ಮಾಗಡಿ,ಡಿ.7- ಪ್ರೀತಿಸಿದ ಹುಡುಗಿ ಸಿಗುವುದಿಲ್ಲ ಎಂದು ಮನನೊಂದು ಯುವಕ ನೇಣಿಗೆ ಶರಣಾಗಿರುವ ಘಟನೆ ದೊಡ್ಡಸೋಮನಹಳ್ಳಿಯಲ್ಲಿ ನಡೆದಿದೆ. ನೇಣಿಗೆ ಶರಣಾದ ಯುವಕನನ್ನು ಮೋಹನ್ ಕುಮಾರ್.ಆರ್(29) ಎಂದು ಗುರುತಿಸಲಾಗಿದೆ.
ಕಳೆದ ಮೂರು ವರ್ಷಗಳಿಂದಲೂ ಹೊಸಪಾಳ್ಯದ ದ್ವಿತೀಯ ಬಿ.ಕಾಂ. ವಿದ್ಯಾರ್ಥಿನಿಯನ್ನು ಪ್ರೀತಿಸುತ್ತಿದ್ದ. ಹುಡುಗಿಯ ತಾಯಿಯೇ ಮುಂದೆ ನಿಂತು ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಬೇರೆ ಹುಡುಗನಿಗೆ ಮದುವೆ ಮಾಡಿಕೊಡುವ ವಿಚಾರ ತಿಳಿದು ಮನನೊಂದು ಹುಡುಗಿಯ ಮನೆಯ ಬಳಿ ಮರಕ್ಕೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೂ ಮುನ್ನ ಮೃತನು ಡೆತ್ ನೋಟ್ ಬರೆದಿಟ್ಟು, ಅದರಲ್ಲಿ ಹಲವರ ಹೆಸರನ್ನು ಬರೆದಿಟ್ಟಿದ್ದಾನೆ.
ಮದುವೆ ಖರ್ಚಿಗೆ ಎಂದು ಹುಡಗಿಯ ಅಕೌಂಟ್‍ಗೆ 2ಲಕ್ಷ ರೂ. ಹುಡುಗಿಯ ತಾಯಿ ಅಕೌಂಟ್‍ಗೆ 5 ಲಕ್ಷ ಒಟ್ಟು 7 ರೂ.ಲಕ್ಷ ಹಣ ಜಮಾ ಮಾಡಿರುವುದಾಗಿ ಹೇಳಲಾಗಿದೆ.ದುಬಾರಿ ಮೊಬೈಲ್‍ಗಳನ್ನು ಎಗರಿಸುತ್ತಿದ್ದ ನಾಲ್ವರ ಬಂಧನ
ನನ್ನ ಮೊಬೈಲ್‍ನಲ್ಲಿನ ವಿರಗಳನ್ನು ಪರಿಶೀಲಿಸಿ ನನ್ನ ಸಾವಿಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮುಂದೆ ಇನ್ನು ಯಾವ ಯುವಕನಿಗೂ ಈ ರೀತಿ ವಂಚನೆ ಆಗಬಾರದು ಎಂದು ಡೆತ್ ನೋಟ್‍ನಲ್ಲಿ ಬರೆದುಕೊಂಡಿದ್ದಾನೆ. ಮಾಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಹಾರಾಷ್ಟ್ರ – ಕರ್ನಾಟಕ ನಡುವೆ ಬಸ್ ಸೇವೆ ಬಂದ್
young, man, committed, suicide, Magadi,