ತಾಯ್ನಾಡಿಗೆ ಹಿಂತಿರುಗಿದ ವಿನೇಶ್‌ ಫೋಗಟ್‌ಗೆ ಅಭೂತಪೂರ್ವ ಸ್ವಾಗತ

ನವದೆಹಲಿ, ಆ.17 (ಪಿಟಿಐ) ಒಲಿಂಪಿಕ್ಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಕೇವಲ 100 ಗ್ರಾಂ ದೇಹ ತೂಕದಿಂದ ಪ್ರಶಸ್ತಿಯಿಂದ ವಂಚಿತರಾಗಿ ಇಂದು ತಾಯ್ನಾಡಿಗೆ ಹಿಂತಿರುಗಿದ ಖ್ಯಾತ ಕುಸ್ತಿಪಟು ವಿನೇಶ್‌ ಫೋಗಟ್‌ ಅವರಿಗೆ ಅಭೂತಪೂರ್ವ ಸ್ವಾಗತ ಕೋರಲಾಯಿತು. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಜರಂಗ್‌ ಪುನಿಯಾ, ಸಾಕ್ಷಿ ಮಲಿಕ್‌ ಮತ್ತು ಪಂಚಾಯತ್‌ ನಾಯಕರು ವಿನೇಶ್‌ ಅವರನ್ನು ಆತೀಯವಾಗಿ ಬರಮಾಡಿಕೊಂಡರು. ನಂತರ ಅವರನ್ನು ತೆರೆದ ಜೀಪಿನಲ್ಲಿ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು. ತಮನ್ನು ಅಭೂತಪೂರ್ವವಾಗಿ ಸ್ವಾಗತಿಸಿದ ಬೆಂಬಲಿಗರಿಗೆ ಫೋಗಟ್‌ ಧನ್ಯವಾದ ಅರ್ಪಿಸಿದರು. 100 … Continue reading ತಾಯ್ನಾಡಿಗೆ ಹಿಂತಿರುಗಿದ ವಿನೇಶ್‌ ಫೋಗಟ್‌ಗೆ ಅಭೂತಪೂರ್ವ ಸ್ವಾಗತ