖ್ವಾಜಾ ಅಭಿಪ್ರಾಯಪಟ್ಟಿದ್ದಾರೆ.
worshippers, not killed, India, Pak minister, Peshawar blast,