ರಸ್ತೆ ಗುಂಡಿ ಮುಚ್ಚಲು PWD ಅಧಿಕಾರಿಗಳ ರಜೆ ರದ್ದುಗೊಳಿಸಿ ಆದೇಶ

Social Share

ಲಖ್ನೋ,ನ.1- ರಾಜ್ಯದ ರಸ್ತೆಗಳನ್ನು ಗುಂಡಿ ಮುಕ್ತ ಮಾಡುವಂತೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆದೇಶದ ನೀಡಿರುವ ಹಿನ್ನಲೆಯಲ್ಲಿ ಎಲ್ಲಾ ಪಿಡಬ್ಲ್ಯೂಡಿ ಅಧಿಕಾರಿಗಳ ರಜೆಯನ್ನು ಮುಂದಿನ ತಿಂಗಳು ರದ್ದುಗೊಳಿಸಿ ಆದೇಶಿಸಲಾಗಿದೆ.

ತ್ವರಿತವಾಗಿ ರಸ್ತೆಗುಂಡಿ ಮುಚ್ಚುವ ಕೆಲಸ ಮಾಡಬೇಕಾಗಿರುವುದರಿಂದ ಯಾವುದೇ ಪಿಡಬ್ಲ್ಯುಡಿ ಅಕಾರಿಗಳಿಗೆ ಮುಂದಿನ ತಿಂಗಳು ರಜೆ ಮಂಜೂರು ಮಾಡಬಾರದು ಎಂದು ರಾಜ್ಯ ಸರ್ಕಾರ ಎಲ್ಲ ಮುಖ್ಯ ಎಂಜಿನಿಯರ್‍ಗಳಿಗೆ ಸೂಚನೆ ನೀಡಿದೆ.

ಯಾವುದೇ ಪಿಡಬ್ಲ್ಯುಡಿ ಅಕಾರಿಗಳು ಅನಿವಾರ್ಯ ಸಂದರ್ಭಗಳಲ್ಲಿ ರಜೆ ತೆಗೆದುಕೊಳ್ಳಲು ಅಗತ್ಯಬಿದ್ದರೆ ಅದರ ಅನುಮೋದನೆಗಾಗಿ ಪ್ರಧಾನ ಕಚೇರಿಗೆ ಕಳುಹಿಸಲಾಗುತ್ತದೆ.

ಪ್ರತಿ ದಿನ ರಾಜ್ಯ ಸರ್ಕಾರಕ್ಕೆ ಪ್ರಗತಿ ವರದಿ ಕಳುಹಿಸುವಂತೆ ಎಲ್ಲ ಜಿಲ್ಲೆಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಪ್ರಾದೇಶಿಕ ಮುಖ್ಯ ಇಂಜಿನಿಯರ್‍ಗಳು ಕಾಮಗಾರಿಯ ಪ್ರಗತಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪ್ರತಿದಿನ ವರದಿ ನೀಡಬೇಕು.

“ಹೆಂಡ್ತಿ ಹೊಡೀತಾಳೆ ಪ್ಲೀಸ್ ಹೆಲ್ಪ್ ಮಾಡಿ” : ಪ್ರಧಾನಿ ಮೊರೆಹೋದ ಗಂಡ..!

10 ದಿನಗಳಲ್ಲಿ ಎಲ್ಲಾ ವಲಯಗಳಲ್ಲಿ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಲು ಕೇಂದ್ರ ಕಚೇರಿ ಮಟ್ಟದಿಂದ ಹಲವಾರು ತಂಡಗಳನ್ನು ಕಳುಹಿಸಲಾಗುವುದು.

Articles You Might Like

Share This Article