ನಾಲಿಗೆ ಕಟ್ ಮಾಡಬೇಕಾಗುತ್ತೆ ಹುಷಾರ್ : ಯತ್ನಾಳ್‌ಗೆ ನಿರಾಣಿ ವಾರ್ನಿಂಗ್

Social Share

ಬೆಂಗಳೂರು,ಜ.14- ಇನ್ನು ಮುಂದೆ ನಾಲಿಗೆ ಹರಿಬಿಟ್ಟು ಮಾತನಾಡಿದರೆ ನಾಲಿಗೆ ಕತ್ತರಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಪರೋಕ್ಷವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಬಹಿರಂಗ ಎಚ್ಚರಿಕೆ ನೀಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ರೇಸ್ಕೋರ್¸

ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರದವರು ಒಬ್ಬರಿದ್ದಾರೆ. ಅವರು ಎಲುಬಿಲ್ಲದ ನಾಲಿಗೆ ಇಲ್ಲದೆ ಮಾತನಾಡುತ್ತಿದ್ದಾರೆ. ಅಪ್ಪನಿಗೆ ಹುಟ್ಟಿದವರು ಈ ರೀತಿ ಮಾತನಾಡುವುದಿಲ್ಲ ಎಂದು ಗುಡುಗಿದರು.

ಪದೇ ಪದೇ ಒಬ್ಬರನ್ನು ಹಿಯಾಳಿಸಿ ಮಾತನಾಡುವುದು, ಬಾಯಿಗೆ ಬಂದಂತೆ ಟೀಕೆ ಮಾಡುವುದು ಅವರಿಗೆ ಅಭ್ಯಾಸವಾಗಿಬಿಟ್ಟಿದೆ. ಬಾಯಿ ಮುಚ್ಚಿಕೊಂಡು ಸುಮ್ಮನಿದ್ದರೆ ಒಳ್ಳೆಯದು. ಇಲ್ಲದಿದ್ದರೆ ನಾವು ಕೂಡ ಅದೇ ದಾಟಿಯಲ್ಲಿ ಮಾತನಾಡಬೇಕಾಗುತ್ತದೆ. ನಾಲಿಗೆ ಉದ್ದ ಇದೆ ಎಂದು ಚಾಚಿದರೆ ಕತ್ತರಿಸುವ ಕೆಲಸವೂ ನಮಗೆ ಗೊತ್ತಿದೆ ಎಂದು ಎಚ್ಚರಿಕೆ ಕೊಟ್ಟರು.

ಪಿಂಪ್ ಬಗ್ಗೆ ಮಾತನಾಡುವ ಕೆಲಸ ಮಾಡಿದ್ದಾರೆ. ಆ ಸಂಸ್ಕೃತಿಯಲ್ಲಿ ಇದ್ದವರೇ ಈ ರೀತಿ ಮಾತನಾಡುವುದು. ಒಳ್ಳೆಯ ಕುಟುಂಬದ ಹಿನ್ನಲೆ, ಸಂಸ್ಕಾರದಿಂದ ಬಂದವರು ಈ ರೀತಿ ಮಾತನಾಡುವುದಿಲ್ಲ ಎಂದು ಕಿಡಿಕಾರಿದರು.

ಬಿಜೆಪಿಗೆ ಬಂದ ಮೇಲೆ ಮುಸ್ಲಿಂರ ವಿರುದ್ಧ ಮಾತನಾಡುವುದು, ಹಿಂದುತ್ವದ ಬಗ್ಗೆ ಮಾತನಾಡುವುದು ಇವರಿಗೆ ಛಾಳಿಯಾಗಿದೆ. ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮೇಲೆ ಆ ಪಕ್ಷದ ಶಿಸ್ತು ಚೌಕಟ್ಟಿಗೆ ಬದ್ದರಾಗಿರಬೇಕು ಎಂದರು.
ಜೆಡಿಎಸ್ಗೆ ಹೋದಾಗ ಟಿಪ್ಪು ಟೋಪಿ ಹಾಕುತ್ತಾರೆ. ಬಿಜೆಪಿಗೆ ಬಂದಾಗ ಅದೇ ಟಿಪ್ಪು ಟೋಪಿಯನ್ನು ವಿರೋಸುತ್ತಾರೆ. ಇವರಿಗೆ ಯಾವ ಬದ್ದತೆ ಇದೆ.

ಹೃದಯಘಾತದಿಂದ ಸಂಸದ ಸಾವು, ಭಾರತ್ ಜೋಡೋ ಯಾತ್ರೆ ಸ್ಥಗಿತ

ಇಂಥವರಿಂದ ನಾವು ನೈತಿಕತೆ ಪಾಠ ಕಲಿಯಬೇಕೆ ಎಂದು ಪ್ರಶ್ನಿಸಿದರು. ಇನ್ನೊಬ್ಬರ ಚಾರಿತ್ರ್ಯ ಬಗ್ಗೆ ಮಾತನಾಡುವ ಈ ಮಹಾನುಭಾವರು ನ್ಯಾಯಾಲಯದಲ್ಲಿ ಏಕೆ ತಡೆಯಾಜ್ಞೆ ತಂದಿದ್ದಾರೆ? ತಾಕತ್ತಿದ್ದರೆ ಮೊದಲು ತಡೆಯಾಜ್ಞೆಯನ್ನು ತೆರವುಗೊಳಿಸಲಿ ಎಂದು ಸವಾಲು ಹಾಕಿದರು.

