ಅಯೋಧ್ಯೆ,ಜ.22- ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ, ಹಣಕಾಸಿನ ಅಕ್ರಮಗಳು ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾಗಿರುವ ಅಖಿಲ ಭಾರತೀಯ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್ಐ) ತುರ್ತು ಸಾಮಾನ್ಯ ಸಭೆ ರದ್ದುಗೊಂಡಿದೆ.
ಕೇಂದ್ರ ಸರ್ಕಾರದ ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸೂಚನೆಯ ಮೇರೆಗೆ ಡಬ್ಲ್ಯುಎಫ್ಐ ಎಲ್ಲಾ ಚಟುವಟಿಕೆಗಳು ಅಮಾನತುಗೊಂಡಿವೆ. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ನಡೆಯಬೇಕಿದ್ದ ತುರ್ತು ಸಾಮಾನ್ಯ ಸಭೆ ರದ್ದುಗೊಂಡಿದೆ.
ಫೆಡರೇಶನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಭದ್ರಕೋಟೆಯಾಗಿರುವ ಉತ್ತರ ಪ್ರದೇಶದ ಗೊಂಡಾದಲ್ಲಿ ಆಯೋಜಿಸಲಾಗಿದ್ದ ರ್ಯಾಂಕಿಂಗ್ ಟೂರ್ನಮೆಂಟ್ ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ತಕ್ಷಣ ಸ್ಥಗಿತಗೊಳಿಸುವಂತೆ ಸಚಿವಾಲಯ ಸೂಚನೆ ನೀಡಿದೆ.
ಜೆಡಿಎಸ್ ಸ್ವಂತಬಲದ ಮೇಲೆ ಅಧಿಕಾರ ಹಿಡಿಯಲು ಬೆಂಬಲ ನೀಡಿ: ನಿಖಿಲ್
ಅಧ್ಯಕ್ಷ ಬ್ರಿಜ್ಭೂಷಣ್ಸಿಂಗ್ ಮತ್ತು ತರಬೇತುದಾರರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡುವುದು ಮತ್ತು ಸರ್ವಾಕಾರಿಯಂತೆ ವರ್ತಿಸುತ್ತಾರೆ ಎಂದು ಆರೋಪಿಸಿ ಕುಸ್ತಿಪಟುಗಳಾದ ವಿನೇಶ್ ಫೋಗಟ್, ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ರವಿ ದಹಿಯಾ ಸೇರಿದಂತೆ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಕಳೆದ ವಾರ ಮೂರು ದಿನ ಧರಣಿ ಸತ್ಯಾಗ್ರಹ ನಡೆಸಿದರು.
ಕಾಂಗ್ರೆಸ್ಗೆ ಹೊಡೆತ ಕೊಡುವುದೇ ನಾಯಕರ ಸ್ವಯಂ ವೈಭವೀಕರಣ ಪೈಪೋಟಿ
ಫೆಡರೇಷನ್ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ಅವರನ್ನು ನಿನ್ನೆ ಅಮಾನತುಗೊಳಿಸಲಾಯಿತು. ಫೆಡರೇಷನ್ನ ದೈನಂದಿನ ವ್ಯವಹಾರಗಳಿಂದ ದೂರವಿರಲು ಅಧ್ಯಕ್ಷರಿಗೆ ಸಚಿವಾಲಯ ಸೂಚನೆ ನೀಡಿದೆ. ಆದರೂ ಅವರು ಶನಿವಾರ ನಂದಿನಿ ನಗರದಲ್ಲಿ ನಡೆದ ಕುಸ್ತಿ ಕಾರ್ಯಕ್ರಮದಲ್ಲಿ ಹಾಜರಿದ್ದರು. ಆರೋಪಗಳ ತನಿಖೆಗೆ ಇಂದು ಸಮಿತಿ ರಚನೆ ಮಾಡುವ ಸಾಧ್ಯತೆಗಳಿವೆ.
Wrestling, Federation, India, emergency, general council, meeting,