ಬೆಂಗಳೂರು, ಫೆ.13- ಚೊಚ್ಚಲ ಮಹಿಳಾ ಐಪಿಎಲ್ ಟೂರ್ನಿ ಅಂಗವಾಗಿ ಇಂದು ಮುಂಬೈನ ಐಷಾರಾಮಿ ಖಾಸಗಿ ಹೊಟೇಲ್‍ನಲ್ಲಿ ಮಿನಿ ಹರಾಜು ನಡೆಯುತ್ತಿದ್ದು, ಆರ್‍ಸಿಬಿ ಫ್ರಾಂಚೈಸಿಗಳು ಭರ್ಜರಿ ಬೇಟೆ ಆಡುವ ಮೂಲಕ ತಂಡವನ್ನು ಬಲಿಷ್ಠಗೊಳಿಸಿಕೊಂಡು ಟ್ರೋಫಿ ಗೆಲ್ಲುವತ್ತ ಚಿತ್ತ ಹರಿಸಿದೆ.
ಭಾರತ ತಂಡದ ಸೋಟಕ ಬ್ಯಾಟರ್ ಸ್ಮೃತಿ ಮಂದಾನಾ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಮೊತ್ತಕ್ಕೆ ಬಿಕರಿ ಆಗುತ್ತಾರೆ ಎಂದು ಹರಾಜಿಗೂ ಮುನ್ನವೇ ಅಂದಾಜಿಸಲಾಗಿತ್ತು. ಅದರಂತೆ ಮೂಲ ಬೆಲೆ 50 ಲಕ್ಷ ಹೊಂದಿದ್ದ ಮಂದನಾ, 3.4 ಕೋಟಿಗೆ ಆರ್‍ಸಿಬಿ ತಂಡ ಸೇರಿಕೊಂಡಿದ್ದಾರೆ. ಮಂದಾನಾಗೆ ಮುಂಬೈ ತಂಡವು ಭಾರೀ ಪೈಪೆÇೀಟಿ ನಡೆಸಿತ್ತು.
ಟೀಮ್ ಇಂಡಿಯಾದ ನಾಯಕಿ ಹರ್ಮನ್‍ಪ್ರೀತ್ ಕೌರ್‍ಗೆ ಆರ್‍ಸಿಬಿ ಹಾಗೂ ಮುಂಬೈ ಕ್ಯಾಪಿಟಲ್ಸ್ ಭಾರೀ ಪೈಪೋಟಿ ನೀಡಿದರೂ, ಕೊನೆಗೆ 1.18 ಕೋಟಿಗೆ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.ಆಸ್ಟ್ರೇಲಿಯಾದ ಸ್ಟಾರ್ ಅಲ್‍ರೌಂಡರ್ ಅಷ್ಲೇ ಗಾಡ್ರ್ನರ್ ಅವರು 3.2 ಕೋಟಿಗೆ ಗುಜರಾತ್ ಜಯಂಟ್ಸ್ ತಂಡ ಸೇರಿದರೆ, ಆಸ್ಟ್ರೇಲಿಯಾದ ಸ್ಟಾರ್ ಅಲ್‍ರೌಂಡರ್ ಎಲೀಪ್ ಪೇರಿ 1.7 ಕೋಟಿ ಪಡೆದು ಆರ್‍ಸಿಬಿ ತಂಡ ಕೂಡಿಕೊಂಡಿದ್ದಾರೆ.
ಇಂಗ್ಲೆಂಡ್‍ನ ಸ್ಟಾರ್ ಅಲ್‍ರೌಂಡರ್ ಸೋಫಿಯಾ ಎಲೆಸ್ಟೋನ್ 1.8 ಕೋಟಿಗೆ ಗುಜರಾತ್ ವಾರಿಯರ್ಸ್ ತಂಡ ಕೂಡಿಕೊಂಡಿದ್ದರೆ, ನ್ಯೂಜಿಲೆಂಡ್‍ನ ಸ್ಟಾರ್ ಆಟಗಾರ್ತಿ ಸೋಫಿಯಾ ಡಿವೇನ್ ತಮ್ಮ ಮೂಲ ಬೆಲೆಗೆ ಆರ್‍ಸಿಬಿ ತಂಡದ ಪಾಲಾಗಿದ್ದಾರೆ.
ಹರಾಜಿನಲ್ಲಿ ಪ್ರತಿ ತಂಡಕ್ಕೂ 12 ಕೋಟಿ ಖರ್ಚು ಮಾಡಲು ಅವಕಾಶ ನೀಡಿದ್ದು, ಪ್ರತಿ ತಂಡವು 15 ರಿಂದ 18 ಆಟಗಾರ್ತಿಯರನ್ನು ಹೊಂದಿರಬೇಕು, ಅದರಲ್ಲಿ 6 ವಿದೇಶಿ ಆಟಗಾರ್ತಿಯರು ಪ್ರತಿ ತಂಡದಲ್ಲಿ ಗುರುತಿಸಿಕೊಳ್ಳಬಹುದು.
#WPLAuction2023, #RoyalChallengers, #Bidding,