ಯಶಸ್ವಿನಿ ಯೋಜನೆಯಡಿ 30 ಲಕ್ಷ ಸದಸ್ಯರ ನೋಂದಣಿ ಗುರಿ

Social Share

ಬೆಂಗಳೂರು, ಡಿ.27- ಯಶಸ್ವಿನಿ ಯೋಜನೆಯಡಿ ಸಹಕಾರ ಸಂಘಗಳ 30 ಲಕ್ಷ ಸದಸ್ಯರನ್ನು ನೋಂದಾವಣಿ ಮಾಡುವ ಗುರಿ ಇದೆ. ಗುರಿ ತಲುಪದೇ ಇದ್ದಲ್ಲಿ ನೋಂದಣಿ ಅಧಿವಯನ್ನು ವಿಸ್ತರಣೆ ಮಾಡುವ ಕುರಿತು ಪರಿಶೀಲನೆ ನಡೆಸುವುದಾಗಿ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.

ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿ, ಯಶಸ್ವಿನಿ ಯೋಜನೆಯ ನೋಂದಣಿ ಅವಧಿಯನ್ನು ವಿಸ್ತರಣೆ ಮಾಡಿ, ಎಸ್‍ಸಿ ಮತ್ತು ಎಸ್‍ಟಿ ಸಮುದಾಯಕ್ಕೆ ನೋಂದಣಿ ಶುಲ್ಕ ವಿನಾಯಿತಿ ನೀಡಿರುಂತೆ, ಮಾಜಿ ಸೈನಿಕರಿಗೂ ವಿನಾಯಿತಿ ನೀಡಿ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮೀಣ ಭಾಗದಲ್ಲಿ ರೈತರು ಒಂದಲ್ಲ ಒಂದು ಸಹಕಾರ ಸಂಘದಲ್ಲಿ ಸದಸ್ಯರಾಗಿರುತ್ತಾರೆ. 30 ಸಾವಿರಕ್ಕಿಂತ ಹೆಚ್ಚಿನ ವೇತನ ಪಡೆಯುವವ ನೌಕರರಿದ್ದರೆ ಅನ್ವಯವಾಗುತ್ತಿರಲಿಲ್ಲ. ನಿಯಮ ತಿದ್ದುಪಡಿ ಮಾಡಿ ಸರಿ ಪಡಿಸಲಾಗುಗಿದೆ.

ಸಂವಿಧಾನ ಧಾರ್ಮಿಕ ಪುಸ್ತಕ ಎಂಬಂತೆ ನಾವು ನಡೆದುಕೊಳ್ಳುತ್ತಿದ್ದೇವೆ : ಕೇಂದ್ರ ಸಚಿವ

ಯೋಜನೆಯಡಿ ಒಟ್ಟು 30 ಲಕ್ಷ ಸದಸ್ಯರನ್ನು ನೋಂದಾವಣೆ ಮಾಡುವ ಗುರಿಯಿದೆ. ನಿನ್ನೆಯವರೆಗೂ 19,67,287 ಮಂದಿ ಸದಸ್ಯರಾಗಿದ್ದಾರೆ. ನವೆಂಬರ್‍ರಿಂದ ನೋಂದಣಿ ಆರಂಭವಾಗಿದೆ ಡಿಸೆಂಬರ್ 31ರವರೆಗೆ ಸಮಯವಿದೆ. ಅವ ವಿಸ್ತರಣೆ ಕುರಿತು ಪರಿಶೀಲಿಸಲು ಇನ್ನೂ ಸಮಯವಿದೆ. 30 ಲಕ್ಷ ಗುರಿ ತಲುಪದ್ದಿರೆ ಯೋಜನೆಗಾಗಿ ರಚಿಸಿರುವ ಸಮಿತಿ ಅವಧಿ ವಿಸ್ತರಣೆ ಮಾಡಲು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿದೆ. ಸರ್ಕಾರ ಅದಕ್ಕೆ ಪೂರಕವಾಗಿ ಸ್ಪಷ್ಟ ಸೂಚನೆ ನೀಡಲಿದೆ ಎಂದರು.

ಮಗಳ ಅಶ್ಲೀಲ ವಿಡಿಯೋ ಮಾಡಿದ್ದನ್ನು ಪ್ರಶ್ನಿಸಿದ ಯೋಧನನ್ನು ಕೊಂದ ಕಿರಾತಕರು

ಈ ಯೋಜನೆ ನಿರ್ದಿಷ್ಟವಾಗಿ ಸಹಕಾರ ಸಂಘಗಳ ಸದಸ್ಯರಿಗೆ ಎಲ್ಲರಿಗೂ ವಿಸ್ತರಣೆ ಮಾಡಲು ಸಾಧ್ಯವಿಲ್ಲ. ಯೋಜನೆಯಡಿ ಸದಸ್ಯರಿಗೆ ಉಚಿತ ಚಿಕಿತ್ಸೆ ನೀಡಲು 660 ಆಸ್ಪತ್ರೆಗಳನ್ನು ಸಂಪರ್ಕಿಸಲಾಗಿದೆ. 330 ಆಸ್ಪತ್ರೆಗಳ ಜೊತೆ ಈಗಾಗಲೇ ಒಪ್ಪಂದವಾಗಿದೆ. ಮತ್ತಷ್ಟು ಆಸ್ಪತ್ರೆಗಳ ಜೊತೆ ಒಪ್ಪಂದವಾಗಲಿದೆ ಎಂದರು.

Yeshaswini, Health Scheme, Minister, ST Somashekar,

Articles You Might Like

Share This Article