“ಹೆಂಡ್ತಿ ಹೊಡೀತಾಳೆ ಪ್ಲೀಸ್ ಹೆಲ್ಪ್ ಮಾಡಿ” : ಪ್ರಧಾನಿ ಮೊರೆಹೋದ ಗಂಡ..!

Social Share

ಬೆಂಗಳೂರು,ನ.1- ನನ್ನ ಪತ್ನಿ ನನಗೆ ಪ್ರಾಣ ಬೆದರಿಕೆ ಹಾಕಿದ್ದಾಳೆ. ಆಕೆಯಿಂದ ನನಗೆ ರಕ್ಷಣೆ ಕೊಡಿಸಿ ಎಂದು ಇಲ್ಲೊಬ್ಬ ಮಹಾನುಭಾವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊರೆ ಹೋಗಿದ್ದಾನೆ.

ಯದುನಂದನ್ ಆಚಾರ್ಯ ಎಂಬಾತ ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯಕ್ಕೆ ಟ್ವಿಟ್ ಮಾಡಿ ನನ್ನ ಪತ್ನಿಯಿಂದ ನನಗೆ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿಕೊಂಡಿರುವುದೆ ಅಲ್ಲದೆ ತನ್ನ ಟ್ವಿಟ್ ಅನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್‍ರೆಡ್ಡಿ, ಕೇಂದ್ರ ಸಚಿವ ಕಿರಣ್ ರಿಜಿಜು ಅವರಿಗೂ ಟ್ಯಾಗ್ ಮಾಡಿದ್ದಾರೆ.

ನನ್ನ ಪತ್ನಿ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ. ನನ್ನನ್ನು ಕಾಪಾಡಿ ನನಗೆ ಯಾರು ಸಹಾಯ ಮಾಡ್ತಿಲ್ಲ. ಯಾಕೆ ಎಂದರೆ ನಾನೊಬ್ಬ ಪುರುಷ. ಒಬ್ಬ ಮಹಿಳೆ ನನ್ನ ಮೇಲೆ ದಾಳಿ ಮಾಡಿರುವುದೇನಾ ನಾರಿಶಕ್ತಿ ಎಂದು ಆತ ಟ್ವಿಟರ್‍ನಲ್ಲಿ ಪ್ರಶ್ನಿಸಿದ್ದಾರೆ.

ಚಾಕು ಇರಿತದಿಂದ ನನ್ನ ಕೈಯಲ್ಲಿ ರಕ್ತ ಬರ್ತಿದೆ. ನನ್ನ ಪತ್ನಿ ವಿರುದ್ಧ ಗೃಹ ಹಿಂಸೆ ಕೇಸ್ ದಾಖಲಿಸುವ ಮೂಲಕ ಆಕೆಯ ವಿರುದ್ಧ ಪ್ರಕರಣ ದಾಖಲಿಸಲು ಸಹಕರಿಸಿ ಎಂದೂ ಆತ ಮನವಿ ಮಾಡಿಕೊಂಡಿದ್ದಾನೆ.
ಯದುನಂದನ್ ಟ್ವಿಟ್‍ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಠಾಣೆಗೆ ಬಂದು ದೂರು ನೀಡಿದರೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರಂತೆ.

ಪತ್ನಿ ಕಾಟದಿಂದ ಬೇಸತ್ತು ಪ್ರಧಾನಿ ಕಾರ್ಯಲಯಕ್ಕೆ ಟ್ವಿಟ್ ಮಾಡಿರುವ ಯದುನಂದನ್ ಅವರಿಗೆ ಪತ್ನಿಯರಿಂದ ನೊಂದಿರುವ ಹಲವಾರು ಮಂದಿ ಬೆಂಬಲ ವ್ಯಕ್ತಪಡಿಸಿರುವುದು ಗಮನ ಸೆಳೆದಿದೆ.

Articles You Might Like

Share This Article