ಯಾರ ಬಗ್ಗೆಯೂ ವೈಯಕ್ತಿಕವಾಗಿ ನಿಂದನೆ ಮಾಡುವುದು ಶೋಭೆ ತರುವುದಿಲ್ಲ. ಸ್ಥಾನಮಾನಕ್ಕೆ ತಕ್ಕಂತೆ ಗೌರವ ಕೊಟ್ಟು ಮಾತನಾಡುವುದನ್ನು ಕಲಿಯಲಿ. ಒಂದು ವೇಳೆ ಆಗದಿದ್ದರೆ ಪಕ್ಷ ಬಿಟ್ಟು ಹೋಗಲು ಸ್ವತಂತ್ರರು ಎಂದು ಹೇಳಿದರು.

ನಾವು ಪಕ್ಷದ ನಿಯಮವನ್ನು ಮೀರಿ ಮಾತನಾಡಬಾರದು. ಪಕ್ಷ ತಾಯಿ ಸಮಾನ. ಎಷ್ಟೇ ಅಸಮಾಧಾನವಿದ್ದರೂ ಬಾಯಿ ಮುಚ್ಚಿಕೊಂಡು ಇರಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ. ಒಂದು ವೇಳೆ ಪಕ್ಷದಲ್ಲಿರಲು ಸಾಧ್ಯವಿಲ್ಲ ಎಂದಾದರೆ ರಾಜೀನಾಮೆ ಕೊಟ್ಡು ಹೊರಗೆಹೋಗಿ ಪ್ರತಿಭಟನೆ ಮಾಡಲಿ ಎಂದು ಸಚಿವ ನಿರಾಣಿ ಯತ್ನಾಳ್ಗೆ ಸವಾಲು ಹಾಕಿದರು.

ಕೆಲವರು ತಾವು ಮಾಡಿದ್ದೇ ಸರಿ ಎಂದು ಭಾವಿಸಿದ್ದಾರೆ. ರಾಜಕೀಯದಲ್ಲಿ ಇವೆಲ್ಲ ಬಹಳ ದಿನ ನಡೆಯುವುದಿಲ್ಲ. ಈ ದೊಂಬರಾಟಕ್ಕೆ ವಿಜಯಪುರದ ಜನ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.

ವೀರಶೈವ, ಲಿಂಗಾಯತ ಸಮುದಾಯಕ್ಕೆ 2ಎ ಕೊಡಬೇಕೆಂಬ ಬೇಡಿಕೆ ಇಂದು, ನೆನ್ನೆಯದಲ್ಲ. ಈ ಹೋರಾಟದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರು ತಮ್ಮ ಅಧಿಕಾರಅವಯಲ್ಲಿ ಸಚಿವ ಸಂಪುಟ ಉಪಸಮಿತಿಯನ್ನು ರಚಿಸಿದ್ದರು.

ಅದರ ಪ್ರತಿಫಲವಾಗಿಯೇ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಲು ಸೂಚನೆ ಕೊಟ್ಟಿದ್ದರು. ಆದರೆ ಅವರ ವಿರುದ್ಧವೂ ಕೆಲವರು ಅಪಪ್ರಚಾರ ನಡೆಸುತ್ತಿದ್ದಾರೆ. ಅವರು ಎಂದೂ ಕೂಡ ಮೀಸಲಾತಿ ನೀಡಲು ವಿರೋಧಿಸಿಲ್ಲ. ಇದು ಕೆಲವರು ಸೃಷ್ಟಿಸಿರುವ ಷಡ್ಯಂತ್ರ ಎಂದು ನಿರಾಣಿ ಅಸಮಾಧಾನ ಹೊರಹಾಕಿದರು.

ಆಗ ಜಾತಿ ಕಾಲಮ್ನಲ್ಲಿ ತರಬೇಕು ಎಂದು 3ಎ ಗೆ ತರಲಾಗಿತ್ತು. ಈ ಗಣ್ಯಾತಿಗಣ್ಯರಿಗೆ ಇಷ್ಟು ದಿನ 2ಎ ಬಗ್ಗೆ ಗೊತ್ತಿರಲಿಲ್ಲ. 2016ರಲ್ಲಿ ಕಾಂತರಾಜು ವರದಿ ಕೊಡುತ್ತಾರೆ. 2ಎ ಮೀಸಲಾತಿ ಕೊಡಲು ಬರುವುದಿಲ್ಲ ಎಂದು ಹೇಳಿದ್ದರು. ಇಂದು ಹೋರಾಟ ಮಾಡುವವರು ಅಂದು ಎಲ್ಲಿ ಮಲಗಿದ್ದೀರಿ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬದ್ದತೆಯಿದೆ. 2ಸಿ, 2ಡಿ ಮರುಸ್ಥಾಪನೆ ಮಾಡಿ ಮೀಸಲಾತಿ ಹೆಚ್ಚಿಸಲು ಸರ್ಕಾರ ಮುಂದಾಗಿದೆ. ಇಡಬ್ಲ್ಯುಎಸ್ನಡಿ 4-5% ಮಾತ್ರ ಬರುತ್ತದೆ, ಉಳಿದಿದ್ದನ್ನು ಸಮುದಾಯಕ್ಕೆ ನೀಡುವ ನಿರ್ಧಾರವನ್ನು ಸಿಎಂ ಮಾಡಿದ್ದರು ಎಂದು ಹೇಳಿದರು.

ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಲಿದೆ. ಈಗ ಮೀಸಲಾತಿ ಘೋಷಣೆಯಿಂದ ಯಾವುದೇ ಸಮುದಾಯಕ್ಕೆ ಅನ್ಯಾಯವಾಗುವುದಿಲ್ಲ. ಇಷ್ಟೆಲ್ಲಾ ಮಾಡಿದರೂ ಕೂಡ ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯೇ ಎಂದು ನಿರಾಣಿ ಪ್ರಶ್ನಿಸಿದರು.

#Yatnal, #MurugeshNirani,

Articles You Might Like

Share This Article